AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ: ಫಯಾಜ್ ತಂದೆ ತಾಯಿ ವಿರುದ್ಧ ದೂರು ಕೊಡ್ತೀನಿ ಅರೆಸ್ಟ್​ ಮಾಡಿ ಎಂದ ನೇಹಾ ತಂದೆ

ನೇಹಾ ಹತ್ಯೆಗೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಯೊಂದಿಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ನೇಹಾ ತಂದೆ ನಿರಂಜನ್​ ಹಿರಮೇಠ, ‘ಸಾಮಾಜಿಕ ಜಾಲಾತಣದಲ್ಲಿ ಮಗಳ ಫೊಟೋಗಳನ್ನ ಹಾಕುತ್ತಿದ್ದಾರೆ. ನನ್ನ ಮಗಳಿಗೆ ಫಯಾಜ್ ಅಕ್ಕ , ಅವರ ತಂದೆ-ತಾಯಿ ಪ್ರವೋಕ್ ಮಾಡಿದ್ದಾರೆ. ಹೀಗಾಗಿ ನಾನು ದೂರು ಕೊಡ್ತೀನಿ ಎಂದಿದ್ದಾರೆ.

ಹುಬ್ಬಳ್ಳಿ: ಫಯಾಜ್ ತಂದೆ ತಾಯಿ ವಿರುದ್ಧ ದೂರು ಕೊಡ್ತೀನಿ ಅರೆಸ್ಟ್​ ಮಾಡಿ ಎಂದ ನೇಹಾ ತಂದೆ
ಮೃತ ನೇಹಾ ತಂದೆ
ಶಿವಕುಮಾರ್ ಪತ್ತಾರ್
| Updated By: ಕಿರಣ್ ಹನುಮಂತ್​ ಮಾದಾರ್|

Updated on:Apr 20, 2024 | 10:00 PM

Share

ಹುಬ್ಬಳ್ಳಿ, ಏ.20: ನೇಹಾ ಹತ್ಯೆಗೆ ಸಂಬಂಧಿಸಿದಂತೆ ಫಯಾಜ್ ತಂದೆ-ತಾಯಿ ಇಬ್ಬರನ್ನು ಅರೆಸ್ಟ್ ಮಾಡಿ, ನಾನು ಅವರ ವಿರುದ್ದ ದೂರು ಕೊಡುತ್ತೇನೆ ಎಂದು ನೇಹಾ ತಂದೆ ನಿರಂಜನ್​ ಹಿರಮೇಠ ಹೇಳಿದರು. ಮಾಧ್ಯಮ ಪ್ರತಿನಿಧಿಯೊಂದಿಗೆ ಹುಬ್ಬಳ್ಳಿ (Hubballi)ಯಲ್ಲಿ ಮಾತನಾಡಿದ ಅವರು, ‘ಸಾಮಾಜಿಕ ಜಾಲಾತಣದಲ್ಲಿ ಮಗಳ ಫೊಟೋಗಳನ್ನ ಹಾಕುತ್ತಿದ್ದಾರೆ. ನನ್ನ ಮಗಳಿಗೆ ಫಯಾಜ್ ಅಕ್ಕ , ಅವರ ತಂದೆ-ತಾಯಿ ಪ್ರವೋಕ್ ಮಾಡಿದ್ದಾರೆ. ಹೀಗಾಗಿ ನಾನು ದೂರು ಕೊಡ್ತೀನಿ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಪೋಟೋಗಳು ಕಾಲೇಜ್ ಫಂಕ್ಷನ್, ಇವೆಂಟ್​ನಲ್ಲಿ ಭಾಗಿಯಾಗಿದ್ದು, ಅದನ್ನ ಈಗ ವೈರಲ್​ ಮಾಡುತ್ತಿದ್ದಾರೆ. ಪೊಲೀಸರು ಇದನ್ನು ಗಮನಿಸಬೇಕು. ಕೂಡಲೇ ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಜೊತೆಗೆ ಫಯಾಜ್ ತಂದೆ-ತಾಯಿ ಇಬ್ಬರು ಕೂಡ ಶಿಕ್ಷಕರು, ಸಣ್ಣ ಮಕ್ಜಳಿಗೆ ಪಾಠ ಮಾಡುವವರು ನನ್ಮ ಮಗಳ ಬ್ರೇನ್ ವಾಶ ಮಾಡಲು ಹೇಳಿದ್ದಾರೆ. ಬಂದ್ರೆ ಕರೆದುಕೊಂಡು ಬಾ,ಇಲ್ಲದಿದ್ದರೆ ಹೊಡೆದು ಬಾ ಎಂದು ಅವರೇ ಹೇಳಿದ್ದಾರೆ. ಹೀಗಾಗಿ ಅವರು ತಂದೆ-ತಾಯಿಯನ್ನು ಅರೆಸ್ಟ್ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ:ನೇಹಾ ತಂದೆ ನಿರಂಜನ್ ಹಿರೇಮಠ ನಿವಾಸಕ್ಕೆ ಮುಸ್ಲಿಂ ಮುಖಂಡರ ಭೇಟಿ

ನೇಹಾಗೆ ನಡೆದಿತ್ತಾ ಲವ್ ಜಿಹಾದ್ ಷಡ್ಯಂತ್ರ?

ನೇಹಾಗೆ ಲವ್ ಜಿಹಾದ್ ಷಡ್ಯಂತ್ರ ನಡೆದಿತ್ತಾ?, ಈ ಷಡ್ಯಂತದಲ್ಲಿ ಫಯಾಜ್ ಕುಟುಂಬದವರು ಪಾಲುದಾರರು ಆಗಿದ್ರಾ ಎಂಬ ಪ್ರಶ್ನೆಯೂ ಮೂಡಿದ್ದು, ಫಯಾಜ್ ಅಕ್ಕ ನಿಶಾ ಅವರು ನೇಹಾ ಜೊತೆ ಮಾಡಿರುವ ಜೊತೆ ಚಾಟಿಂಗ್ ಸಾಕ್ಷಿ ಹೇಳುತ್ತಿವೆ. ಫಯಾಜ್‌ನನ್ನ ಮದುವೆ ಆಗುವಂತೆ ಸಹೋದರಿ ನಿಶಾ ಒತ್ತಾಯಿಸಿರುವುದು ಚಾಟಿಂಗ್‌ನಲ್ಲಿ ಬಯಲಾಗಿದೆ. ಜೊತೆಗೆ ಕಳೆದ ಫೆಬ್ರವರಿಯಲ್ಲಿಯೇ ಬೇಗ ಮದುವೆ ಮಾಡಿಕೊಳ್ಳಿ ಎಂದು ಫಯಾಜ್‌ ಸಹೋದರಿ ನೇಹಾಗೆ ಹೇಳಿದ್ದು, ನೀ ಸ್ಟ್ರಾಂಗ್ ಆಗಿ ಇರು ಎಂದು ಸಂದೇಶ ಕಳಿಸಿದ್ದಾರೆ. ಮದುವೆ ಆದ್ರೆ ನೀವು ಚೆನ್ನಾಗಿ ಇರುತ್ತಿರಿ ಎಂದು ಫಯಾಜ್ ಸಹೋದರಿ ನೇಹಾ ತಲೆ ಕೆಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ ಮನೆಯಲ್ಲಿ ಮದುವೆ ಪ್ರಪೋಜಲ್ ತಂದಿದ್ದಾರೆ, ಮದುವೆಗೆ ಒತ್ತಾಯ ಮಾಡುತ್ತಿದ್ದಾರೆ, ಜೀವನ ಸಾಕಾಗಿದೆ ಎಂದು ನೇಹಾ ಗೋಳು ತೋಡಿಕೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:00 pm, Sat, 20 April 24