ಹುಬ್ಬಳ್ಳಿ, ಏ.21: ನೇಹಾ ಕೊಲೆ ಪ್ರಕರಣ ಇದೀಗ ರಾಜ್ಯಾದ್ಯಂತ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ಆರೋಪಿಗೆ ಕಠಿಣ ಶಿಕ್ಷೆ ಕೊಡಬೇಕೆಂದು ಎಲ್ಲೆಡೆ ಕೂಗು ಕೇಳಿಬರುತ್ತಿದ್ದು, ಇಂದು(ಏ.21) ಹುಬ್ಬಳ್ಳಿ(Hubli) ಯಲ್ಲಿ ಬಂದ್ಗೆ ಕರೆ ನೀಡಲಾಗಿತ್ತು. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi), ‘ನೇಹಾಳನ್ನು ಆರೋಪಿ ಫಯಾಜ್ ಮತಾಂತರ ಮಾಡಲು ಯತ್ನಿಸಿದ್ದ. ಅದಕ್ಕೆ ನೇಹಾ ವಿರೋಧಿಸಿ, ಆತನಿಂದ ದೂರವಾದಳು. ಇದೇ ಕಾರಣಕ್ಕೆ ಫಯಾಜ್ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದರು.
ಇನ್ನು ಮೃತ ನೇಹಾ ತಂದೆಗೆ ಬೆದರಿಕೆ ಕರೆಗಳು ಬರುತ್ತಿವೆ. ಇದಕ್ಕೆ ಸರಕಾರದ ಅಸಡ್ಡೆಯೇ ಕಾರಣ ಎಂದು ನಿರಂಜನ ಅವರೇ ನನ್ನ ಮುಂದೆ ಹೇಳಿದ್ದಾರೆ. ಇಂಥಹ ಅನೇಕ ವಿಚಾರಗಳನ್ನು ನನ್ನ ಬಳಿ ಹೇಳಿದ್ದಾರೆ. ಆದರೆ, ಇಲ್ಲಿ ಅವನ್ನೆಲ್ಲ ಹೇಳಲು ಆಗೋದಿಲ್ಲ. ಒಂದು ಹುಡುಗಿಯ ಜೀವ ಹೋಗಿದೆ. ಅವರ ಮನೆಯವರು ತೀವ್ರ ದುಃಖದಲ್ಲಿದ್ದಾರೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.
ಇದನ್ನೂ ಓದಿ:ಮದುವೆಗಾಗಿ ಫಯಾಜ್ ನಮಗೆ ಪೀಡಿಸುತ್ತಿದ್ದ, ಮಗಳಿಗೆ ಜೀವ ಬೆದರಿಕೆ ಹಾಕಿದ್ದ: ನೇಹಾ ತಂದೆ
ಫೋಟೋ ವೈರಲ್ ಆದ ವಿಚಾರ, ‘ ಫೋಟೋಗಳನ್ನು ಪೊಲೀಸರೇ ವೈರಲ್ ಮಾಡಿದ್ದು, ಸರಕಾರವೇ ಮುಂದೆ ನಿಂತು ವೈರಲ್ ಮಾಡಿದೆ. ಅವನ ಫೋನ್ ಪೊಲೀಸರ ಕೈಯಲ್ಲಿದೆ. ಸರಕಾರ ಇಂಥಹ ಚಿಲ್ಲರೆ ರಾಜಕಾರಣ ಮಾಡೋದಾ?, ಯಾರು ತಪ್ಪು ಮಾಡಿದ್ದಾರೋ ಒದ್ದು ಒಳಗೆ ಹಾಕಬೇಕು. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ನಿಷ್ಪಕ್ಷಪಾತವಾದ ತನಿಖೆ ಮಾಡಿಸಬೇಕು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ