Sign In

By signing in or creating an account, you agree with Associated Broadcasting Company's Terms & Conditions and Privacy Policy.

KIADB ಮತ್ತೊಂದು ಹಗರಣ: ಸತ್ತವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ಹೊಡೆದಿದ್ದಾರಂತೆ! ಸಿಐಡಿ, ರಾಜ್ಯ ಸರ್ಕಾರ ಸೈಲೆಂಟ್

ಯಾವುದೇ ಅಧಿಕಾರಿಯ ನಿವೃತ್ತಿಯ ದಿನಾಂಕ ಸಮೀಪಕ್ಕೆ ಬಂದಾಗ, ಮಹತ್ವದ ದಾಖಲೆಗಳ ಮೂವ್ ಮಾಡೋಕೆ ಬರೋದೆ ಇಲ್ಲ. ಆದರೆ ಇಲ್ಲಿ ಪ್ರಮುಖ ಆರೋಪಿ ವಿ.ಡಿ. ಸಜ್ಜನ್ ನಿವೃತ್ತಿಯ ಕೊನೆಯ 6 ತಿಂಗಳ ಅವಧಿಯಲ್ಲಿ 506 ಕಡತಗಳಿಗೆ ಭೂ ಪರಿಹಾರ ಹಂಚಿಕೆ ಮಾಡಿ, 138 ಕೋಟಿ ರೂಪಾಯಿ ಆರ್.ಟಿ.ಜಿ.ಎಸ್. ಮಾಡಿದ್ದಾರೆ.

KIADB ಮತ್ತೊಂದು ಹಗರಣ: ಸತ್ತವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ಹೊಡೆದಿದ್ದಾರಂತೆ! ಸಿಐಡಿ, ರಾಜ್ಯ ಸರ್ಕಾರ ಸೈಲೆಂಟ್
ಸತ್ತವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ಹೊಡೆದಿದ್ದಾರಂತೆ!
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಸಾಧು ಶ್ರೀನಾಥ್​

Updated on: Jan 29, 2024 | 12:53 PM

ಧಾರವಾಡ ಕೆಐಎಡಿಬಿ ಕಚೇರಿಯಲ್ಲಿ (Karnataka Industrial Areas Development Board KIADB) ನಡೆದಿರೋ ನಕಲಿ ರೈತರ ಹೆಸರಿನ ನಕಲಿ ಭೂಸ್ವಾಧೀನ ಪ್ರಕರಣದ ಕೋಟ್ಯಾಂತರ ರೂಪಾಯಿ ಲೂಟಿಯ ಬ್ರಹ್ಮಾಂಡ ಭ್ರಷ್ಟಾಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಾ ಹೊರಟಿದೆ. ಸಿಐಡಿ ತನಿಖೆಯಲ್ಲಿ 20 ಕೋಟಿ ರೂಪಾಪಯಿಯ ಅಕ್ರಮದ್ದು ಮಾತ್ರವೇ ತನಿಖೆ ನಡೆದಿರುವಾಗ, ಅದಕ್ಕೂ ಮೀರಿ ಸತ್ತವರ ಹೆಸರಿನ ಮೇಲೆ ನಕಲಿ ಖಾತೆ ಸೃಷ್ಟಿಸಿ ಹಣ ಹೊಡೆದಿರೋ ಅಕ್ರಮ ಈಗ ಬಯಲಾಗಿದೆ. ಆ ಕುರಿತ ವರದಿಯೊಂದು ಇಲ್ಲಿದೆ…

ಧಾರವಾಡ ಕೆಐಎಡಿಬಿಯಲ್ಲಿ ನಕಲಿ ರೈತರ ಖಾತೆಗಳನ್ನು ಸೃಷ್ಟಿಸಿ, ನಕಲಿ ಭೂಸ್ವಾಧೀನ ನಡೆಸಿ, ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು ಹಾಗೂ ಬ್ಯಾಂಕ್ ಸಿಬ್ಬಂದಿ ಶಾಮೀಲಾಗಿ, ಕೋಟ್ಯಾಂತರ ರೂಪಾಯಿ ಲೂಟಿ ಹೊಡೆದಿದ್ದರು. ಈ ಪ್ರಕರಣದ ಬಗ್ಗೆ ಜನಜಾಗೃತಿ ಸಂಘ ಹೋರಾಟ ಮಾಡಿದ ಫಲವಾಗಿ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಸಿಐಡಿ ಅಧಿಕಾರಿಗಳು ಒಟ್ಟು 19 ಕೋಟಿ 55 ಲಕ್ಷ 90 ಸಾವಿರ ರೂಪಾಯಿ ನಕಲಿ ಖಾತೆಗಳಿಗೆ ಹಣ ಹಾಕಿ ಲೂಟಿ ಮಾಡಿರೋದನ್ನು ತನಿಖೆ ಮಾಡಿ, ಇಲಾಖೆಯ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿ ನಿವೃತ್ತರಾಗಿದ್ದ ವ್ಹಿ. ಡಿ. ಸಜ್ಜನ್ ಸೇರಿ ಅನೇಕ ಅಧಿಕಾರಿಗಳನ್ನೇ ಜೈಲಿಗಟ್ಟಿದ್ದಾರೆ.

ಈಗ ಇದೇ ಅಧಿಕಾರಿಗಳು ಸತ್ತವರ ಹೆಸರಿನ ಮೇಲೆಯೂ ನಕಲಿ ಖಾತೆಗಳನ್ನು ಸೃಷ್ಟಿಸಿ ಹಣ ಹೊಡೆದಿರೋದನ್ನು ಜನಜಾಗೃತಿ ಸಂಘ ಬಯಲು ಮಾಡಿದೆ. ಅದರಲ್ಲಿಯೂ ಹುಬ್ಬಳ್ಳಿಯಲ್ಲಿ ಕೆಲವರ ಜಮೀನು ವಿಮಾನ ನಿಲ್ದಾಣಕ್ಕೆ ಹೋಗಿತ್ತು. ಅದರಲ್ಲಿ 2010ರಲ್ಲಿಯೇ ರೈತರಿಗೆ ಹಣ ಕೊಟ್ಟಿದ್ದರು. ಆದರೆ ಈಗ 2020ರಲ್ಲಿ ಇಲ್ಲಿನ ಕೆಲ ರೈತರ ಹೆಸರಿನ ಮೇಲೆ ನಕಲಿ ಖಾತೆ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಡ್ರಾ, ಮಾಡಿಕೊಂಡಿದ್ದಾರೆ. ಅದೇ ರೈತರ ಕೆಲ ಸಂಬಂಧಿಗಳು ನಿಧನರಾಗಿದ್ದರು. ಅವರ ನಂತರ ಅವರು ಜೀವಂತ ಇದ್ದಾರೆ ಅಂತಾ ತೋರಿಸಿ ಹಣ ಹೊಡೆದಿದ್ದು ಬಯಲಿಗೆ ಬಂದಿದೆ.

ಇನ್ನು ಯಾವುದೇ ಅಧಿಕಾರಿಯ ನಿವೃತ್ತಿಯ ದಿನಾಂಕ ಸಮೀಪಕ್ಕೆ ಬಂದಾಗ, ಮಹತ್ವದ ದಾಖಲೆಗಳನ್ನು ಮೂವ್ ಮಾಡೋಕೆ ಬರೋದೆ ಇಲ್ಲ. ಆದರೆ ಇಲ್ಲಿ ಪ್ರಮುಖ ಆರೋಪಿಯಾಗಿರುವ ವಿ.ಡಿ. ಸಜ್ಜನ್ ನಿವೃತ್ತಿಯ ಕೊನೆಯ 6 ತಿಂಗಳ ಅವಧಿಯಲ್ಲಿ 506 ಕಡತಗಳಿಗೆ ಭೂ ಪರಿಹಾರ ಹಂಚಿಕೆ ಮಾಡಿ, 138 ಕೋಟಿ ರೂಪಾಯಿ ಆರ್.ಟಿ.ಜಿ.ಎಸ್. ಮಾಡಿದ್ದಾರೆ.

Also Read: Kolar Lakes: ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಮನಸೋಇಚ್ಛೆ ಕೆರೆಗಳನ್ನು ಬಗೆಯುತ್ತಿರುವ ಹೈವೇ ಗುತ್ತಿಗೆದಾರರು

ಅದರಲ್ಲಿಯೂ ಈಗ 40 ಕೋಟಿ ರೂಪಾಯಿ ಅಕ್ರಮವಾಗಿ ಹಣ ವರ್ಗಾವಣೆ ಆಗಿದೆ ಅನ್ನೋದನ್ನು ಹೋರಾಟಗಾರರು ಪತ್ತೆ ಮಾಡಿದ್ದಾರೆ. ಆದರೆ ಇದನ್ನೆಲ್ಲ ಸರಿಯಾಗಿ ತನಿಖೆ ಮಾಡಬೇಕಿದ್ದ ಸಿಐಡಿ ಮಾತ್ರ ಕೆಲವರನ್ನು ಬಚಾವ್ ಮಾಡುವ ಕೆಲಸ ಮಾಡಿದೆ ಅನ್ನೋದು ಹೋರಾಟಗಾರರ ಆರೋಪ.

ಸಿಐಡಿಗಿಂತ ಮೊದಲು ಇದೇ ಜನಜಾಗೃತಿ ಸಂಘದ ಹೋರಾಟದ ಮೇರೆಗೆ ಸರ್ಕಾರ ಇಲಾಖೆಯ ಹಿರಿಯ ಅಧಿಕಾರಿಗಳಿಂದಲೂ ತನಿಖೆ ಕೈಗೊಂಡಿತ್ತು. ಅಲ್ಲಿಯೂ ಸಹ ಪ್ರಮುಖ ಕಡತಗಳ ಹಾಗೂ ನಕಲಿ ಬ್ಯಾಂಕ್ ಖಾತೆಗಳ ಸಮರ್ಪಕ ತನಿಖೆಯೂ ಆಗಿಲ್ಲವಂತೆ. ಹೀಗಾಗಿ ಈ ಇಡೀ ಪ್ರಕರಣವನ್ನು ಎಸ್ ಐ ಟಿ ಇಲ್ಲವೇ ಸಿಬಿಐಗೆ ಒಪ್ಪಿಸಬೇಕು. ಇಲ್ಲದೇ ಹೋದಲ್ಲಿ ನಾವು ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಅನ್ನೋ ಎಚ್ಚರಿಕೆ ನೀಡಿದ್ದಾರೆ.

ಇದೀಗ ಈ ಪ್ರಕರಣದಲ್ಲಿ ಸಿಐಡಿ ವರ್ತನೆ ಬೇಲಿಯೆ ಎದ್ದು ಹೊಲ ಮೇಯ್ದಂತೆ ಆಗಿದೆ. ಇಲ್ಲಿ ಸರ್ಕಾರದ ಹಣವನ್ನು ಸರ್ಕಾರಿ ಅಧಿಕಾರಿಗಳೇ ಭರ್ಜರಿ ಲೂಟಿ ಮಾಡಿದ್ದು, ಸಾರ್ವಜನಿಕ ಸಂಘಟನೆಗಳು ಹೋರಾಟ ಮಾಡಿದಾಗಲೇ ಬಹಿರಂಗಗೊಂಡಿದೆ.

ಇಷ್ಟೆಲ್ಲ ಆದ ಬಳಿಕವೂ ಸರ್ಕಾರ ಮಾತ್ರ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಇದನ್ನೆಲ್ಲ ನೋಡಿದರೆ, ಇದರಲ್ಲಿರೋರ ಕೈಗಳು ಮೇಲ್ಮಟ್ಟದವರೆಗೂ ಇದ್ದೆ ಇರುತ್ತೆ ಅನ್ನೋ ಸಂಶಯ ಮೂಡೋಕೆ ಶುರುವಾಗಿದೆ. ಇದೀಗ ಹೋರಾಟಗಾರರು ಕಾನೂನು ಹೋರಾಟ ಆರಂಭಿಸೋಕೆ ಮುಂಚೆಯೇ ಸರ್ಕಾರ ಎಚ್ಚೆತ್ತುಕೊಳ್ಳುತ್ತಾ? ಅನ್ನೋದನ್ನು ಕಾದು ನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ