KIADB: ಧಾರವಾಡದ ಕೆಐಎಡಿಬಿ ಕಚೇರಿಯೊಳಗೆ ಹೋದರೆ ಸಾಕು ಭ್ರಷ್ಟಾಚಾರದ ಘಾಟು ಮೂಗಿಗೆ ಬಡಿಯುತ್ತೆ! ಏನ್ಮಾಡೋದು?

Dharwad: ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಇದರಲ್ಲಿ ಐಎಎಸ್ ಅಧಿಕಾರಿ, ಕೆಐಎಡಿಬಿಯ ಸಿಇಒ, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರ ಆಪ್ತ ಕಾರ್ಯದರ್ಶಿ ಸೇರಿದಂತೆ ಅನೇಕರು ಶಾಮೀಲಾಗಿದ್ದಾರೆ ಅಂತಾ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ್ ಆರೋಪಿಸಿದ್ದಾರೆ.

KIADB: ಧಾರವಾಡದ ಕೆಐಎಡಿಬಿ ಕಚೇರಿಯೊಳಗೆ ಹೋದರೆ ಸಾಕು ಭ್ರಷ್ಟಾಚಾರದ ಘಾಟು ಮೂಗಿಗೆ ಬಡಿಯುತ್ತೆ! ಏನ್ಮಾಡೋದು?
ಧಾರವಾಡದ ಕೆಐಎಡಿಬಿ ಕಚೇರಿಯೊಳಗೆ ಹೋದರೆ ಸಾಕು ಭ್ರಷ್ಟಾಚಾರದ ಘಾಟು ಮೂಗಿಗೆ ಬಡಿಯುತ್ತೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 30, 2022 | 1:45 PM

ಕೆಐಎಡಿಬಿ ಸಂಸ್ಥೆಗೂ ಅಕ್ರಮಕ್ಕೂ ದೊಡ್ಡ ನಂಟೇ ಇರುವಂತೆ ಕಾಣುತ್ತೆ. ಅದರಲ್ಲೂ ಧಾರವಾಡದ ಕೆಐಎಡಿಬಿ (Karnataka Industrial Areas Development Board -KIADB) ಅಂದರೆ ಸಾಕು ಬ್ರಹ್ಮಾಂಡ ಭ್ರಷ್ಟಾಚಾರವೇ ಕಣ್ಣಮುಂದೆ ಬರುತ್ತೆ. ಅದಾಗಲೇ ಒಂದು ಬಾರಿ ಪರಿಹಾರದ (compensation) ಮೊತ್ತವನ್ನು ಪಡೆದಿದ್ದ ರೈತರ ಖಾತೆಗೆ (Dharwad farmers) ಇದೀಗ ಎರಡನೇ ಬಾರಿಯೂ ಅಕ್ರಮವಾಗಿ ಹಣ ಬಿಡುಗಡೆ ಮಾಡಿರೋ ಆರೋಪ ಕೇಳಿ ಬಂದಿದೆ. ಕೋಟಿ ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ಹೊಡೆಯೋದ್ರಲ್ಲಿ ಅತಿರಥ ಮಹಾರಥರೇ ಶಾಮೀಲಾಗಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ಅದು ಧಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ಕಚೇರಿ. ಆ ಕಚೇರಿಯೊಳಗೆ ಹೋದರೆ ಸಾಕು ಭ್ರಷ್ಟಾಚಾರದ ವಾಸನೆಯ ಘಾಟು ಬಂದೇ ಬಿಡುತ್ತೆ. ಇದೀಗ ಈ ಕಚೇರಿಯಲ್ಲಿ ನಡೆದಿರೋ ದೊಡ್ಡದೊಂದು ಭ್ರಷ್ಟಾಚಾರ ಬಯಲಿಗೆ ಬಂದಿದೆ. 2010 ರಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯ ಪರಿಹಾರ ಮೊತ್ತದಲ್ಲಿ ಈಗಾಗಲೇ ರೈತರಿಗೆ ಪಾವತಿಸಿರುವ ಮೊತ್ತವನ್ನು ಮತ್ತೆ 2022 ರಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಮತ್ತೆ ಹೊಡೆಯಲಾಗಿದೆ. ಇದೀಗ 21 ಕೋಟಿ 14 ಲಕ್ಷ 78 ಸಾವಿರದ 468 ರೂಪಾಯಿ ಮೊತ್ತವನ್ನು ಹಲವಾರು ರೈತರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆಗೆದು ಆರ್ ಟಿ ಜಿ ಎಸ್ ಮೂಲಕ ಎರಡನೇ ಬಾರಿಗೆ ಜಮಾ ಮಾಡಿಸಿಕೊಳ್ಳಲಾಗಿದೆ.

ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಆಗಿನ ಧಾರವಾಡದ ವಿಶೇಷ ಭೂಸ್ವಾಧೀನಾಧಿಕಾರಿ ವಿ.ಡಿ. ಸಜ್ಜನ್ ಅವರ ಅವಧಿಯಲ್ಲಿ ಎಪ್ರಿಲ್ 2021ರಿಂದ ಎಪ್ರಿಲ್ 2022 ರ ವರೆಗೆ ಅಂದಾಜು 140 ಕೋಟಿ ಅನುದಾನ ಬಿಡುಗಡೆ ಆಗಿದೆ. ಹೀಗಾಗಿ ಇದರಲ್ಲಿ ಐಎಎಸ್ ಅಧಿಕಾರಿ ಹಾಗೂ ಕೆಐಎಡಿಬಿಯ ಸಿಇಒ ಎನ್. ಶಿವಶಂಕರ್, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರ ಆಪ್ತ ಕಾರ್ಯದರ್ಶಿ ದಯಾನಂದ ಭಂಡಾರಿ ಸೇರಿದಂತೆ ಅನೇಕರು ಶಾಮೀಲಾಗಿದ್ದಾರೆ ಅಂತಾ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ್ ಆರೋಪಿಸಿದ್ದಾರೆ.

ಇನ್ನು ಈ ಹಗರಣದಲ್ಲಿ ಬ್ಯಾಂಕ್ ಅಧಿಕಾರಿಗಳು ಕೂಡ ಸಾಥ್ ನೀಡಿರೋ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಏಕೆಂದರೆ ಇಷ್ಟೊಂದು ಮೊತ್ತದ ಹಣ ವರ್ಗಾವಣೆ ಆಗಲು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಈ ಅನುಮಾನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಈ ಭ್ರಷ್ಟಾಚಾರವೆಸಗಿದ ಎಲ್ಲರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಪ್ರಕರಣದ ತನಿಖೆಯನ್ನು ಸಿಬಿಐ ನೀಡುವಂತೆ ಆಗ್ರಹಿಸಲಾಗಿದೆ.

ಈಗಾಗಲೇ ಧಾರವಾಡದ ವಿಶೇಷ ಭೂ ಸ್ವಾಧೀನಧಿಕಾರಿ ವಿ.ಡಿ. ಸಜ್ಜನ್ ವಿರುದ್ದ ಅಕ್ಕಮ್ಮ ಪೂಜಾರ ಅನ್ನೋ ಮಹಿಳೆ ಖೊಟ್ಟಿ ದಾಖಲೆ ಸೃಷ್ಟಿಸಿರುವುದಕ್ಕಾಗಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಹೀಗಾಗಿ ಇಷ್ಟೊಂದು ದೊಡ್ಡ ಮೊತ್ತವನ್ನು ದೋಚೋ ಮೂಲಕ ರಾಜ್ಯ ಸರಕಾರದ ಬೊಕ್ಕಸಕ್ಕೆ ಇವರೆಲ್ಲಾ ಸೇರಿ ನಷ್ಟವುಂಟು ಮಾಡಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನ್ಯಾಯವಾದಿ ಐ.ಕೆ. ಧರಣಗೌಡ್ರು ಆಗ್ರಹಿಸಿದ್ದಾರೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ರೈತರ ವಿವರವಾದ ಮಾಹಿತಿಯನ್ನು ನೋಡುವುದಾದರೆ :

land acquisition by KIADB Illegally Double Payment to Dharwad farmers

ರೈತ 1) ಮುರಳೀಧರ್ ಜಾಹಗೀರದಾರ್:

ಧಾರವಾಡ ತಾಲೂಕಿನ ಕೆಲಗೇರಿ ಗ್ರಾಮದ ಮುರಳೀಧರ ತಂದೆ ಶ್ರಿನಿವಾಸರಾವ್ ಜಾಹಗೀರದಾರ 06.09.2012 ರಂದು ಸರ್ವೇ ನಂಬರ 713/2 ರಲ್ಲಿ 15 ಎಕರೆ 33 ಗುಂಟೆ ಜಮೀನಿಗೆ ಚೆಕ್ ನಂ.572482 ರಲ್ಲಿ 4 ಕೋಟಿ 11 ಲಕ್ಷ 45 ಸಾವಿರ ಪರಿಹಾರ ಪಡೆದುಕೊಂಡಿದ್ದರು. ಇದೀಗ ಮತ್ತೆ ಅವರ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ದಿನಾಂಕ 31.01.2022 ರಂದು ಆರ್ ಟಿ ಜಿ ಎಸ್ ನಂ 332 ಮೂಲಕ ಹುಬ್ಬಳ್ಳಿಯ ಐಡಿಬಿಐ ಬ್ಯಾಂಕ್ ಖಾತೆಯ ಮೂಲಕ ಮತ್ತೆ ಹಣ ಬಿಡುಗಡೆ ಮಾಡಿಸಿಕೊಳ್ಳಲಾಗಿದೆ…

ರೈತ 2 ) ಮಿತ್ರಗೌಡ ಪಾಟೀಲ:

ಧಾರವಾಡ ತಾಲೂಕಿನ ಮಿತ್ರಗೌಡ ಪಾಟೀಲ, ಸರ್ವೆ ನಂ 707 ರಲ್ಲಿ 9 ಎಕರೆ 27 ಗುಂಟೆ ಜಮಿನಿಗೆ 2 ಕೋಟಿ 51 ಲಕ್ಷ 55 ಸಾವಿರ ಮೊತ್ತವನ್ನ 2012 ರಲ್ಲಿ ಪರಿಹಾರವನ್ನ‌ ಪಡೆದುಕೊಂಡಿದ್ದಾರೆ. ಆದರೆ ಮತ್ತೆ ಅದೇ ರೈತನ ಹೆಸರಿನಲ್ಲಿ 01.04.2022 ರಲ್ಲಿ ಮತ್ತೆ‌ 2 ಕೋಟಿ 51 ಲಕ್ಷ 55 ಸಾವಿರ ಹಣವನ್ನ ಆರ್ ಟಿ ಜಿ ಎಸ್ ನಂ.5 ರ ಮೂಲಕ ಮತ್ತೆ ಪಡೆಯಲಾಗಿದೆ…

ರೈತ 3) ಬಸಪ್ಪ ನಾಗಪ್ಪ ಶಿರೂರ:

ಧಾರವಾಡ ತಾಲೂಕಿನ ಕೆಲಗೇರಿ ಗ್ರಾಮದ ರೈತ ಬಸಪ್ಪ ನಾಗಪ್ಪ ಶಿರೂರು ಅವರ ಸರ್ವೆ ನಂ 709 ರ 3 ಎಕರೆ ಜಮಿನಿಗೆ 22.05.2012 ರಲ್ಲಿ ಚೆಕ್ ನಂ 599409 ರ ಮುಖಾಂತರ 78 ಲಕ್ಷ ಪರಿಹಾರ ಬಿಡುಗಡೆಯಾಗಿದೆ. ಆದರೆ ಮತ್ತೆ ಅದೇ ರೈತನ ಹೆಸರಲ್ಲಿ 19.04.2022 ರಲ್ಲಿ ಆರ್ ಟಿ ಜಿ ಎಸ್ ನಂ. 12 ರ ಮುಖಾಂತರ ಮತ್ತೆ ಮುಮ್ಮಿಗಟ್ಟಿಯ ಕೆವಿಜಿ ಬ್ಯಾಂಕ್ ನಲ್ಲಿ ಹಣ ಬಿಡುಗಡೆಯಾಗಿದೆ…

ರೈತ 4) ಸಂಜಯ ಬಾಬಾಸಾಹೇಬ್ ದೇಸಾಯಿ:

ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಸಂಜಯ್ ಬಾಬಾಸಾಹೇಬ್ ದೇಸಾಯಿ ಅವರ ಸರ್ವೆ ನಂ. 150 ರಲ್ಲಿ ಬರುವ 12 ಎಕರೆ 9 ಗುಂಟೆ ಜಮೀನಿಗೆ 25.07.2012 ರಲ್ಲಿ ಚೆಕ್ ನಂ 572241 ಮುಖಾಂತರ 3 ಕೋಟಿ 32 ಲಕ್ಷ 43 ಸಾವಿರ 438 ರೂಪಾಯಿ ಬಿಡುಗಡೆಯಾಗಿರುತ್ತದೆ. ಮತ್ತೆ 28.02.2022 ರಲ್ಲಿ ಆರ್ ಟಿ ಜಿ ಎಸ್ ನಂ 392 ರ ಮುಖಾಂತರ ಐಡಿಬಿಐ ಬ್ಯಾಂಕ್ ಹುಬ್ಬಳ್ಳಿಯ ಬ್ಯಾಂಕ್ ನಲ್ಲಿ ಅದೇ ರೈತನ ಹೆಸರಲ್ಲಿರೋ ಖಾತೆಗೆ ಹಣ ಸಂದಾಯವಾಗಿದೆ…

ರೈತ 5) ವರುಣಕುಮಾರ ಆವಾಸಾಹೇಬ್ ದೇಸಾಯಿ:

ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ವರಣಕುಮಾರ ಆವಾಸಾಹೇಬ್ ದೇಸಾಯಿ ಅವರ ಹೇಸರಿನ ಸರ್ವೆ ನಂ. 40/1 ರಲ್ಲಿಯ 10 ಎಕರೆ 28 ಗುಂಟೆ ಜಮೀನಿಗೆ 04.01.2017 ರಲ್ಲಿ 1 ಕೋಟಿ 39 ಲಕ್ಷದ 10 ಸಾವಿರ ರೂಪಾಯಿ ಹಣವನ್ನ ಬಿಡುಗಡೆಯಾಗಿರುತ್ತದೆ. ಮತ್ತೆ ಇದೇ ಸರ್ವೆ ನಂಬರ್ ಗೆ ಮಾಲಿಕನ ಹೆಸರು ಬದಲಾಯಿಸಿ ಶಾಂತಾಬಾಯಿ ಖಾನಾಪೂರ ಅಂತ ಸೃಷ್ಟಿ ಮಾಡಿ ದಿನಾಂಕ 10.02.2022 ರಲ್ಲಿ ಆರ್ ಟಿ ಜಿ ಎಸ್ ನಂ.357 ರ ಮುಖಾಂತರ ಮತ್ತೆ 57,61,734 ರೂಪಾಯಿ ಬಿಡುಗಡೆ ಮಾಡಿಕೊಳ್ಳಲಾಗಿದೆ…

ರೈತ 6) ಇಮಾಮಸಾಬ್ ನಬೀಸಾಬ್ ಶಿರೂರು:

ಧಾರವಾಡ ತಾಲೂಕಿನ ಕೋಟೂರು ಗ್ರಾಮದ ಇಮಾಮ್ ಸಾಬ್ ನಬೀಸಾಬ್ ಕೋಟೂರು ಹೆಸರಿನ ಸರ್ವೆ ನಂ.635 ರ 2 ಎಕರೆ 06 ಗುಂಟೆ ಜಮಿನಿಗೆ 13.11.2018 ರಲ್ಲಿ ಪರಿಹಾರ ಆರ್ ಟಿ ಜಿ ಎಸ್ ನಂ.42 ರ ಮುಖಾಂತರ 64,50,000 ಹಣ ಬಿಡುಗಡೆಯಾಗಿರುತ್ತದೆ. ಆದರೆ ಮತ್ತೆ ಇದೆ ಮಾಲ್ಕಿ‌ ಹೆಸರಿನಲ್ಲಿ ಮೆಹಬೂಬ್ ಸುಬಾನಿ ಶಿರೂರು ಎಂಬುವರ ಹೆಸರು ಸೃಷ್ಠಿಸಿ ಮತ್ತೆ ಆರ್ ಟಿ ಜಿ ಎಸ್ ನಂ. 42 ರ ಮೂಲಕ ಮತ್ತೆ 30.04.2022 ರಲ್ಲಿ 64,50,000 ಹಣವನ್ನ ಮತ್ತೆ‌ ಜಮಾ ಆಗಿದೆ.

ಹೀಗೆ ಒಟ್ಟು 10 ಜನರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ 21,14,78,468 ರೂಪಾಯಿಯನ್ನು ಹೊಡೆಯಲಾಗಿದೆ. ಇನ್ನು ಈ ಬಗ್ಗೆ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರನ್ನು ಕೇಳಿದರೆ ಈ ಬಗ್ಗೆ ಈಗಾಗಲೇ ತಮಗೆ ದೂರು ಬಂದಿದ್ದು, ತನಿಖೆಯನ್ನು ಕೂಡ ನಡೆಸಲಾಗುತ್ತಿದೆ. ತನಿಖೆಯ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಅಂತಾರೆ.

ಈ ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು, ಕೂಡಲೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಿದೆ. ರೈತರ ಹೆಸರಿನಲ್ಲಿ ಈ ರೀತಿ ಕಳ್ಳಾಟ ಮಾಡಿ, ಕೋಟಿ ಕೋಟಿ ಹಣವನ್ನು ನುಂಗಿದ ಎಲ್ಲರಿಗೂ ಸರಿಯಾದ ಶಾಸ್ತಿಯಾಗಲೇಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇಂಥ ಮತ್ತಷ್ಟು ಪ್ರಕರಣಗಳು ನಡೆಯೋದು ಗ್ಯಾರಂಟಿ. (ವರದಿ: ನರಸಿಂಹ ಮೂರ್ತಿ ಪ್ಯಾಟಿ, ಟಿವಿ 9, ಧಾರವಾಡ)

ಇದನ್ನೂ ಓದಿ: ಕೊಟ್ರಮ್ಮನ ಹೆದ್ದಾರಿ ಸ್ಟೋರಿ: ತನ್ನ ಬೆಳೆಯನ್ನು ನುಂಗುತ್ತಿದ್ದ ಬೃಹತ್ ಲಾರಿಗಳನ್ನು ತಡೆದು ನಿಲ್ಲಿಸಿದ ಏಕಾಂಗಿ ಮಹಿಳೆಯ ಕಥೆ ಇದು!

ಇದನ್ನೂ ಓದಿ: ಸಕ್ಕರೆ ಕಾರ್ಖಾನೆಗಳಿಂದ ಬೆಂಬಲ ಬೆಲೆ ಸಿಗದೆ ಆಲೆಮನೆಗಳತ್ತ ಹೆಜ್ಜೆ ಹಾಕಿದ ರೈತರು – ಕೃಷಿ ಇಲಾಖೆ ಇವರಿಗೆ ನೆರವು ನೀಡುತ್ತದಾ?

Published On - 1:42 pm, Wed, 30 November 22

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?