ಬಿಜೆಪಿಯಲ್ಲೂ ಮೊಳಗಿದ ಸಿಎಂ ಕೂಗು: ಅಶ್ವತ್ಥ್ ನಾರಾಯಣ ರಾಜ್ಯದ ಭಾವಿ ಮುಖ್ಯಮಂತ್ರಿ ಎಂದ ಎಂಎಲ್ಸಿ
ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ರಾಜ್ಯದ ಭಾವಿ ಮುಖ್ಯಮಂತ್ರಿ ಎಂದು ಧಾರವಾಡದಲ್ಲಿ ಬಿಜೆಪಿ ಎಂಎಲ್ಸಿ ಅರುಣ್ ಶಹಾಪುರ ಹೇಳಿದ್ದಾರೆ.
ಧಾರವಾಡ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯಲ್ಲೂ ಮುಂದಿನ ಮುಖ್ಯಮಂತ್ರಿಯ ಕೂಗು ಕೇಳಿಬಂದಿದೆ. ಹೌದು ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ (Ashwath Narayan) ರಾಜ್ಯದ ಭಾವಿ ಮುಖ್ಯಮಂತ್ರಿ ಎಂದು ಧಾರವಾಡದಲ್ಲಿ ಬಿಜೆಪಿ (BJP) ಎಂಎಲ್ಸಿ ಅರುಣ್ ಶಹಾಪುರ (Arun Shahapur) ಹೇಳಿದ್ದಾರೆ. ಕರ್ನಾಟಕ ರಾಜ್ಯದ ಭವಿಷ್ಯ ಅಶ್ವತ್ಥ್ ನಾರಾಯಣ ಕೈಯಲ್ಲಿದೆ. ರಾಜ್ಯಕ್ಕೆ ಅಶ್ವತ್ಥ್ ನಾರಾಯಣ ನೇತೃತ್ವ ಸಿಕ್ಕರೆ ಸುಭಿಕ್ಷೆ ಸಿಕ್ಕಂತೆ ಎಂದು ಹೇಳಿದರು.
ಇದನ್ನೂ ಓದಿ: KIADB: ಧಾರವಾಡದ ಕೆಐಎಡಿಬಿ ಕಚೇರಿಯೊಳಗೆ ಹೋದರೆ ಸಾಕು ಭ್ರಷ್ಟಾಚಾರದ ಘಾಟು ಮೂಗಿಗೆ ಬಡಿಯುತ್ತೆ! ಏನ್ಮಾಡೋದು?
ಧಾರವಾಡದಲ್ಲಿ ನಡೆದ ಅತಿಥಿ ಉಪನ್ಯಾಸಕರ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದ ಅವರು ಅಶ್ವತ್ಥ್ ನಾರಾಯಣ ಈಗಾಗಲೇ ಡಿಸಿಎಂ ಆಗಿದ್ದಾರೆ. ಈಗಾಗಲೇ ಹನ್ನೊಂದು ಹೆಜ್ಜೆ ಆಗಿದೆ, ಇನ್ನೊಂದು ಹೆಜ್ಜೆ ಬಾಕಿಯಿದೆ. ನರೇಂದ್ರ ಮೋದಿ ಕಂಡ ಕನಸನ್ನು ರಾಜ್ಯದಲ್ಲಿ ನನಸು ಮಾಡುತ್ತಿದ್ದಾರೆ. ಹಿಂದಿನ ಸರ್ಕಾರ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಈಗ ರಾಮನಗರ ಅಂದ್ರೆ ಅಶ್ವತ್ಥ್ ನಾರಾಯಣ ಅನ್ನುವಂತಾಗಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ್ ಕ್ಲಿಕ್ ಮಾಡಿ
Published On - 5:45 pm, Wed, 30 November 22