ರಾಜ್ಯದಲ್ಲಿ ಮತ್ತೆ ಲಿಂಗಾಯತ ಸ್ವತಂತ್ರ ಧರ್ಮದ ಕೂಗು: ಸಾಂವಿಧಾನಿಕ ಮಾನ್ಯತೆಗೆ ಮತ್ತೊಮ್ಮೆ ಶಿಫಾರಸ್ಸು ಮಾಡುವಂತೆ ಕೇಂದ್ರಕ್ಕೆ ಒತ್ತಾಯ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 11, 2023 | 2:46 PM

ಕರ್ನಾಟಕದಲ್ಲಿ ಸ್ವತಂತ್ರ ಧರ್ಮದ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಲಿಂಗಾಯತ ಪ್ರತ್ಯೇಕ ಧರ್ಮವನ್ನು ಸಾಂವಿಧಾನಿಕ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಲಾಗುತ್ತಿದೆ.

ರಾಜ್ಯದಲ್ಲಿ ಮತ್ತೆ ಲಿಂಗಾಯತ ಸ್ವತಂತ್ರ ಧರ್ಮದ ಕೂಗು: ಸಾಂವಿಧಾನಿಕ ಮಾನ್ಯತೆಗೆ ಮತ್ತೊಮ್ಮೆ ಶಿಫಾರಸ್ಸು ಮಾಡುವಂತೆ ಕೇಂದ್ರಕ್ಕೆ ಒತ್ತಾಯ
ಪ್ರಾತಿನಿಧಿಕ ಚಿತ್ರ
Image Credit source: naanugauri.com
Follow us on

ಹುಬ್ಬಳ್ಳಿ: ಕರ್ನಾಟಕದಲ್ಲಿ ಸ್ವತಂತ್ರ ಧರ್ಮದ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಲಿಂಗಾಯತ (Lingayats) ಪ್ರತ್ಯೇಕ ಧರ್ಮವನ್ನು ಸಾಂವಿಧಾನಿಕ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಲಾಗುತ್ತಿದೆ. ನ್ಯಾ. ನಾಗಮೋಹನದಾಸ್ ಸಮಿತಿ ವರದಿ ಶಿಫಾರಸು ಮಾಡುವಂತೆ ಆಗ್ರಹಿಸಿದ್ದು, ಈ ಹಿನ್ನೆಲೆ ಫೆ.20ರಂದು ಬೆಂಗಳೂರಿನ ಫ್ರೀಡಂಪಾರ್ಕ್​ನಲ್ಲಿ ಬೃಹತ್ ಹೋರಾಟ ಕೈಗೊಳ್ಳಲಾಗಿದೆ. ಈ ಕುರಿತಾಗಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ, ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ ಆಗ ಕೇಂದ್ರ ಸರ್ಕಾರ ಪ್ರತ್ಯೇಕ ಧರ್ಮ ಮಾನ್ಯತೆಗೆ ಒಪ್ಪಿರಲಿಲ್ಲ ಎಂದು ತಿಳಿಸಿದರು.

ಈಗ ಕೇಂದ್ರ ಮತ್ತು ರಾಜ್ಯದಲ್ಲೂ ಬಿಜೆಪಿಯೇ ಆಡಳಿತದಲ್ಲಿ ಇದೆ. ಹೀಗಾಗಿ ಸಿಎಂ ಬೊಮ್ಮಾಯಿ ಕೇಂದ್ರಕ್ಕೆ ಮತ್ತೆ ಶಿಫಾರಸು ಮಾಡಬೇಕು. ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಅಂತಾ ಘೋಷಿಸಬೇಕು. ಕಲಬುರಗಿ ವಿವಿಗೆ ಬಸವೇಶ್ವರ ವಿವಿ ಅಂತಾ ಮರುನಾಮಕರಣ ಮಾಡಬೇಕು. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ರೆ ಲಕ್ಷಾಂತರ ಲಿಂಗಾಯತ ಧರ್ಮೀಯರು ಶಕ್ತಿ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಚನ್ನಬಸವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಲಿಂಗಾಯತ ಧರ್ಮ ನಮ್ಮ ಅಸ್ಮಿತೆ, ರಾಜಕೀಯ ಬಳಕೆ ಇಲ್ಲ: ಎಂಬಿ ಪಾಟೀಲ

ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವವರಿಗೆ ನಮ್ಮ ಬೆಂಬಲ

ಧೈರ್ಯ ಇದ್ದರೇ ಪಂಚಾಚಾರ್ಯರು ವೀರಶೈವ ಅಂತ ಹೇಳಿಕೊಳ್ಳಲಿ. ಪಂಚಾಚಾರ್ಯರು ಯಾಕೆ ಲಿಂಗಾಯತ ಧರ್ಮಕ್ಕೆ ಗಂಟುಬಿದ್ದಿದ್ದಾರೆ ಎಂದು ಪ್ರಶ್ನಿಸಿದರು. ದೇಶದಲ್ಲಿ ಎಲ್ಲಾ ಜಾತಿಗಳಿಗೆ ನೀಡುವ ಮೀಸಲಾತಿ ತೆಗೆದುಹಾಕಬೇಕು. ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವವರಿಗೆ ನಮ್ಮ ಬೆಂಬಲವಿದೆ. ಎಸ್​ಡಿಪಿಐ, ಎಐಎಂಐಎಂ ಪ್ರಣಾಳಿಕೆಯಲ್ಲಿ ಬೇಡಿಕೆ ನೀಡಿದ್ರೆ ಲಿಂಗಾಯತರು ಬೆಂಬಲಿಸುತ್ತೇವೆ ಎಂದರು.

ಇದನ್ನೂ ಓದಿ: ಸಿಎಂ ಯಡಿಯೂರಪ್ಪ ಬೆಂಬಲಿತ ಲಿಂಗಾಯತ ನಾಯಕರನ್ನು ಕಾಂಗ್ರೆಸ್​ಗೆ ತರಲು ಯತ್ನ: ಮಾಜಿ ಸಚಿವ ಎಂ ಬಿ ಪಾಟೀಲ್

ಭಾರತದಲ್ಲಿರುವ ಎಲ್ಲಾ ಧರ್ಮೀಯರು ಹಿಂದೂಗಳೇ

ಹಿಂದೂ ಎಂಬುವುದು ಒಂದು ಧರ್ಮವಲ್ಲ, ಅದು ವರ್ಗಕ್ಕೆ ಸೀಮಿತವಲ್ಲ. ಭಾರತದಲ್ಲಿರುವ ಎಲ್ಲಾ ಧರ್ಮೀಯರು ಹಿಂದೂಗಳೇ. ಜೈನ, ಬೌದ್ಧ, ಶಿಖ್ ಧರ್ಮಕ್ಕೆ ನೀಡಿದಂತೆ ಪ್ರತ್ಯೇಕ ಧರ್ಮ ಬೇಕು. ಅದೇ ರೀತಿ ನಮಗೂ ಲಿಂಗಾಯತ ಪ್ರತ್ಯೇಕ ಧರ್ಮ ಬೇಕು. ಕಾವಿಧಾರಿಗಳು ಚುನಾವಣೆಗೆ ನಿಲ್ಲಬಾರದೆಂಬ ಯಾವುದೇ ನಿಯಮಗಳಿಲ್ಲ. ಕಾವಿಧಾರಿಗಳು ಬಿಜೆಪಿಗೆ ಸೀಮಿತವಾಗಿಲ್ಲ ಎಂದು ಚನ್ನಬಸವ ಸ್ವಾಮೀಜಿ ಗುಡುಗಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.