ಸಿಎಂ ಯಡಿಯೂರಪ್ಪ ಬೆಂಬಲಿತ ಲಿಂಗಾಯತ ನಾಯಕರನ್ನು ಕಾಂಗ್ರೆಸ್​ಗೆ ತರಲು ಯತ್ನ: ಮಾಜಿ ಸಚಿವ ಎಂ ಬಿ ಪಾಟೀಲ್

ಶಿವಾನುಭವ ಪತ್ರಿಕೆ ಮರುಮುದ್ರಣ ಸಂಬಂಧ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಶಿವಾನುಭವ ಪತ್ರಿಕೆ ಸಂಗ್ರಹಿಸಿ ಮರು ಮುದ್ರಣ ಮಾಡಿ ಪುಸ್ತಕ ಮಾಡುವ ಚಿಂತನೆ ನಡೆಸಿದ್ದೇವೆ. ಬಸವಾದಿ ಶರಣರ ಪುಸ್ತಕಗಳನ್ನು ಕ್ರೋಢೀಕರಿಸಿ ಅಂತಾರಾಷ್ಟ್ರೀಯ ಗ್ರಂಥಾಲಯ ಸ್ಥಾಪಿಸುವ ಚಿಂತನೆಯಿದೆ ಎಂದು ತಿಳಿಸಿದರು.

ಸಿಎಂ ಯಡಿಯೂರಪ್ಪ ಬೆಂಬಲಿತ ಲಿಂಗಾಯತ ನಾಯಕರನ್ನು ಕಾಂಗ್ರೆಸ್​ಗೆ ತರಲು ಯತ್ನ: ಮಾಜಿ ಸಚಿವ ಎಂ ಬಿ ಪಾಟೀಲ್
ಮಾಜಿ ಸಚಿವ ಎಂ.ಬಿ.ಪಾಟೀಲ್ (ಫೈಲ್ ಚಿತ್ರ)
TV9kannada Web Team

| Edited By: guruganesh bhat

Jul 16, 2021 | 3:48 PM

ಬೆಳಗಾವಿ: ಲಿಂಗಾಯತ ಸಮುದಾಯದಲ್ಲಿ ಯಡಿಯೂರಪ್ಪ ಬಹಳ ಎತ್ತರದ ನಾಯಕರು. ಅದಕ್ಕೆ ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೂ ಪ್ರಕಾಶ್ ಹುಕ್ಕೇರಿ, ಎ.ಬಿ.ಪಾಟೀಲ್​ರಂತಹ ಹಿರಿಯ ಲಿಂಗಾಯತ ನಾಯಕರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತ ನಾಯಕರಿಗೆ ಸ್ಥಾನಮಾನ ನೀಡುವ‌ ಬಗ್ಗೆ ಹೈಕಮಾಂಡ್‌ಗೆ ಮನವರಿಕೆ ಮಾಡಿದ್ದೇವೆ. ವೀರೇಂದ್ರ ಪಾಟೀಲ್‌ರಿದ್ದಾಗ ಕಾಂಗ್ರೆಸ್ 180 ಸೀಟ್ ಪಡೆದುಕೊಂಡಿದ್ದೆವು. ವೀರೇಂದ್ರ ಪಾಟೀಲ್‌ರ ಬಳಿಕ ನಮಗೆ ಸ್ವಲ್ಪ ಹಿನ್ನಡೆಯಾಗಿದೆ. ಅದನ್ನು ಮರಳಿ ಪಡೆಯಲು ಹಿರಿಯರ ಮಾರ್ಗದರ್ಶನದಲ್ಲಿ ಎಲ್ಲಾ ನಾಯಕರು ಒಗ್ಗೂಡಿ ಸಾಮೂಹಿಕವಾಗಿ ಪ್ರಯತ್ನ ನಡೆಸುತ್ತೇವೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ (M B Patil) ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಬಲಿತ ಲಿಂಗಾಯತ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಿಶ್ಚಿತವಾಗಿ ಅಂತಹ ನಾಯರನ್ನು ಕಾಂಗ್ರೆಸ್​ಗೆ ಕರೆ ತರುವ ಪ್ರಯತ್ನ ಮಾಡುತ್ತೇವೆ ಎಂದು ರಾಜಕೀಯದ ಮುಂದಿನ ಸಾಧ್ಯತೆಗಳನ್ನು ತೆರೆದಿಟ್ಟರು.

ಇದೇ ವೇಳೆ ಲಿಂಗಾಯತ ಸ್ವತಂತ್ರ ಧರ್ಮದ ಕುರಿತೂ ಪ್ರತಿಕ್ರಿಯಿಸಿದ ಅವರು, ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ನಾವು ಆರಂಭಿಸಿದ್ದಲ್ಲ. 12ನೇ ಶತಮಾನದಲ್ಲೇ ಸ್ವತಂತ್ರ ಧರ್ಮ ಹೋರಾಟ ಶುರುವಾಗಿತ್ತು. ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಇಂದೇ ಹೊಸದಾಗಿ ಚರ್ಚೆ ಮಾಡುತ್ತಿಲ್ಲ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್​ ಬೆಳಗಾವಿಯಲ್ಲಿ ಸ್ಪಷ್ಟಪಡಿಸಿದರು.1938, 1940, 1942ರಲ್ಲಿಯೇ ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಹಿರಿಯರು ಹೋರಾಟ ಆರಂಭಿಸಿದ್ದರು. ಶಿವಾನುಭವ ಪತ್ರಿಕೆ, ಬಸವಾದಿ ಶರಣರ ಲೈಬ್ರರಿ ನಿರ್ಮಾಣ ಬಗ್ಗೆ ಚರ್ಚೆ ನಡೆಸಲಾಗಿತ್ತು. ಲಿಂಗಾಯತ ಸ್ವತಂತ್ರ ಧರ್ಮ ಬಗ್ಗೆ ಮಾತನಾಡಿದಾಗ ರಾಜಕೀಯವಾಗಿ ಪರಿಣಮಿಸಿತ್ತು ಎಂದು ಅವರು ಮಾಜಿ ಸಚಿವ ಎಂ.ಬಿ. ಪಾಟೀಲ ಸುದ್ದಿಗಾರರಿಗೆ ತಿಳಿಸಿದರು.

ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದಲ್ಲಿ ಗದಗ ತೋಂಟದಾರ್ಯ ಮಠದ ಡಾ.ಸಿದ್ದರಾಮ ಸ್ವಾಮೀಜಿಯವರನ್ನು ಭೇಟಿಯಾದ ಮಾಜಿ ಸಚಿವ ಎಂ.ಬಿ.ಪಾಟೀಲ್ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಶಿವಾನುಭವ ಪತ್ರಿಕೆ ಮರುಮುದ್ರಣ ಸಂಬಂಧ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಶಿವಾನುಭವ ಪತ್ರಿಕೆ ಸಂಗ್ರಹಿಸಿ ಮರು ಮುದ್ರಣ ಮಾಡಿ ಪುಸ್ತಕ ಮಾಡುವ ಚಿಂತನೆ ನಡೆಸಿದ್ದೇವೆ. ಬಸವಾದಿ ಶರಣರ ಪುಸ್ತಕಗಳನ್ನು ಕ್ರೋಢೀಕರಿಸಿ ಅಂತಾರಾಷ್ಟ್ರೀಯ ಗ್ರಂಥಾಲಯ ಸ್ಥಾಪಿಸುವ ಚಿಂತನೆಯಿದೆ. ಈ ವಿಚಾರದ ಕುರಿತು ಶ್ರೀಗಳ ಜೊತೆ ಚರ್ಚೆ ಮಾಡುತ್ತೇವೆ. ಸುತ್ತೂರು ಮಠ, ಸಿದ್ಧಗಂಗಾ ಮಠ, ಕೂಡಲಸಂಗಮ‌ ಮಠಗಳ ಶ್ರೀಗಳ ಭೇಟಿಯೂ ಮಾಡುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ವಿವರಿಸಿದರು.

ಇದನ್ನೂ ಓದಿ: 

ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಉತ್ತರ ಕರ್ನಾಟಕದ ಲಿಂಗಾಯತರಿಗೆ ಸ್ಥಾನ ಕೊಡಲಿ: ಬಸವಜಯಮೃತ್ಯುಂಜಯ ಸ್ವಾಮೀಜಿ

ವೀರಶೈವ ಲಿಂಗಾಯತ ಸಮುದಾಯವನ್ನು ಒಡೆದಿದ್ದು, ಹಿಂದೂ ಮುಸ್ಲಿಂ ಸಮುದಾಯವನ್ನು ದೂರ ಮಾಡಿದ್ದು ಸಿದ್ದರಾಮಯ್ಯ: ಈಶ್ವರಪ್ಪ

(Former Minister MB Patil says will try one who supports CM Yediyurappas Lingayat leaders to Congress)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada