ಧಾರವಾಡ: ಮಾಜಿ ಸಭಾಪತಿ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆ ಅಭ್ಯರ್ಥಿಯಾಗಿರುವ ಬಸವರಾಜ ಹೊರಟ್ಟಿ (Basavaraj Horatti) ವಿರುದ್ಧ ಆರೋಪಗಳು ಕೇಳಿಬಂದಿವೆ. ರಾಷ್ಟ್ರೀಯ ಸ್ವಾಭಿಮಾನಿ ಶಿಕ್ಷಕರ ಸಂಘ ಇಂದು (ಜೂನ್ 11) ಸುದ್ದಿಗೋಷ್ಠಿ ನಡೆಸಿ, 1980ರಲ್ಲಿ ಎಂಎಲ್ಸಿ ಆಗಿದ್ದರು. 19 ವರ್ಷ ಎಂಎಲ್ಸಿ ವೇತನ, ಭತ್ಯೆ ಜೊತೆಗೆ ಶಿಕ್ಷಕರ (Teachers) ವೇತನವನ್ನೂ ಪಡೆದಿದ್ದಾರೆ. 18 ವರ್ಷ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದರು. ಮತ್ತೋರ್ವ ಶಿಕ್ಷಕನಿಗೆ ನೌಕರಿ ಸಿಗುವುದನ್ನು ತಪ್ಪಿಸಿದರು. ಸಚಿವರಾದ ಬಳಿಕ ಲ್ಯಾಮಿಂಗ್ಟನ್ ಶಾಲೆಗೆ ಶಾಲಾ ಸುಧಾರಣಾ ಸಮಿತಿ ಮಾಡಿಕೊಂಡಿದ್ದರು. ಆಗ ಪಾಲಿಕೆ ಆಯುಕ್ತರು ಸಮಿತಿ ಮಾಡಲು ಬರೋಲ್ಲ ಅಂತಾ ಆಗಲೇ ಹೇಳಿದ್ದರು. ಆಗ ಶಾಲಾ ಸುಧಾರಣಾ ಸಮಿತಿ ವಿಸರ್ಜನೆ ಅಂತಾ ಹೇಳಿಕೊಂಡಿದ್ದರು. ಆದರೆ ಇಂದಿಗೂ ಆ ಶಾಲೆಗೆ ನಾನೇ ಚೇರ್ಮನ್ ಅಂತಾ ಹೇಳಿಕೊಳ್ಳುತ್ತಾರೆ ಅಂತ ಆರೋಪಿಸಿದೆ.
ರಾಷ್ಟ್ರೀಯ ಮತ್ತು ರಾಜ್ಯ ಲಾಂಛನ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಸಂಚಾಲಕ ಎಂ. ಭರತ್, ತಮ್ಮ ಸಾಧನೆಯ ಕೈಪಿಡಿಗೆ ಲಾಂಛನ ಬಳಸಿಕೊಂಡಿದ್ದಾರೆ. ಸಭಾಪತಿ ಆಸನ ಸಹ ಬಳಸಿಕೊಂಡಿದ್ದಾರೆ. ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇವೆ. ಅವರಿಗೆ ಆಯೋಗ ನೋಟಿಸ್ ಸಹ ನೀಡಿದೆ. ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ತಮ್ಮ ಹಿಡಿತ ಸಾಧಿಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಏನೇ ಅಕ್ರಮ, ಅನ್ಯಾಯ ನಡೆದರೂ ಅದಕ್ಕೆಲ್ಲ ಪಿತಾಮಹ ಹೊರಟ್ಟಿ ಹೇಳಿದರು.
ಇದನ್ನೂ ಓದಿ: ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶಿಸುವ ಮುನ್ನವೆ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ NDRF ತಂಡ
ಸರ್ವೋದಯ ಶಿಕ್ಷಣ ಸಂಸ್ಥೆ ಉಳ್ಳಾಗಡ್ಡಿ ಎನ್ನುವವರಿಂದ ಪಡೆದಿದ್ದಾರೆ. ಬಿಳಿ ಹಾಳೆ ಮೇಲೆ ಬರೆಯಿಸಿಕೊಂಡು ಅದನ್ನು ಪಡೆದಿದ್ದಾರೆ. ಈಗಾಗಲೇ ಕೋರ್ಟ್ ಈ ಸಂಸ್ಥೆಗೂ ಉಳ್ಳಾಗಡ್ಡಿಗೆ ಸಂಬಂಧ ಇಲ್ಲ ಅಂತಾ ಹೇಳಿದೆ. ಸರ್ವೋದಯ ಶಿಕ್ಷಣ ಸಂಸ್ಥೆ ನಮಗೆ ಬರೆದುಕೊಡಿ ಅಂತಾ ನಾವು ಎಂದೂ ಕೇಳಿಲ್ಲ. ಮ್ಯಾನೇಜ್ಮೆಂಟ್ ಸಂಬಂಧಿತ ವ್ಯಾಜ್ಯ ಇದ್ದಿದ್ದಕ್ಕೆ ಸರ್ಕಾರದ ಆಡಳಿತಾಧಿಕಾರಿ ಕೊಡಿ ಅಂತಾ ಕೇಳಿದ್ದೇವೆ ಎಂದು ರಾಷ್ಟ್ರೀಯ ಸ್ವಾಭಿಮಾನಿ ಶಿಕ್ಷಕರ ಸಂಘ ತಿಳಿಸಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:34 pm, Sat, 11 June 22