Basavaraj Horatti: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ; ನಾಳೆಯೇ ಬಿಜೆಪಿ ಸೇರುವುದಾಗಿ ಘೋಷಣೆ

ಜೆಡಿಎಸ್​ಗೆ ರಾಜೀನಾಮೆ ನೀಡಿರುವ ಬಸವರಾಜ ಹೊರಟ್ಟಿ, ದೇವೇಗೌಡರ ಮೇಲೆ ಆಗಲಿ ಕುಮಾರಸ್ವಾಮಿ ಮೇಲೆ ಆಗಲಿ ನನಗೆ ಬೇಸರ ಇಲ್ಲ. ಆದರೆ ದೇವೇಗೌಡರನ್ನು ಭೇಟಿ ಮಾಡಿ ಮಾತನಾಡುವ ಧೈರ್ಯ ನನಗಿಲ್ಲ. ಹಾಗಾಗಿ ಹತ್ತು ಪುಟಗಳ ಒಂದು ಪತ್ರ ಬರೆದಿದ್ದೇನೆ ಎಂದಿದ್ದಾರೆ.

Basavaraj Horatti: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ; ನಾಳೆಯೇ ಬಿಜೆಪಿ ಸೇರುವುದಾಗಿ ಘೋಷಣೆ
ಬಸವರಾಜ ಹೊರಟ್ಟಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:May 16, 2022 | 4:11 PM

ಬೆಂಗಳೂರು: ಜೆಡಿಎಸ್​ ಪಕ್ಷದ ಶಕ್ತಿ ಪ್ರದರ್ಶನ ಮಾಡಲು ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನ ನೆಲಮಂಗಲದ ಬಳಿ ಜನತಾ ಜಲಧಾರೆ (Janata Jaladhare) ಎಂಬ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜೆಡಿಎಸ್ (JDS) ಪಕ್ಷವನ್ನು ಕರ್ನಾಟಕದಲ್ಲಿ ಬಹುಮತದಿಂದ ಅಧಿಕಾರಕ್ಕೆ ತರಲು ಈ ಸಮಾವೇಶದಲ್ಲಿ ಸಂಕಲ್ಪ ಮಾಡಲಾಗಿತ್ತು. 5 ಲಕ್ಷಕ್ಕೂ ಹೆಚ್ಚು ಜನರು ಈ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ, ಜೆಡಿಎಸ್ ಪಕ್ಷದ ಶಕ್ತಿ ಪ್ರದರ್ಶನದ ಬೆನ್ನಲ್ಲೇ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ (Basavaraj Horatti) ರಾಜೀನಾಮೆ ಘೋಷಿಸುವ ಮೂಲಕ ಜೆಡಿಎಸ್​ಗೆ ದೊಡ್ಡ ಶಾಕ್ ನೀಡಿದ್ದಾರೆ. ಜೆಡಿಎಸ್ ತೊರೆದಿರುವ ಹೊರಟ್ಟಿ ನಾಳೆ ಬಿಜೆಪಿ ಸೇರಲು ನಿರ್ಧರಿಸಿದ್ದಾರೆ. ನಾಳೆ ಬಿಜೆಪಿ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತೇನೆ. ಅಮಿತ್ ಶಾ ಅವರ ಜೊತೆ ಏನೂ ವಿಶೇಷ ಚರ್ಚೆ ಮಾಡಿಲ್ಲ. ಯಾವುದೇ ಸ್ಥಾನಮಾನದ ಬಗ್ಗೆಯೂ ಚರ್ಚೆಯಾಗಿಲ್ಲ ಎಂದು ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿರುವ ಬಸವರಾಜ್ ಹೊರಟ್ಟಿ, 2000ನೇ ಇಸವಿಯಲ್ಲಿ ನಾನು ದೇವೇಗೌಡರ ಜೊತೆ ಸೇರಿಕೊಂಡೆ. ದೇವೇಗೌಡರ ಮಾರ್ಗದರ್ಶನದಲ್ಲಿ ಬೆಳೆದೆ. ಹೆಚ್​ಡಿ ಕುಮಾರಸ್ವಾಮಿ ಅವರೂ ಅಧಿಕಾರಕ್ಕೆ ಬರಲು ಸಹಕಾರ ನೀಡಿದರು. ದೇವೇಗೌಡರ ಕುಟುಂಬದ ಸದಸ್ಯನ ರೀತಿ ನನ್ನನ್ನು ನೋಡಿಕೊಂಡರು.ಮುಂದೆಯೂ ಅವರ ಮಾರ್ಗದರ್ಶನ ನನಗೆ ಸಿಗಲಿದೆ ಅಂತ ಭಾವಿಸಿದ್ದೇನೆ ಎಂದು ಹೇಳಿದ್ದಾರೆ.

ಪಕ್ಷ ಬದಲಾವಣೆ ಮಾಡಿ ಎಂದು ಕೆಲವರು ಒತ್ತಡ ಹಾಕಿದರು. ಆಕಸ್ಮಿಕವಾಗಿ ಕೆಲ ಬದಲಾವಣೆ ಆಗುತ್ತಿದೆ. ಅನಿವಾರ್ಯವಾಗಿ ಬಿಜೆಪಿಗೆ ಹೋಗುತ್ತಿದ್ದೇನೆ. ನಮ್ಮ ರಾಷ್ಟ್ರದಲ್ಲಿ ಯಾವ ಪಕ್ಷದಲ್ಲಿ ಜಾತಿ ಇಲ್ಲ ಹೇಳಿ? ಎಲ್ಲಾ ಪಕ್ಷಗಳಲ್ಲೂ ಜಾತಿಯನ್ನು ಮುಂದೆ ತಂದು, ಗೆಲ್ಲೋಕೆ ಎಷ್ಟು ದುಡ್ಡಿದೆ ಎಂದು ಕೇಳ್ತಾರೆ. ದೇವೇಗೌಡರ ಮೇಲೆ ಆಗಲಿ ಕುಮಾರಸ್ವಾಮಿ ಮೇಲೆ ಆಗಲಿ ನನಗೆ ಬೇಸರ ಇಲ್ಲ. ಆದರೆ ದೇವೇಗೌಡರನ್ನು ಭೇಟಿ ಮಾಡಿ ಮಾತನಾಡುವ ಧೈರ್ಯ ನನಗಿಲ್ಲ. ಹಾಗಾಗಿ ಹತ್ತು ಪುಟಗಳ ಒಂದು ಪತ್ರ ಬರೆದಿದ್ದೇನೆ. ಕುಮಾರಸ್ವಾಮಿ ಅವರಿಗೆ ಈ ವಿಚಾರ ತಿಳಿಸಿದ್ದೇನೆ. ಅವರೇ ಖುದ್ದಾಗಿ ನಮ್ಮ ಮನೆಗೆ ಬಂದು ಮಾತಾಡಿದ್ದಾರೆ. ಅವರಿಗೆ ನನ್ನ ನಿಲುವನ್ನು ತಿಳಿಸಿದ್ದೇನೆ ಎಂದು ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

ಇದನ್ನೂ ಓದಿ
Image
ಕಾಂಗ್ರೆಸ್​ನವರಿಗೆ ಮಾಡೋಕೆ ಕೆಲಸ ಇಲ್ಲ ಅದಕ್ಕೆ ಹಾಗೆ ಮಾತಾಡುತ್ತಾರೆ: ಸಿಎಂ ಬಸವರಾಜ ಬೊಮ್ಮಾಯಿ
Image
ಪ್ರಾದೇಶಿಕ ಪಕ್ಷಗಳಿಗೆ ಸೈದ್ಧಾಂತಿಕ ಬದ್ಧತೆ ಪ್ರಶ್ನಿಸಿದ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ಎಚ್​ಡಿ ಕುಮಾರಸ್ವಾಮಿ
Image
ಬಸವರಾಜ್ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ತೀವ್ರ ವಿರೋಧ: ಹೈಕಮಾಂಡ್​​ಗೆ ರವಾನೆಯಾದ ಪತ್ರದಲ್ಲಿರುವ 10 ಅಂಶಗಳಿವು

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ಘೋಷಿಸಿದ್ದೇನೆ. ಸಭಾಪತಿಯಾಗಿ 30 ಸಭೆ ನಡೆಸಿದ್ದೇನೆ. ಏನು ಸಭೆ ಮಾಡಿದ್ದೀನಿ, ಅದರ ಪ್ರತಿಫಲ ಏನು ಎಂಬ ಬಗ್ಗೆ ಪುಸ್ತಕ ಮಾಡಿದ್ದೇವೆ. ಕೆಲವೊಮ್ಮೆ ಪ್ರತಿಭಟನೆ ಸಂದರ್ಭದಲ್ಲಿ ಮಾತ್ರ ಸದನವನ್ನು ಮುಂದೂಡಿದ್ದೇವೆ. ರಾಜ್ಯಸಭೆ ನಡೆಯುವಾಗ ನಾವು ದೆಹಲಿಗೆ ಹೋಗಿದ್ದೆವು. ಅದರಂತೆ ಪ್ರಶ್ನೋತ್ತರ ಅವಧಿ, ಎಲ್ಲಾ ಕಾರ್ಯ ಮಾಡಿದ್ದೇನೆ. ಶಿಮ್ಲಾದಲ್ಲಿ ನಡೆದ ಕಾರ್ಯಗಾರದಲ್ಲಿ ಭಾಗಿಯಾಗಿದ್ದೆ. ಬಸವಣ್ಣನವರ ಅನುಭವ ಮಂಟಪ ಮಾಡಿದ್ದೇವೆ. ಬೆಳಗಾವಿಯಲ್ಲಿ ಎರಡು ದಿನ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ಚರ್ಚೆಗೆ ಅವಕಾಶ ನೀಡಿದ್ದೆವು. ಬೆಳಗಾವಿಯಲ್ಲಿ ಊಟ, ವಸತಿ, ಸದನ ವಿಚಾರದಲ್ಲಿ ಯಾವುದೇ ದೂರು ಬಂದಿಲ್ಲ. ಡಿ ಗ್ರೂಪ್‌ನವರಿಗೆ ಯೂನಿಫಾರಂ ನೀಡಿದರೂ ಹಾಕುತ್ತಿರಲಿಲ್ಲ. ಅವರಿಗೆ ಯೂನಿಫಾರಂ ಹಾಕದಿದ್ದರೆ ಸಂಬಳ ಕಟ್ ಮಾಡೋದಾಗಿ ಹೇಳಿ ಯೂನಿಫಾರಂ ಕಡ್ಡಾಯ ಮಾಡಿದೆವು ಎಂದು ಹೇಳಿದ್ದಾರೆ.

ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:57 pm, Mon, 16 May 22