ನನ್ನ ರಾಜಕೀಯ ಗುರುಗಳ ಮಗ ಮಧುನನ್ನು ಪಕ್ಷಕ್ಕೆ ಸೇರಿಸಿಕೊಂಡಿರೋದು ನನ್ನ ಭಾಗ್ಯ: ಡಿಕೆ ಶಿವಕುಮಾರ್

ಕಳೆದ ಹಲವು ದಿನಗಳಿಂದ ಮಧು ಬಂಗಾರಪ್ಪಗೆ ನಾನು ಗಾಳ ಹಾಕಿದ್ದೆ. ಆದ್ರೆ ಆ ಮೀನು ಕಚ್ಚಲಿಲ್ಲ, ಕಚ್ಚಿದ್ದರೆ ಇಷ್ಟೊತ್ತಿಗೆ ಮಾಜಿ ಮಂತ್ರಿಯಾಗಿರುತ್ತಿದ್ದರು‌. ಆದ್ರೆ ಇವಾಗ ಬಲೆ ಹಾಕಿ ಕರೆದುಕೊಂಡು ಬಂದ್ವಿ ಎಂದು ಮಧು ಬಂಗಾರಪ್ಪ ಕಾಂಗ್ರೆಸ್​​ ಸೇರ್ಪಡೆ ಸಮಾರಂಭದಲ್ಲಿ ಹೇಳಿದ್ದಾರೆ.

ನನ್ನ ರಾಜಕೀಯ ಗುರುಗಳ ಮಗ ಮಧುನನ್ನು ಪಕ್ಷಕ್ಕೆ ಸೇರಿಸಿಕೊಂಡಿರೋದು ನನ್ನ ಭಾಗ್ಯ: ಡಿಕೆ ಶಿವಕುಮಾರ್
ಮಧು ಬಂಗಾರಪ್ಪ (ಸಂಗ್ರಹ ಚಿತ್ರ)
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 30, 2021 | 12:43 PM

ಹುಬ್ಬಳ್ಳಿ: ನಾನು ಬಂಗಾರಪ್ಪನವರ ಗರಡಿಯಲ್ಲಿ ಬೆಳದವನು. ನನ್ನ ರಾಜಕೀಯ ಗುರುಗಳ ಮಗನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರೊದು ನನ್ನ ಭಾಗ್ಯ ಎಂದು ಹುಬ್ಬಳ್ಳಿಯ ಕಾಂಗ್ರೆಸ್ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕಳೆದ ಹಲವು ದಿನಗಳಿಂದ ಮಧು ಬಂಗಾರಪ್ಪಗೆ ನಾನು ಗಾಳ ಹಾಕಿದ್ದೆ. ಆದ್ರೆ ಆ ಮೀನು ಕಚ್ಚಲಿಲ್ಲ, ಕಚ್ಚಿದ್ದರೆ ಇಷ್ಟೊತ್ತಿಗೆ ಮಾಜಿ ಮಂತ್ರಿಯಾಗಿರುತ್ತಿದ್ದರು‌. ಆದ್ರೆ ಇವಾಗ ಬಲೆ ಹಾಕಿ ಕರೆದುಕೊಂಡು ಬಂದ್ವಿ ಎಂದು ಮಧು ಬಂಗಾರಪ್ಪ ಕಾಂಗ್ರೆಸ್​​ ಸೇರ್ಪಡೆ ಸಮಾರಂಭದಲ್ಲಿ ಹೇಳಿದ್ದಾರೆ.

ಅದಕ್ಕೂ ಮುನ್ನ, ಜೆಡಿಎಸ್ ಪಕ್ಷದಲ್ಲಿದ್ದ​ ಮಧು ಬಂಗಾರಪ್ಪ ಹುಬ್ಬಳ್ಳಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ನಾಯಕ ಸುರ್ಜೇವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೈತೃತ್ವದಲ್ಲಿ ಕಾಂಗ್ರೆಸ್​ ಸೇರ್ಪಡೆಯಾದರು. ಪಕ್ಷದ ಹಿರಿಯ ನಾಯಕರಾದ ಸಿದ್ದರಾಮಯ್ಯ, ಡಿಕೆಶಿ ಮುಂತಾದವರು ಅವರಿಗೆ ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಮಧು ಬಂಗಾರಪ್ಪ ಇತಿಹಾಸ ಹಾಗೂ ಭವಿಷ್ಯದ ಸೇತುವೆಯಾಗುತ್ತಾರೆ: ಸುರ್ಜೇವಾಲ ಕಾಂಗ್ರೆಸ್ ಹಾಗು ಬಂಗಾರಪ್ಪಗೂ ಬಹಳ ನಂಟಿದೆ‌. ಅವರಿಗೆ ತ್ರಿವರ್ಣ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದೇವೆ. ಅವರು ಇತಿಹಾಸ ಹಾಗೂ ಭವಿಷ್ಯದ ಸೇತುವೆಯಾಗುತ್ತಾರೆ. ಬಂಗಾರಪ್ಪನವರಿಗೆ ಗಾಂಧಿ ಕುಟುಂಬದ ಜೊತೆ ಉತ್ತಮ ಸಂಬಂಧವಿತ್ತು. ಮಧು ಬಂಗಾರಪ್ಪನವರಿಗೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅರ್ಶಿವಾದ ಇರುತ್ತೆ  ಎಂದು ಹುಬ್ಬಳ್ಳಿಯ ಕೈ ಸಮಾವೇಶದಲ್ಲಿ ರಾಜ್ಯ ಉಸ್ತುವಾರಿ ಸುರ್ಜೇವಾಲ ಹೇಳಿದರು.

ಸಿದ್ದರಾಮಯ್ಯ ಭಾಷಣ ವೇಳೆ ಪ್ರತಿಧ್ವನಿಸಿದ ಹೌದು ಹುಲಿಯಾ: ಹುಬ್ಬಳ್ಳಿ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಿದ್ದಂತೆ ಅಭಿಮಾನಿಯೊಬ್ಬ ಹೌದು ಹುಲಿಯಾ ಎಂದು ಕೂಗು ಹಾಕಿದ. ಅದನ್ನು ಕೇಳಿಸಿಕೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸುಮ್ನಿರಯ್ಯಾ ಎಂದು ಭಾಷಣ ಮುಂದುವರಿಸಿದರು.

ನಾನು ಇದ್ದಿದ್ದು ಒಂದೇ ಪಕ್ಷದಲ್ಲಿ, ಅದು ಬಂಗಾರಪ್ಪ ಪಕ್ಷ:  ನಾನು ಇದ್ದಿದ್ದು ಒಂದೇ ಪಕ್ಷದಲ್ಲಿ, ಅದು ಬಂಗಾರಪ್ಪ ಪಕ್ಷ ಎಂದು ಕಾಂಗ್ರೆಸ್ ಸೇರ್ಪಡೆ ಬಳಿಕ ಮಧು ಬಂಗಾರಪ್ಪ ಹೇಳಿದರು.  ನಾನು ತಂದೆಯವರನ್ನ ಕಳೆದುಕೊಂಡಿರಬಹುದು. ಆದರೆ ಲಕ್ಷಾಂತರ ಬಂಗಾರಪ್ಪನವರನ್ನ ಪಡೆದುಕೊಂಡಿದ್ದೇನೆ. ಬಂಗಾರಪ್ಪನವರ ಅಭಿಮಾನಿಗಳು ಯಾವುದೇ ಪಕ್ಷದಲ್ಲಿರಲಿ ಅಭಿಮಾನಿಗಳನ್ನ ಕಾಂಗ್ರೆಸ್​ಗೆ ಕರೆತರುವ ಕೆಲಸ ಮಾಡ್ತೀನಿ. ಬಂಗಾರಪ್ಪನವರಿಗೆ ನಿಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದೀರಿ. ಆ ಸ್ಥಾನವನ್ನ ಉಳಿಸಿಕೊಂಡು ಹೋಗುವ ಕೆಲಸ ಮಾಡ್ತೀನಿ. ಕಾಂಗ್ರೆಸ್ ಬಂಗಾರಪ್ಪನವರಿಗೆ ಅಧಿಕಾರವನ್ನ ಕೊಟ್ಟ ಪಕ್ಷ. ರಾಜಕೀಯ ಜೀವನದ ಹೊಸ ಹೆಜ್ಜೆಯನ್ನ ಇಡುತ್ತಿದ್ದೇನೆ ಎಂದು ಹುಬ್ಬಳ್ಳಿ ‘ಕೈ’ ಸಮಾವೇಶದಲ್ಲಿ ಮಧು ಬಂಗಾರಪ್ಪ ಹೇಳಿದರು.

ಕಾಂಗ್ರೆಸ್ ಜನಸೇವೆಯಲ್ಲಿದೆ, ಹೀಗಾಗಿ ಕಾಂಗ್ರೆಸ್‌ಗೆ ಸೇರಿದೆ. ಶಿಸ್ತಿನ ಪಕ್ಷದಲ್ಲಿರಬೇಕೆಂಬ ಕಾರಣಕ್ಕೆ ಜೆಡಿಎಸ್ ಬಿಟ್ಟಿರುವೆ ಎಂದ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ನಾನು ಕಾಂಗ್ರೆಸ್‌ನಿಂದ ಸೊರಬದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರು.

ಬೆಳಗಾವಿ ಕಾಂಗ್ರೆಸ್ ವಿಭಾಗ ಮಟ್ಟದ ಸಮಾವೇಶ ಆರಂಭ: ಮಧು ಬಂಗಾರಪ್ಪ ಕಾಂಗ್ರೆಸ್​ ಸೇರ್ಪಡೆ ಬಳಿಕ ಹುಬ್ಬಳ್ಳಿಯಲ್ಲಿ ಗೋಕುಲ್ ರಸ್ತೆಯಲ್ಲಿನ ಖಾಸಗಿ ಹೋಟೆಲ್​ನಲ್ಲಿ  ಕಾಂಗ್ರೆಸ್ ವಿಭಾಗ ಮಟ್ಟದ ಸಮಾವೇಶ ಆರಂಭಗೊಂಡಿದೆ. ಬೆಳಗಾವಿ ಕಾಂಗ್ರೆಸ್ ವಿಭಾಗ ಮಟ್ಟದ ಸಮಾವೇಶದಲ್ಲಿ ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ, ಚಿಕ್ಕೋಡಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲಾ ನಾಯಕರ ಜೊತೆ ಸಮಾಲೋಚನೆ ನಡೆದಿದೆ.

ಪಕ್ಷ ಸಂಘಟನೆಯ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ ಸುರ್ಜೆವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಎಚ್ ಕೆ ಪಾಟೀಲ ಸೇರಿದಂತೆ ಪಕ್ಷದ ಮುಖಂಡರು, ಪರಾಜಿತ ಅಭ್ಯರ್ಥಿಗಳು, ಶಾಸಕರು, ಮಾಜಿ ಶಾಸಕರು ಭಾಗಿಯಾಗಿದ್ದಾರೆ.

Also Read: ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ದಿನಾಂಕ ನಿಗದಿ; ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸಮ್ಮುಖದಲ್ಲಿ ಕೈ ಪಕ್ಷಕ್ಕೆ ಸೇರ್ಪಡೆ

(Madhu bangarappa joins karnataka congress officially in hubballi)

Published On - 10:47 am, Fri, 30 July 21