ಹುಬ್ಬಳ್ಳಿ, ಫೆಬ್ರವರಿ 3: ನಗರದ ರೈಲ್ವೆ ಮೈದಾನದಲ್ಲಿ ನಡೆದ ಸರ್ಕಾರದ ಗ್ಯಾರಂಟಿ ಸಮಾವೇಶದಲ್ಲಿ ಸಚಿವ ಸಂತೋಷ್ ಲಾಡ್ (Santosh Lad) ಯಡವಟ್ಟು ಮಾಡಿಕೊಂಡಿದ್ದಾರೆ. ಪಾಪ ಯತೀಂದ್ರ ಹುಬ್ಬಳ್ಳಿಗೆ ಬಂದು ಸರ್ಕಾರ ಪತನ ಆಗುತ್ತೆ ಅಂತಾರೆ. ವಿಜಯೇಂದ್ರ ಬದಲು ಯತೀಂದ್ರ ಹೆಸರು ಹೇಳಿ ಯಡವಟ್ಟು ಮಾಡಿಕೊಂಡಿದ್ದಾರೆ. ಅದೇ ರೀತಿಯಾಗಿ ಡಾಲರ್ ಕುರಿತು ಮಾತನಾಡುವಾಗಲೂ ನಳೀನ ಕುಮಾರ್ ಕಟೀಲು ಎನ್ನುವ ಬದಲು ನವೀನ ಕಟೀಲು ಎಂದು ಹೇಳುವ ಮೂಲಕ ಭಾಷಣದುದ್ದಕ್ಕೂ ಸಂತೋಷ್ ಲಾಡ್ ಯಡವಟ್ಟು ಮಾಡಿಕೊಂಡಿದ್ದಾರೆ. ಆಹಾರ ಭದ್ರತೆ ಕಾನೂನು ತಂದಿದ್ದು ಮನಮೋಹನ್ ಸಿಂಗ್ ಸರ್ಕಾರ. ಅಕ್ಕಿ ಕೊಡುತ್ತೇವೆ ಅಂತಿರಲ್ಲ, ಆ ಕಾನೂನು ತಂದಿದ್ದು ನಾವು ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಾಲಿಬಾನ್ ಸರ್ಕಾರ ಅಂತೀರಿ. ನೀವು ಕಾಂಗ್ರೆಸ್ ಸರ್ಕಾರದ ಯೋಜನೆ ಬಗ್ಗೆ ಉತ್ತರ ಕೊಡಿ. ನರೇಗಾ ಕಾರ್ಯಕ್ರಮ ಯಾವ ಪಕ್ಷ ಮಾಡಿಲ್ಲ ಅದನ್ನು ಮಾಡಿದ್ದು ಕಾಂಗ್ರೆಸ್ ಪಕ್ಷ. ನಾವು ಚರ್ಚೆಗೆ ಸಿದ್ದ ಎಂದಿದ್ದಾರೆ.
ಇದನ್ನೂ ಓದಿ: ಆರ್ ಅಶೋಕ್ ಹಿಂದೂ ಆದರೆ ನಾನು ಶ್ರೇಷ್ಠ ಹಿಂದೂ: ಸಿಎಂ ಸಿದ್ದರಾಮಯ್ಯ
ನಮ್ಮ ದೇಶದಲ್ಲಿ 2019 ರಿಂದ 2021 ರ ವರೆಗೆ 1347000 ನಮ್ಮ ಅಕ್ಕ ತಂಗಿಯರು ಕಾಣೆಯಾಗಿದ್ದಾರೆ. ಇದು ನಾನು ಹೇಳೋದಲ್ಲ, ನ್ಯಾಷನಲ್ ಕ್ರೈಂ ರಿಪೋರ್ಟ್ ಕೊಟ್ಟಿರುವುದು. ಇದರ ಬಗ್ಗೆ ಬಿಜೆಪಿಯವರು ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಸರ್ಕಾರ ತೆಗೆಯಲು ಪ್ರಧಾನಿ ಮೋದಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಸರ್ಕಾರ ತೆಗೆಯಲು ಹುನ್ನಾರ ನಡೆಯುತ್ತಿದೆ. ಹೆಣ್ಣುಮಕ್ಕಳೆಲ್ಲ ಸಿದ್ದರಾಮಯ್ಯ ಪರ ಇದ್ದರೆ ಕೈ ಎತ್ತಿ.
ಇದನ್ನೂ ಓದಿ: ಈಶ್ವರಾನಂದಪುರಿ ಸ್ವಾಮೀಜಿಗೆ ಗರ್ಭಗುಡಿ ಪ್ರವೇಶ ನಿಷೇಧ ವಿಚಾರ: ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು
ಮೋದಿ ಅವರೇ ಸರ್ಕಾರ ತೆಗೆಯಲು ಬಹಳ ಪ್ರಯತ್ನ ಮಾಡುತ್ತಿದ್ದಾರೆ. ನೀವೆಲ್ಲರೂ ಸಿಎಂ ಸಿದ್ದರಾಮಯ್ಯ ಪರ ಇರಬೇಕು ಎಂದು ಹೇಳಿದ್ದಾರೆ.
ಫೆ.7ರಂದು ದೆಹಲಿಯಲ್ಲಿ ಕಾಂಗ್ರೆಸ್ ಶಾಸಕರ ಪ್ರತಿಭಟನೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಸದಸ್ಯರು ಪಾರ್ಲಿಮೆಂಟ್ನಲ್ಲಿ ಪ್ರಸ್ತಾಪ ಮಾಡಬೇಕು. ಪಾರ್ಲಿಮೆಂಟ್ನಲ್ಲಿ ಅವರು ಏಕೆ ಮಾತನಾಡಲ್ಲ. ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ.ಸುರೇಶ್ ಮಾತಾಡಬೇಕಿತ್ತು. ಕಾಂಗ್ರೆಸ್ ಪ್ರತಿಭಟನೆ ರಾಜಕೀಯ ಅನಿಸುತ್ತದೆ. ಪಕ್ಷಾಂತರ ಆದ ಮೇಲೆ ನಾನು ಬದಲಾಗಿಲ್ಲ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.