ಹುಬ್ಬಳ್ಳಿಯಲ್ಲಿ ಸ್ಫೋಟಗೊಂಡ ಬಾಕ್ಸ್ ರೈತರಿಟ್ಟಿದ್ದು, ರೈಲ್ವೆ ಸಚಿವರ ಹೇಳಿಕೆಗೆ ಅನ್ನದಾತರು ಗರಂ

ಹುಬ್ಬಳ್ಳಿ: ಜನರಿಂದ ತುಂಬಿದ ರೈಲು ನಿಲ್ದಾಣ.. ಅನುಮಾನಾಸ್ಪದ ಬಾಕ್ಸ್.. ಭಯಭೀತರಾದ ಪ್ರಯಾಣಿಕರು.. ಏನಾಯ್ತು ಏನಾಯ್ತು ಅಂತಾ ಪೊಲೀಸ್ರು ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಬರುತ್ತಿದ್ದಂತೆ ಬಾಕ್ಸ್ ಸ್ಫೋಟಗೊಂಡಿತ್ತು. ರೈಲು ನಿಲ್ದಾಣದಲ್ಲಿ ರಕ್ತ ಚೆಲ್ಲಿತ್ತು. ಇಷ್ಟಕ್ಕೂ ಈ ಘಟನೆ ನಡೆದಿದ್ದು ಅಕ್ಟೋಬರ್ 21ರಂದು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ.. ಅಮರಾವತಿ-ಹುಬ್ಬಳ್ಳಿ ಎಕ್ಸ್​ಪ್ರೆಸ್ ರೈಲಿನಲ್ಲಿ ಬಂದಿದ್ದ ಬಾಕ್ಸ್ ಸ್ಫೋಟಗೊಂಡು ಅನಾಹುತ ಸಂಭವಿಸಿತ್ತು. ಈ ವೇಳೆ, ಹಲವರು ಗಾಯಗೊಂಡಿದ್ರೆ, ಒಬ್ಬರಿಗೆ ಗಂಭೀರ ಗಾಯಗಳಾಗಿದ್ವು. ಇದ್ರ ತನಿಖೆ ನಡೆಯುತ್ತಿರುವಾಗ್ಲೇ ರೈತರ ಸಿಟ್ಟು ಸ್ಫೋಟಗೊಂಡಿದೆ. […]

ಹುಬ್ಬಳ್ಳಿಯಲ್ಲಿ ಸ್ಫೋಟಗೊಂಡ ಬಾಕ್ಸ್ ರೈತರಿಟ್ಟಿದ್ದು, ರೈಲ್ವೆ ಸಚಿವರ ಹೇಳಿಕೆಗೆ ಅನ್ನದಾತರು ಗರಂ
Follow us
ಸಾಧು ಶ್ರೀನಾಥ್​
|

Updated on: Jan 03, 2020 | 12:32 PM

ಹುಬ್ಬಳ್ಳಿ: ಜನರಿಂದ ತುಂಬಿದ ರೈಲು ನಿಲ್ದಾಣ.. ಅನುಮಾನಾಸ್ಪದ ಬಾಕ್ಸ್.. ಭಯಭೀತರಾದ ಪ್ರಯಾಣಿಕರು.. ಏನಾಯ್ತು ಏನಾಯ್ತು ಅಂತಾ ಪೊಲೀಸ್ರು ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಬರುತ್ತಿದ್ದಂತೆ ಬಾಕ್ಸ್ ಸ್ಫೋಟಗೊಂಡಿತ್ತು. ರೈಲು ನಿಲ್ದಾಣದಲ್ಲಿ ರಕ್ತ ಚೆಲ್ಲಿತ್ತು.

ಇಷ್ಟಕ್ಕೂ ಈ ಘಟನೆ ನಡೆದಿದ್ದು ಅಕ್ಟೋಬರ್ 21ರಂದು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ.. ಅಮರಾವತಿ-ಹುಬ್ಬಳ್ಳಿ ಎಕ್ಸ್​ಪ್ರೆಸ್ ರೈಲಿನಲ್ಲಿ ಬಂದಿದ್ದ ಬಾಕ್ಸ್ ಸ್ಫೋಟಗೊಂಡು ಅನಾಹುತ ಸಂಭವಿಸಿತ್ತು. ಈ ವೇಳೆ, ಹಲವರು ಗಾಯಗೊಂಡಿದ್ರೆ, ಒಬ್ಬರಿಗೆ ಗಂಭೀರ ಗಾಯಗಳಾಗಿದ್ವು. ಇದ್ರ ತನಿಖೆ ನಡೆಯುತ್ತಿರುವಾಗ್ಲೇ ರೈತರ ಸಿಟ್ಟು ಸ್ಫೋಟಗೊಂಡಿದೆ.

ಬಾಕ್ಸ್ ಸ್ಫೋಟ ಕೇಸನ್ನು ರೈತರ ಮೇಲೆ ಹಾಕಿದ್ರಾ? ಸ್ಫೋಟ ಸಂಭವಿಸಿ ಎರಡೂವರೆ ತಿಂಗಳು ಕಳೀತು. ಆದ್ರೆ, ತನಿಖಾ ತಂಡಗಳಿಗೆ ಇನ್ನೂ ಸುಳಿವೇ ಸಿಕ್ಕಿಲ್ಲ. ಇದ್ರ ಬೆನ್ನಲ್ಲೇ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಒಂದು ಹೇಳಿಕೆ ಕೊಟ್ಟಿದ್ದಾರೆ. ಅಮರಾವತಿ ಎಕ್ಸ್​ಪ್ರೆಸ್ ರೈಲಿನಲ್ಲಿ ಬಾಕ್ಸ್ ಇಟ್ಟಿದ್ದು ರೈತರು ಅಂತಾ ಹೇಳಿದ್ದು, ಅನ್ನದಾತರನ್ನು ರೊಚ್ಚಿಗೆಳುವಂತೆ ಮಾಡಿದೆ.

ಪ್ರಕರಣದ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ರೈಲ್ವೆ ಪೊಲೀಸರು ಹಾಗೂ ರಾಜ್ಯ ಪೊಲೀಸರು ವಿಫಲವಾಗಿದ್ದಾರೆ. ಈ ಮುಜುಗರದಿಂದ ಪಾರಾಗಲು ಸಚಿವರು ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಸುಖಾ ಸುಮ್ಮನೇ ರೈತರ ಹೆಸರು ಎಳೆದುತಂದು ಅವಮಾನ ಮಾಡಿದ್ದು, ತಕ್ಷಣ ಅನ್ನದಾತರ ಕ್ಷಮೆ ಕೇಳುವಂತೆ ರೈತ ಮುಖಂಡರು ಆಗ್ರಹಿಸಿದ್ದಾರೆ.

ಒಟ್ನಲ್ಲಿ, ಬಾಕ್ಸ್ ಸ್ಫೋಟ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸದ ಸಚಿವ ಸುರೇಶ ಅಂಗಡಿ, ರೈತರ ಬಗ್ಗೆ ಹೇಳಿಕೆ ನೀಡಿ ಅವರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕ್ಷಮೆ ಕೇಳಬೇಕು ಅಂತಾ ಪಟ್ಟು ಹಿಡಿದಿದ್ದಾರೆ.