ಧಾರವಾಡ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಚೇರಿಯಲ್ಲಿ ಕೋಟಿಗೂ ಅಧಿಕ ಹಣ ಕಳ್ಳತನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 24, 2023 | 3:22 PM

ವಿಜಯದಶಮಿ ಇರುವ ಹಿನ್ನಲೆ ಬ್ಯಾಂಕ್ ರಜೆ ಇದ್ದು, ಇದನ್ನೇ ಅವಕಾಶ ಮಾಡಿಕೊಂಡಿರುವ ಖದೀಮರು, ಕಚೇರಿ ಶೌಚಾಲಯದ ಕಿಟಕಿ ಒಡೆದು, ಲಾಕರ್‌ನಲ್ಲಿಟ್ಟಿದ್ದ ಬರೊಬ್ಬರಿ 1.24 ಕೋಟಿ ಹಣವನ್ನು ಕದ್ದು ಪರಾರಿಯಾಗಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಧಾರವಾಡ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಚೇರಿಯಲ್ಲಿ ಕೋಟಿಗೂ ಅಧಿಕ ಹಣ ಕಳ್ಳತನ
ಧಾರವಾಡದಲ್ಲಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಚೇರಿಯಲ್ಲಿ ಕಳ್ಳತನ
Follow us on

ಧಾರವಾಡ, ಅ.24: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಚೇರಿ(Dharmasthala Village Development Office) ಲಾಕರ್​ನಲ್ಲಿದ್ದ ಹಣ ಕಳ್ಳತನವಾದ ಘಟನೆ ಹುಬ್ಬಳ್ಳಿ ಮತ್ತು ಧಾರವಾಡ ನಡುವೆ ಇರುವ ರಾಯಾಪುರ‌ ಬಡಾವಣೆ ಕಚೇರಿಯಲ್ಲಿ ನಡೆದಿದೆ. ಈಗಾಗಲೇ ವಿಜಯದಶಮಿ ಇರುವ ಹಿನ್ನಲೆ ಬ್ಯಾಂಕ್ ರಜೆ ಇದ್ದು, ಇದನ್ನೇ ಅವಕಾಶ ಮಾಡಿಕೊಂಡಿರುವ ಖದೀಮರು, ಕಚೇರಿ ಶೌಚಾಲಯದ ಕಿಟಕಿ ಒಡೆದು, ಲಾಕರ್‌ನಲ್ಲಿಟ್ಟಿದ್ದ ಬರೊಬ್ಬರಿ 1.24 ಕೋಟಿ ಹಣವನ್ನು ಕದ್ದು ಪರಾರಿಯಾಗಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಧಾರವಾಡ ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಶೋಕಿಗಾಗಿ ಲಾರಿಗಳನ್ನೇ ಟಾರ್ಗೆಟ್​ ಮಾಡಿ ಕಳ್ಳತನ; ಖದೀಮರ ಬಂಧನ

ಬೆಂಗಳೂರು ಗ್ರಾಮಾಂತರ: ಅವರೆಲ್ಲಾ ಒಂದೇ ಊರಿನ ಯುವಕರು, ಊರಿನಲ್ಲಿ ಶೋಕಿ‌ ಮಾಡುವ ಸಲುವಾಗಿ ಅಡ್ಡದಾರಿ ಹಿಡಿದುಇದೀಗ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಹೌದು, ನೆಲಮಂಗಲದ ಚಿಕ್ಕಮಾರನಹಳ್ಳಿ ನಿವಾಸಿಗಳಾದ ಮಧುಸೂದನ್, ಕಾರ್ತಿಕ್, ಅಪ್ಪು, ವೇಣುಗೋಪಾಲ ಹಾಗೂ ತಿಮ್ಮರಾಜು ಲಾರಿಗಳನ್ನೇ ಟಾರ್ಗೆಟ್​ ಮಾಡಿ ಟೈಯರ್, ಮೊಬೈಲ್ ಸೇರಿ ಹಣವನ್ನು ಎಗರಿಸುತ್ತಿದ್ದರು.

ಇದನ್ನೂ ಓದಿ:ಕಳ್ಳರ ಜತೆ ಸೇರಿ ಕಳ್ಳತನ ಮಾಡುವ ಪೊಲೀಸಪ್ಪ, ಕಾನ್ಸ್​ಟೇಬಲ್ ಯಲ್ಲಪ್ಪ ಸಿಕ್ಕಿಬಿದ್ದನಪ್ಪ

ಒಂದು ಸುಳಿವಿನಿಂದ ಸಿಕ್ಕಿಬಿದ್ದ ಖದೀಮರು

ಕಳ್ಳತನವನ್ನೇ ನಿತ್ಯ ಕಾಯಕ ಮಾಡಿಕೊಂಡಿದ್ದ ಯುವಕರು, ಲಾರಿ ಚಾಲಕ ಮೋಹನ್ ಎಂಬಾತನನ್ನು ಅಡ್ಡಗಟ್ಟಿದ್ದರು. ಈ ವೇಳೆ ಆರೋಪಿ ಕಾರ್ತೀಕ್ ತನ್ನ ತಂದೆಯ ನಂಬರ್ ನೀಡಿ 10 ಸಾವಿರ ರೂಪಾಯಿಯನ್ನು ಫೋನ್ ಪೇ ಮಾಡಿಸಿಕೊಂಡಿದ್ದ. ಇದೇ ಸುಳಿವು ಪೊಲೀಸರಿಗೆ ಮಹತ್ವದ್ದಾಗಿತ್ತು. ಇದರಿಂದಲೇ ನೆಲಮಂಗಲ ಗ್ರಾಮಾಂತರ ಪೊಲೀಸರ ಕೈಗೆ ಐದು ಜನರು ಸಿಕ್ಕಿ ಹಾಕಿಕೊಂಡಿದ್ದಾರೆ. ಸದ್ಯ ನೆಲಮಂಗಲ ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಬಂಧಿಸಿ, ಏಳು ಲಕ್ಷ ಮೌಲ್ಯದ 20 ಟೈರ್, 4 ಮೊಬೈಲ್, ಚಾಕು, ಕೃತ್ಯಕ್ಕೆ ಬಳಸಿದ ಟೆಂಪೋ, ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ