ಮಂಗಳೂರು ಬಸ್ನಲ್ಲಿ ಯಾರು ಇಲ್ಲದಿದ್ದಾಗ ಹಣ ಕಳ್ಳತನ! ವೈರಲ್ ಆದ ವಿಡಿಯೋ ಇಲ್ಲಿದೆ
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ-ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್ನ ಸ್ಟೇಟ್ಬ್ಯಾಂಕ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಬಳಿಕ ಚಾಲಕ ಮತ್ತು ನಿರ್ವಾಹಕ ಊಟಕ್ಕೆಂದು ತೆರಳಿದ್ದರು.
ಮಂಗಳೂರು: ಬಸ್ ನಿಲ್ದಾಣದಲ್ಲಿ (Bus Stand) ನಿಲ್ಲಿಸಿದ್ದ ಬಸ್ನಿಂದ ಹಣ ಕಳವು ಮಾಡಲಾಗಿದೆ ಎನ್ನಲಾದ ಸಿಸಿ ಕ್ಯಾಮರಾ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ-ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್ನ ಸ್ಟೇಟ್ಬ್ಯಾಂಕ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಬಳಿಕ ಚಾಲಕ ಮತ್ತು ನಿರ್ವಾಹಕ ಊಟಕ್ಕೆಂದು ತೆರಳಿದ್ದರು. ಈ ವೇಳೆ ಬಸ್ನಲ್ಲಿ ಯಾರು ಇಲ್ಲದಿದ್ದಾಗ ಓರ್ವ ಬಸ್ನಲ್ಲಿದ್ದ ಸುಮಾರು 4,500 ರೂಪಾಯಿ ಹಣವನ್ನು ಕದ್ದಿದ್ದಾನೆ ಎಂದು ಹೇಳಲಾಗುತ್ತಿದೆ. ಕಳವು ಮಾಡಲಾಗಿದೆ ಎನ್ನಲಾದ ದೃಶ್ಯ ಬಸ್ನಲ್ಲಿದ್ದ ಕ್ಯಾಮರಾದಲ್ಲಿ ದಾಖಲಾಗಿದೆ. ಸದ್ಯ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.
ಇದನ್ನೂ ಓದಿ: ಟೆಕ್ಸಾಸ್: ಉವಲ್ಡೆ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಬೆದರಿಕೆಯೊಡ್ಡಿದ 17-ವರ್ಷ-ವಯಸ್ಸಿನ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ
Published on: Jun 15, 2022 09:21 AM
Latest Videos