ಮುಸ್ಲಿಂ ಬಾಂಧವರ ಜೊತೆ ನಾಗಿಣಿ ಡ್ಯಾನ್ಸ್ ಮಾಡಿದ ಸಚಿವ ಎಂಟಿಬಿ ನಾಗರಾಜ್; ವಿಡಿಯೋ ನೋಡಿ
ಬಿಜೆಪಿ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಎಂಟಿಬಿ ನಾಗರಾಜ್ ಹೆಜ್ಜೆ ಹಾಕಿದ್ದು, ಡ್ಯಾನ್ಸ್ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆಗಳ ಸಚಿವ ಎಂಟಿಬಿ ನಾಗರಾಜ್ (MTB Nagaraj) ನಾಗಿಣಿ ಡ್ಯಾನ್ಸ್ (Nagini Dance) ಮಾಡಿದ್ದಾರೆ. ಅಲ್ಪಸಂಖ್ಯಾತ ಅಭಿಮಾನಿಗಳ ಒತ್ತಾಯದ ಮೆರೆಗೆ ಡ್ಯಾನ್ಸ್ ಮಾಡಿದ್ದು, ಅಭಿಮಾನಿಗಳು ಡ್ಯಾನ್ಸ್ ಮಾಡಲು ನಿಂಬೆಹಣ್ಣು ಕೊಟ್ಟಿದ್ದಾರೆ. ಆದರೆ ಸಚಿವರು ಕೊಟ್ಟ ನಿಂಬೆಹಣ್ಣನ್ನು ಜೇಬಲ್ಲಿಟ್ಟುಕೊಂಡು ಭರ್ಜರಿ ಸ್ಟೆಪ್ ಹಾಕಿದ್ದಾರೆ. ನಿನ್ನೆ ಹಮ್ಮಿಕೊಂಡಿದ್ದ ಬಿಜೆಪಿ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಎಂಟಿಬಿ ನಾಗರಾಜ್ ಹೆಜ್ಜೆ ಹಾಕಿದ್ದು, ಡ್ಯಾನ್ಸ್ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಸಚಿವರು ನಾಗಿಣಿ ಡ್ಯಾನ್ಸ್ ಮೂಲಕ ಹಲವು ಭಾರಿ ಸುದ್ದಿಯಾಗಿದ್ದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos