ಬೆಂಗಳೂರಿನ ಸುಬ್ರಹ್ಮಣ್ಯನಗರನಲ್ಲಿ ದೊಡ್ಡ ಮರವುರುಳಿ ಬಿದ್ದು ಮೂರು ಕಾರುಗಳು ಜಖಂ
ಕಾರುಗಳ ಜೊತೆಗೆ ಕೆಲ ದ್ವಿಚಕ್ರ ವಾಹನಗಳು ಸಹ ಜಖಂಗೊಂಡಿವೆ. ಬಿ ಬಿ ಎಮ್ ಪಿ ಸಿಬ್ಬಂದಿ ಕಟ್ಟರ್ ಗಳ ಮೂಲಕ ಮರದ ರೆಂಬೆಗಳನ್ನು ಕಟ್ ಮಾಡಿ ತೆರವುಗೊಳಿಸುತ್ತಿದ್ದಾರೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ.
Bengaluru: ಮುಂದಿನ ಎರಡು-ಮೂರು ತಿಂಗಳುವರೆಗೆ ಅಂದರೆ ಮಳೆಗಾಲ (rainy season) ಮುಗಿಯುವರೆಗೆ ಬೆಂಗಳೂರಲ್ಲಿ ಇಂಥ ದೃಶ್ಯಗಳು ಸಾಮಾನ್ಯವಾಗಲಿವೆ. ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಗರದ ಸುಬ್ರಹ್ಮಣ್ಯ ನಗರದ (Subrahmanyangar) ಎಸ್ ಆರ್ ಪಾರ್ಕ್ (SR Park) ಬಳಿ ದೊಡ್ಡ ಗಾತ್ರದ ಮರವೊಂದು ಉರುಳಿ ಬಿದ್ದು ಮೂರು ಕಾರುಗಳು ಜಖಂಗೊಂಡಿವೆ. ಅದೇ ಸಮಯಕ್ಕೆ ಸದರಿ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಕೆಮೆರಾನಲ್ಲಿ ಮರವುರುಳಿ ಬಿದ್ದ ದೃಶ್ಯ ಮಬ್ಬುಮಬ್ಬಾಗಿ ಸೆರೆಯಾಗಿದೆ. ಕಾರುಗಳ ಜೊತೆಗೆ ಕೆಲ ದ್ವಿಚಕ್ರ ವಾಹನಗಳು ಸಹ ಜಖಂಗೊಂಡಿವೆ. ಬಿ ಬಿ ಎಮ್ ಪಿ ಸಿಬ್ಬಂದಿ ಕಟ್ಟರ್ ಗಳ ಮೂಲಕ ಮರದ ರೆಂಬೆಗಳನ್ನು ಕಟ್ ಮಾಡಿ ತೆರವುಗೊಳಿಸುತ್ತಿದ್ದಾರೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos