ಅಕ್ರಮವಾಗಿ ಗೋಮಾಂಸ ಮಾರುವ ಅಡ್ಡೆಗಳನ್ನು ನೆಲಸಮಗೊಳಿಸುವುದಾಗಿ ನೋಟೀಸ್ ಜಾರಿ ಮಾಡಿತು ಚಿಕ್ಕಮಗಳೂರು ನಗರಸಭೆ
ಮನೆಯಲ್ಲಿ ಸ್ಫೋಟಕ ವಸ್ತು (explosives), ಮಾದಕ ವಸ್ತು (drugs) ಕಂಡು ಬಂದರೆ ಅಥವಾ ಗೋಮಾಂಸವನ್ನು ಮಾರುತ್ತಿದ್ದರೆ ಅಂಥ ಮನೆ ಮತ್ತು ಅಂಗಡಿಗಳನ್ನು ನೆಲಸಮಗೊಳಿಸಲಾಗುವುದೆಂದು ಚಿಕ್ಕಮಗಳೂರಿನ ನಗರಸಭೆ ಎಚ್ಚರಿಕೆ ನೀಡಿದೆ.
Chikkamagalur: ಬುಲ್ಡೋಜರ್ ಪದ್ಧತಿ ಕರ್ನಾಟಕದಲ್ಲೂ ಜಾರಿಗೆ ಬರುತ್ತಿದೆ ಮಾರಾಯ್ರೇ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅದು ಈಗಾಗಲೇ ಆರಂಭಗೊಂಡಿದೆ ಮತ್ತು ಕಳೆದವಾರವೇ ಅಕ್ರಮವಾಗಿ ಗೋಮಾಂಸ (beef) ಮಾರಾಟ ಮಾಡುತ್ತಿದ್ದ ಅಂಗಡಿಯೊಂದನ್ನು ನೆಲಸಮಗೊಳಿಸಲಾಗಿದ್ದನ್ನು ವಿಡಿಯೋನಲ್ಲಿ ನೋಡಬಹುದು. ಯಾರಾದಾರೂ ಮನೆಯಲ್ಲಿ ಸ್ಫೋಟಕ ವಸ್ತು (explosives), ಮಾದಕ ವಸ್ತು (drugs) ಕಂಡು ಬಂದರೆ ಅಥವಾ ಗೋಮಾಂಸವನ್ನು ಮಾರುತ್ತಿದ್ದರೆ ಅಂಥ ಮನೆ ಮತ್ತು ಅಂಗಡಿಗಳನ್ನು ನೆಲಸಮಗೊಳಿಸಲಾಗುವುದೆಂದು ಚಿಕ್ಕಮಗಳೂರಿನ ನಗರಸಭೆ ಎಚ್ಚರಿಕೆ ನೀಡಿದೆ ಮತ್ತು ಸುಮಾರು 10 ಮನೆ ಮತ್ತು ಗೋಮಾಂಸ ಮಾರುತ್ತಿದ್ದ ಅಡ್ಡೆಗಳಿಗೆ ನೋಟೀಸ್ ಜಾರಿಮಾಡಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos