ಜಾತ್ರಾ ವಿಶೇಷ: ಬದಾಮಿ, ಸವದತ್ತಿ ಯಲ್ಲಮನ ಗುಡ್ಡಕ್ಕೆ ಹುಬ್ಬಳ್ಳಿಯಿಂದ ವಿಶೇಷ ಬಸ್​​ ವ್ಯವಸ್ಥೆ

|

Updated on: Jan 23, 2024 | 8:44 AM

ರೇಣುಕಾ ಯಲ್ಲಮ್ಮ ದೇವಿ ಹಾಗೂ ಬನಶಂಕರಿ ದೇವಿ ಜಾತ್ರೆ ಜ.23ರಿಂದ 30ರವರೆಗೆ ಜರುಗಲಿದೆ. ಹೀಗಾಗಿ ಎನ್‌ಡಬ್ಲ್ಯುಕೆಆರ್‌ಟಿಸಿ ಹುಬ್ಬಳ್ಳಿ ವಿಭಾಗವು ಜಾತ್ರೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ವಿಶೇಷ ಬಸ್‌ಗಳನ್ನು ಬಿಟ್ಟಿದೆ. ಹುಬ್ಬಳ್ಳಿ ಮತ್ತು ನವಲಗುಂದ ಎರಡು ನಿಲ್ದಾಣಗಳಿಂದ ಯಲ್ಲಮ್ಮನ ಗುಡ್ಡ ಮತ್ತು ಬನಶಂಕರಿಗೆ ಬಸ್​ಗಳು ತೆರಳುತ್ತವೆ.

ಜಾತ್ರಾ ವಿಶೇಷ: ಬದಾಮಿ, ಸವದತ್ತಿ ಯಲ್ಲಮನ ಗುಡ್ಡಕ್ಕೆ ಹುಬ್ಬಳ್ಳಿಯಿಂದ ವಿಶೇಷ ಬಸ್​​ ವ್ಯವಸ್ಥೆ
ಕೆಎಸ್​ಆರ್​ಟಿಸಿ, ಸವದತ್ತಿ
Follow us on

ಹುಬ್ಬಳ್ಳಿ, ಜನವರಿ 23: ಬದಾಮಿ ಬನಶಂಕರಿ (Badami Banshankari) ಮತ್ತು ಸವದತ್ತಿ ಯಲ್ಲಮ್ಮನ (Savadatti Yellamma) ಗುಡ್ಡದ ರೇಣಕಾಂಬೆ ದೇವಿ ದೇವಸ್ಥಾನಗಳು ಉತ್ತರ ಕರ್ನಾಟಕದ ಪ್ರಮುಖ ಆದಿಶಕ್ತಿ ದೇವಲಾಯಗಳು. ನಿತ್ಯ ರಾಜ್ಯ ಮತ್ತು ಅಂತರಾಜ್ಯಗಳಿಂದ ಅಸಂಖ್ಯ ಭಕ್ತರು ಈ ದೇವಸ್ಥಾನಗಳಿಗೆ ಬರುತ್ತಾರೆ. ವರ್ಷದ ಪ್ರತೀ ಪೂರ್ಣಿಮೆಯಂದು ಯಲ್ಲಮ್ಮನ ಗುಡ್ಡದಲ್ಲಿ ಜಾತ್ರೆ ನಡೆಯುತ್ತದೆ. ಆದರೆ, ಡಿಸೆಂಬರ್ ತಿಂಗಳಲ್ಲಿ ಬರುವ ಹೊಸ್ತಿಲು ಹುಣ್ಣಿಮೆ, ಜನವರಿ ತಿಂಗಳಲ್ಲಿ ಬರುವ ಬನದ ಹುಣ್ಣಿಮೆ ಹಾಗೂ ಫೆಬ್ರುವರಿ ತಿಂಗಳಲ್ಲಿ ಬರುವ ಭರತ ಹುಣ್ಣಿಮೆ ಸಂದರ್ಭದಲ್ಲಿ ರೇಣುಕಾ ದೇವಿಯ ದೊಡ್ಡ ಜಾತ್ರೆಗಳು ನಡೆಯುತ್ತವೆ.

ಇನ್ನು ಜನವರಿ ತಿಂಗಳಿನಲ್ಲಿ ಬರುವ ಬನದ ಹುಣ್ಣಿಮೆಯಂದ ಬದಾಮಿ ಬನಶಂಕರಿಗೆ ಮತ್ತು ಯಲ್ಲಮ್ಮನ ಗುಡ್ಡದಲ್ಲಿ ಜಾತ್ರೆ ನಡೆಯುತ್ತದೆ. ಈ ಹಿನ್ನಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ತೆರಳುತ್ತಾರೆ. ಈ ಬಾರಿಯ ರೇಣುಕಾ ಯಲ್ಲಮ್ಮ ದೇವಿ ಹಾಗೂ ಬನಶಂಕರಿ ದೇವಿ ಜಾತ್ರೆ ಜ.23ರಿಂದ 30ರವರೆಗೆ ಜರುಗಲಿದೆ. ಹೀಗಾಗಿ ಎನ್‌ಡಬ್ಲ್ಯುಕೆಆರ್‌ಟಿಸಿ (NWKRTC) ಹುಬ್ಬಳ್ಳಿ ವಿಭಾಗವು ಬಾದಾಮಿ ಮತ್ತು ಸವದತ್ತಿಗೆ ಜ.23 ರಿಂದ 30 ರವರೆಗೆ ಜಾತ್ರೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ವಿಶೇಷ ಬಸ್‌ಗಳನ್ನು ಬಿಟ್ಟಿದೆ.

ಇದನ್ನೂ ಓದಿ: BMTC ಬಸ್​​ನಲ್ಲಿ ಮಹಿಳಾ ಸೀಟ್​ನಲ್ಲಿ ಕೂತ್ತಿದ್ದ ಪುರುಷರಿಂದ ಕಲೆಕ್ಟ್ ಆಯ್ತು ಬರೊಬ್ಬರಿ 34 ಸಾವಿರ ರೂ. ದಂಡ​!

ಹುಬ್ಬಳ್ಳಿ ಮತ್ತು ನವಲಗುಂದ ಎರಡು ನಿಲ್ದಾಣಗಳಿಂದ ಯಲ್ಲಮ್ಮನ ಗುಡ್ಡ ಮತ್ತು ಬನಶಂಕರಿಗೆ ಬಸ್​ಗಳು ತೆರಳುತ್ತವೆ. ಹುಬ್ಬಳ್ಳಿ-ಯಲ್ಲಮ್ಮನ ಗುಡ್ಡದ ಬಸ್‌ಗಳು ಧಾರವಾಡ ಮತ್ತು ಸವದತ್ತಿ ಮಾರ್ಗವಾಗಿ ಸಂಚರಿಸಿದರೆ, ಹುಬ್ಬಳ್ಳಿ-ಬನಶಂಕರಿ ಬಸ್‌ಗಳು ನವಲಗುಂದ, ನರಗುಂದ, ಕೊಣ್ಣೂರು, ಕುಳಗೇರಿ, ಬಾದಾಮಿ ಮಾರ್ಗವಾಗಿ ಸಂಚರಿಸಲಿವೆ. ನವಲಗುಂದಿಂದ ಯಲ್ಲಮ್ಮನ ಗುಡ್ಡಕ್ಕೆ ಹೋಗುವ ಬಸ್‌ಗಳು- ಗೊಬ್ಬರಗುಂಪಿ ಕ್ರಾಸ್, ಅಳಗವಾಡಿ, ಹಂಚಿನಾಳ, ಹಿರೇಕುಂಬಿ ಮಾರ್ಗವಾಗಿ ಸಂಚರಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:14 am, Tue, 23 January 24