ಸವದತ್ತಿ ಯಲ್ಲಮ್ಮ ದೇವಸ್ಥಾನದ ಕಾಣಿಕೆ ಹೆಚ್ಚಳ: ಮೇ ಮತ್ತು ಜೂನ್‌ನಲ್ಲಿ ಸಂಗ್ರಹವಾದ ದೇಣಿಗೆ ಎಷ್ಟು ಗೊತ್ತಾ?

ಸವದತ್ತಿ ಯಲ್ಲಮ್ಮ ದೇವಸ್ಥಾನದ ದೇಣಿಗೆಯನ್ನ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ದೇಣಿಗೆ ಬರೊಬ್ಬರಿ ಸುಮಾರು 37% ರಷ್ಟು ಹೆಚ್ಚಾಗಿದ್ದು, ಕೋಟಿಗೂ ಅಧಿಕ ದೇಣಿಗೆ ಹರಿದು ಬಂದಿದೆ.

ಸವದತ್ತಿ ಯಲ್ಲಮ್ಮ ದೇವಸ್ಥಾನದ ಕಾಣಿಕೆ ಹೆಚ್ಚಳ: ಮೇ ಮತ್ತು ಜೂನ್‌ನಲ್ಲಿ ಸಂಗ್ರಹವಾದ ದೇಣಿಗೆ ಎಷ್ಟು ಗೊತ್ತಾ?
ಸವದತ್ತಿ ಯಲ್ಲಮ್ಮ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 14, 2023 | 8:26 AM

ಬೆಳಗಾವಿ: ಸವದತ್ತಿ ಬಳಿಯ ಗುಡ್ಡದಲ್ಲಿರುವ ಶ್ರೀ ರೇಣುಕಾದೇವಿ ದೇವಸ್ಥಾನವನ್ನು ಯಲ್ಲಮ್ಮ ದೇವಸ್ಥಾನ(Yallamma temple) ಎಂದು ಕರೆಯುತ್ತಾರೆ. ಇದು ಬೆಳಗಾವಿಯಿಂದ ಸುಮಾರು 75 ಕಿಮೀ ದೂರದಲ್ಲಿರುವ ಸವದತ್ತಿಯ ಹೊರವಲಯದಲ್ಲಿದೆ. ಟಾಪ್ 10 ಆದಾಯ ಗಳಿಸುವ ದೇವಾಲಯಗಳಲ್ಲಿ ಇದು ಕೂಡ ಒಂದಾಗಿದೆ. ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರನ್ನು ಆಕರ್ಷಿಸುತ್ತದೆ. ಅವರಲ್ಲಿ ಮಹಿಳೆಯರು ಹೆಚ್ಚಾಗಿ ಇಲ್ಲಿ ನಡೆದುಕೊಳ್ಳುತ್ತಾರೆ. ಅದರಂತೆ ಇದೀಗ ಸವದತ್ತಿ ಯಲ್ಲಮ್ಮ ದೇವಸ್ಥಾನದ ದೇಣಿಗೆಯನ್ನ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ದೇಣಿಗೆ ಬರೊಬ್ಬರಿ ಸುಮಾರು 37% ರಷ್ಟು ಹೆಚ್ಚಾಗಿದೆ.

ಎರಡು ತಿಂಗಳಲ್ಲಿ 1.37 ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹ

ಮೇ ಮತ್ತು ಜೂನ್ ಎರಡು ತಿಂಗಳಲ್ಲಿ ದೇವಸ್ಥಾನದ ಹುಂಡಿಗಳಲ್ಲಿ ₹1.37 ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹವಾಗಿವೆ. ಇದು ಹಿಂದಿನ ವರ್ಷದ ಇದೇ ತಿಂಗಳುಗಳಿಗೆ ಹೋಲಿಸಿದರೆ ಬರೊಬ್ಬರಿ 37% ಪ್ರತಿಶತ ಹೆಚ್ಚಾಗಿದೆ. ಹುಂಡಿಗಳಲ್ಲಿ ರೂಪಾಯಿ 1.30 ಕೋಟಿ ನಗದು, ₹4.4 ಲಕ್ಷ ಮೌಲ್ಯದ ಚಿನ್ನಾಭರಣ, ₹2.29 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳು ಭಕ್ತರಿಂದ ಬಿದ್ದಿವೆ. 50ಕ್ಕೂ ಹೆಚ್ಚು ಗುಮಾಸ್ತರು ಮತ್ತು ಅಧಿಕಾರಿಗಳ ತಂಡ, ಈ ವಾರ ಎರಡು ದಿನಗಳ ಕಾಲ ಹುಂಡಿಗಳಲ್ಲಿನ ನೋಟು ಮತ್ತು ನಾಣ್ಯಗಳನ್ನು ಎಣಿಕೆ ಮಾಡಲಾಗಿದೆ.

ಇದನ್ನೂ ಓದಿ:ಸತತ 12 ಗಂಟೆಗಳಿಂದ ನಡೆದ ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ ಅಂತ್ಯ: ಕೋಟಿ-ಕೋಟಿ ಆದಾಯ ಸಂಗ್ರಹ

ಉಚಿತ ಬಸ್ ಪಾಸ್ ಯೋಜನೆಯಿಂದ ಹೆಚ್ಚಿದ ಲಾಭ

ರಾಜ್ಯ ಸರ್ಕಾರದ ಉಚಿತ ಬಸ್ ಪಾಸ್ ಯೋಜನೆಯಿಂದ ಲಾಭ ಪಡೆದ ಮಹಿಳಾ ಭಕ್ತರು, ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವುದರಿಂದ ದೇಣಿಗೆ ಹೆಚ್ಚಳವಾಗಿದೆ ಎಂದು ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ. ಮಹಾಂತೇಶ ಹೇಳುತ್ತಿದ್ದಾರೆ. ಈ ಹಿನ್ನಲೆ ಇದೀಗ ಹೆಚ್ಚುವರಿಯಾಗಿ ಆಗಮಿಸುವ ಯಾತ್ರಾರ್ಥಿಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.

1500 ರಲ್ಲಿ ಈ ದೇವಸ್ಥಾನ ನಿರ್ಮಾಣ

ಈ ದೇವಸ್ಥಾನವನ್ನ 1500 ರಲ್ಲಿ ರಾಯಬಾಗದ ಮುಖ್ಯಸ್ಥ ಬೊಮ್ಮಪ್ಪ ನಾಯ್ಕನು ನಿರ್ಮಿಸಿದನೆಂದು ಹೇಳಲಾಗುತ್ತದೆ. ಗರ್ಭಗುಡಿಯು ಚಾಲುಕ್ಯ, ಹೊಯ್ಸಳ ಮತ್ತು ಜೈನ ವಾಸ್ತುಶಿಲ್ಪದ ಪ್ರಭಾವವನ್ನು ಹೊಂದಿರುವ ಕಲ್ಲಿನ ದೇವಾಲಯವಾಗಿದೆ. ದೇವಾಲಯದ ಸಂಕೀರ್ಣದಲ್ಲಿ ಗಣೇಶ, ಮಲ್ಲಿಕಾರ್ಜುನ, ಪರಶುರಾಮ, ಏಕನಾಥ ಮತ್ತು ಸಿದ್ದೇಶ್ವರ ದೇವರ ಗುಡಿಗಳನ್ನು ಹೊಂದಿದೆ. ಜೊತೆಗೆ ಸವದತ್ತಿಯಲ್ಲಿ ಹಲವಾರು ಜಲಮೂಲಗಳು ಮತ್ತು ಕಾಲೋಚಿತ ಜಲಪಾತಗಳಿವೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ