ಮಲೆ ಮಹದೇಶ್ವರ, ನಂಜನಗೂಡು ಶ್ರೀಕಂಠೇಶ್ವರ ಹುಂಡಿ ಎಣಿಕೆ: 2000 ಮುಖ ಬೆಲೆಯ 74 ನೋಟು ಪತ್ತೆ
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಮತ್ತು ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಭಕ್ತರು ಕಾಣಿಕೆಯ ರೂಪದಲ್ಲಿ ಕೋಟಿ ಕೋಟಿ ಹಣವನ್ನು ದೇವರಿಗೆ ಅರ್ಪಿಸಿದ್ದಾರೆ.
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದ ಹುಂಡಿಯಲ್ಲಿ 2.53 ಕೋಟಿ ರೂ. ಸಂಗ್ರಹವಾಗಿದೆ. 65 ಗ್ರಾಂ ಚಿನ್ನ, 3 ಕೆಜಿ 358 ಗ್ರಾಂ ಬೆಳ್ಳಿಯನ್ನು ಭಕ್ತರು ಸಮರ್ಪಸಿದ್ದಾರೆ. 14 ಲಕ್ಷಕ್ಕೂ ಹೆಚ್ಚು ಹಣ ನಾಣ್ಯಗಳ ರೂಪದಲ್ಲೇ ಸಲ್ಲಿಕೆಯಾಗಿದೆ. ನಿನ್ನೆ (ಮೇ.30) ತಡರಾತ್ರಿವರೆಗು ಹುಂಡಿ ಎಣಿಕೆ ನಡೆದಿದ್ದು, ಕಳೆದ 32 ದಿನಗಳ ಅವಧಿಯಲ್ಲಿ ಮಲೆಮಹದೇಶ್ವರನಿಗೆ ಭಕ್ತರು 2,53,58,519 ರೂಪಾಯಿ ಕಾಣಿಕೆ ಅರ್ಪಿಸಿದ್ದಾರೆ.
ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಹುಂಡಿ ಎಣಿಕೆ
ಮೈಸೂರು: ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಮೇ ತಿಂಗಳ ಹುಂಡಿ ಎಣಿಕೆಯಲ್ಲಿ 1 ಕೋಟಿ 55 ಲಕ್ಷದ 103 ರೂ. ಕಾಣಿಕೆ ಸಂಗ್ರಹವಾಗಿದೆ. 132 ಗ್ರಾಂ. ಚಿನ್ನ, 3 ಕೆಜಿ 75 ಗ್ರಾಂ ಬೆಳ್ಳಿ, 25 ವಿದೇಶಿ ಕರೆನ್ಸಿಗಳು ಕಾಣಿಕೆ ರೂಪದಲ್ಲಿ ಭಕ್ತರು ಸಮರ್ಪಿಸಿದ್ದಾರೆ. ಇನ್ನು ನಿಷೇಧಿತ 2,000 ಮುಖ ಬೆಲೆಯ 74 ನೋಟುಗಳು ಹುಂಡಿಯಲ್ಲಿ ದೊರೆತಿವೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ