Hassan News: ಅಕ್ರಮವಾಗಿ ಗೃಹಬಂಧನದಲ್ಲಿಟ್ಟಿದ್ದ 18 ಕಾರ್ಮಿಕರ ರಕ್ಷಣೆ; ಆರೋಪಿ ಅಂದರ್

ಅಕ್ರಮವಾಗಿ ಗೃಹ ಬಂಧನದಲ್ಲಿಟ್ಟಿದ್ದ 18 ಕಾರ್ಮಿಕರನ್ನು ಪೊಲೀಸರು ರಕ್ಷಿಸಿದ ಘಟನೆ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಣಾವರ ಹೋಬಳಿಯ ಚೆಲುವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮುನೇಶ್ ಎಂಬ ಆರೋಪಿಯನ್ನ ಬಂಧಿಸಲಾಗಿದೆ.​

Hassan News: ಅಕ್ರಮವಾಗಿ ಗೃಹಬಂಧನದಲ್ಲಿಟ್ಟಿದ್ದ 18 ಕಾರ್ಮಿಕರ ರಕ್ಷಣೆ; ಆರೋಪಿ ಅಂದರ್
ಹಾಸನದಲ್ಲಿ ಕಾರ್ಮಿಕರ ರಕ್ಷಣೆ
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 31, 2023 | 9:47 AM

ಹಾಸನ: ಅಕ್ರಮವಾಗಿ ಗೃಹ ಬಂಧನದಲ್ಲಿಟ್ಟಿದ್ದ 18 ಕಾರ್ಮಿಕರನ್ನು ಪೊಲೀಸರು ರಕ್ಷಿಸಿದ ಘಟನೆ ಜಿಲ್ಲೆಯ ಅರಸೀಕೆರೆ(Arsikere) ತಾಲ್ಲೂಕಿನ ಬಾಣಾವರ ಹೋಬಳಿಯ ಚೆಲುವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮುನೇಶ್ ಆರೋಪಿ. ಹೌದು ರೈಲ್ವೆ, ಬಸ್ ನಿಲ್ದಾಣದಲ್ಲಿದ್ದ ನಿರ್ಗತಿಕರಿಗೆ ಕೆಲಸ ಕೊಡಿಸುತ್ತೇನೆಂದು ಕರೆದುಕೊಂಡು ಬಂದು ಆರೋಪಿ ಮುನೇಶ್ ಎಲ್ಲರನ್ನೂ ಒಂದೆಡೆ ಕೂಡಿ ಹಾಕಿದ್ದ. ಇವರೆಲ್ಲರನ್ನೂ ಒಂದೇ ವಾಹನದಲ್ಲಿ ಕೆಲಸಕ್ಕೆ ಕರೆದುಕೊಂಡು ಹೋಗಿ ಅವರಿಂದ ಕೆಲಸ ಮಾಡಿಸಿಕೊಂಡು, ಸರಿಯಾಗಿ ವೇತನ, ಆಹಾರ ನೀಡದೆ, ಚಿತ್ರಹಿಂಸೆ ಕೊಟ್ಟು, ಮತ್ತೆ ತೋಟದ ಮನೆಯಲ್ಲಿ ಕೂಡಿ ಹಾಕುತ್ತಿದ್ದ ಇತನನ್ನ ಇದೀಗ ಬಂಧಿಸಿದ್ದಾರೆ.

ಈ ಧುರುಳ ಮುನೇಶ್, ಯಾರನ್ನೂ ಹೊರಗೆ ಬಿಡುತ್ತಿರಲಿಲ್ಲ. ಅವರನ್ನ ದುಡಿಸಿಕೊಂಡು ಜೊತೆಗೆ ಅವರಿಗೆ ಕಿರುಕುಳ ನೀಡುತ್ತಿದ್ದ. ಸ್ನಾನ, ಬಟ್ಟೆ, ಆಹಾರವಿಲ್ಲದೆ ಬಡಪಾಯಿಗಳು ಪರದಾಡುತ್ತಿದ್ದರು. ಆದರೂ ಕನಿಕರವಿಲ್ಲದೆ ಅವರನ್ನ ದುಡಿಸಿಕೊಂಡು ಇದೀಗ ಆತನನ್ನ ಬಂಧಿಸಲಾಗಿದೆ. ಇನ್ನು ಈ ಬಂಧಿತನಾಗಿರುವ ಇತ ಇದೇ ಮೊದಲಲ್ಲ, ಈಗಾಗಲೇ ಮೂರು ಬಾರಿ ಇಂತಹುದೆ ಘಟನೆಯಲ್ಲಿ ಬಂಧಿಸಲಾಗಿತ್ತು. ಇದೀಗ ಮತ್ತೆ ನಾಲ್ಕನೇ ಬಾರಿಗೆ ಮುನೇಶ್​ನನ್ನ ಅರೆಸ್ಟ್​ ಮಾಡಲಾಗಿದೆ. ಇನ್ನು ಇತನ ಧುರುಳ ತನದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಹದಿನೆಂಟು ಮಂದಿಯನ್ನು ರಕ್ಷಿಸಿದ್ದಾರೆ. ಬಾಣಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ:ಗುಡುಗು, ಸಿಡಿಲು ಬಡಿತದಿಂದ ರಕ್ಷಣೆ ಪಡೆಯಲು ಏನೇನು ಮಾಡಬಹುದು? ಇಲ್ಲಿದೆ ಸಲಹೆ

ಅಕ್ರಮ ಬಂಧನದಲ್ಲಿದ್ದ 52 ಕಾರ್ಮಿಕರ ರಕ್ಷಣೆ

ಹಾಸನ: ಜಿಲ್ಲೆಯಲ್ಲಿ ಇಂತಹ ಘಟನೆಗಳು ಸರ್ವೇಸಾಮಾನ್ಯವೆನ್ನುವಂತೆಯಾಗಿದೆ. ಇದೇ 2018 ರಲ್ಲೂ ಇಂತಹುದೇ ಘಟನೆ ಹಾಸನದ ಸಾವಂತನಹಳ್ಳಿ ಗ್ರಾಮದ ಕೃಷ್ಣೇಗೌಡ ಎಂಬವರ ತೋಟದಲ್ಲಿ ನಡೆದಿತ್ತು. ಇದರಲ್ಲಿ ಇದೇ ಮುನೇಶ್​ ಆರೋಪಿಯಾಗಿದ್ದ. ಅಕ್ರಮವಾಗಿ 52 ಕಾರ್ಮಿಕರರನ್ನು ದಿಗ್ಬಂಧನದಲ್ಲಿ ಇರಿಸಿದ್ದರು. ಬಳಿಕ ಪೊಲೀಸರು ಅವರನ್ನು ಜೀತಮುಕ್ತಗೊಳಿಸಿದ್ದರು. ರಾಜ್ಯದ ರಾಯಚೂರು, ಹಾವೇರಿಯವರು ಮಾತ್ರವಲ್ಲದೆ ತೆಲಂಗಾಣ, ತಮಿಳುನಾಡಿನ 32 ಪುರುಷರು, 16 ಮಹಿಳೆಯರನ್ನು ತೆಂಗಿನ ತೋಟದಲ್ಲಿ ಜೀತದಾಳುಗಳಾಗಿ ಇರಿಸಿಕೊಳ್ಳಲಾಗಿತ್ತು. ಇದರ ಜೊತೆಗೆ ಇವರ ನಾಲ್ವರು ಮಕ್ಕಳನ್ನೂ ಸಹ ರಕ್ಷಿಸಲಾಗಿತ್ತು. ತುತ್ತಿಗಾಗಿ ಕೂಲಿ ಅರಸಿಕೊಂಡು ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ರಾಜ್ಯದ ರಾಯಚೂರು, ಕಲುಬುರ್ಗಿ ಮತ್ತಿತರ ಭಾಗದಿಂದ ರೈಲಿನಲ್ಲಿ ಬರುತ್ತಿದ್ದವರಿಗೆ ಕೆಲಸದ ಆಸೆ ಹುಟ್ಟಿಸಿ ಇಲ್ಲಿಗೆ ಕರೆತಂದು ದಿಗ್ಬಂಧನ ವಿಧಿಸಲಾಗಿತ್ತು. ತೋಟದ ಮಾಲೀಕ ಕೃಷ್ಣೇಗೌಡ, ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮುನೇಶ ಉ. ಮುರಳಿ, ಬಸವರಾಜು, ಪ್ರದೀಪ ಮತ್ತು ನಾಗರಾಜು ಈ ಅಪರಾಧದ ಸೂತ್ರಧಾರಿಗಳು. ಇವರನ್ನು ಬಸವರಾಜು, ಮುನೇಶನನ್ನು ಬಂಧಿಸಲಾಗಿತ್ತು. ಎಂದು ಹಾಸನ ಎಸ್‌ಪಿ ಪ್ರಕಾಶ್‌ ಗೌಡ ತಿಳಿಸಿದ್ದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ