ಅನಧಿಕೃತ ಅಂಗಡಿ ತೆರವುಗೊಳಿಸಲು ಬಂದ ಪೊಲೀಸರ ಮೇಲೆ ಪೆಟ್ರೋಲ್​ ಎರಚಿದ ಭೂಪ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 12, 2021 | 11:08 PM

ಅನಧಿಕೃತ ಅಂಗಡಿ ತೆರವುಗೊಳಿಸಲು ಮಹಾನಗರ ಪಾಲಿಕೆ ಸಿಬ್ಬಂದಿಯೊಂದಿಗೆ ಬಂದಿದ್ದ ಪೊಲೀಸರ ಮೇಲೆ ವ್ಯಕ್ತಿಯೊಬ್ಬ ಪೆಟ್ರೋಲ್ ಎರಚಿದ

ಅನಧಿಕೃತ ಅಂಗಡಿ ತೆರವುಗೊಳಿಸಲು ಬಂದ ಪೊಲೀಸರ ಮೇಲೆ ಪೆಟ್ರೋಲ್​ ಎರಚಿದ ಭೂಪ
ಧಾರವಾಡದಲ್ಲಿ ಪೊಲೀಸರು ಪೆಟ್ರೊಲ್ ಎರಚಿದ ವ್ಯಕ್ತಿ
Follow us on

ಧಾರವಾಡ: ಸೂಪರ್ ಮಾರ್ಕೆಟ್​ನಲ್ಲಿ ಅನಧಿಕೃತ ಅಂಗಡಿ ತೆರವುಗೊಳಿಸಲು ಮಹಾನಗರ ಪಾಲಿಕೆ ಸಿಬ್ಬಂದಿಯೊಂದಿಗೆ ಬಂದಿದ್ದ ಪೊಲೀಸರ ಮೇಲೆ ವ್ಯಕ್ತಿಯೊಬ್ಬ ಪೆಟ್ರೋಲ್ ಎರಚಿ, ತನ್ನ ಮೇಲೆಯೂ ಪೆಟ್ರೋಲ್ ಸುರಿದುಕೊಂಡು ಹುಚ್ಚಾಟ ಮಾಡಿದ ಘಟನೆ ಗುರುವಾರ ನಡೆದಿದೆ. ಸೂಪರ್​ ಮಾರ್ಕೆಟ್​ನಲ್ಲಿದ್ದ ಎಂ.ಎಂ.ಚೌಧರಿ ಎಂಬಾತ ಎಸಿಪಿ ಅನುಷಾ ಅವರ ಮೇಲೆ ಪೆಟ್ರೋಲ್ ಎರಚಿದ. ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ ಸ್ಥಳದಿಂದ ಕಾಲ್ಕಿತ್ತ. ಧಾರವಾಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನಾಲ್ವರು ಪೊಲೀಸರ ವಶಕ್ಕೆ
​​ದಾವಣಗೆರೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಸವನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹನುಮಂತ್, ಬಸವರಾಜ್, ಕುಮಾರ್, ನಯಾಜ್ ಅವರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ. ದಾವಣಗೆರೆಯ ಬಸವರಾಜಪೇಟೆಯ ಸೀಮೆಎಣ್ಣೆ ಪರಮೇಶ್ (45) ಅವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಆರೋಪಿಗಳು ಕೊಲೆ ಮಾಡಿದ್ದರು.

ನಾಗರಹಾವು ರಕ್ಷಿಸಿದ ಉರಗಪ್ರೇಮಿ
ಧಾರವಾಡದ ತಪೋವನದ ಬಳಿ ಹಲವು ದಿನಗಳಿಂದ ಪಾಳು ಬಿದ್ದಿರುವ 70 ಅಡಿ ಆಳದ ಬಾವಿಯಲ್ಲಿದ್ದ ನಾಗರಹಾವನ್ನು ಉರಗ‌ ಪ್ರೇಮಿ ನಜೀರ್ ರಕ್ಷಿಸಿದರು. ಹಾವು ಬಿದ್ದಿತ್ತು. ಸ್ಥಳೀಯರು ಈ ಕುರಿತು ನಜೀರ್ ಅವರಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: Nagara Palike Election: ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ನಗರ ಪಾಲಿಕೆಗಳಿಗೆ ಚುನಾವಣಾ ದಿನಾಂಕ ಘೋಷಣೆ

ಇದನ್ನೂ ಓದಿ: ಧಾರವಾಡ: ನಾಗರ ಪಂಚಮಿ ಅಂದರೆ ಉಂಡೆಗಳ ಹಬ್ಬ; ರವೆ, ಹೆಸರಿಟ್ಟು, ಎಳ್ಳು, ಕಡಲೆ ಸಮಾಗಮ

(Petrol poured on police who went clear illegal construction)