ಅಕ್ರಮ ಸಾರಾಯಿ ಮಾರಾಟ; ಮೂವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಅಕ್ರಮವಾಗಿ ಗ್ರಾಮದಲ್ಲಿ ಸಾರಾಯಿ ತಂದು ಮಾರಾಟ ಮಾಡುವುದಲ್ಲದೇ ಗ್ರಾಮದ ಮನೆಯೊಂದರಲ್ಲೆ ಸಾರಾಯಿ ಮಾರಲು ಸಿದ್ಧವಾಗಿದ್ದರು. ಆದರೆ ಈ ಸಾರಾಯಿಗಳ್ಳತನ ಲೆಕ್ಕಚಾರವನ್ನು ಗ್ರಾಮಸ್ಥರು ಬುಡಮೇಲು ಮಾಡಿದ್ದಾರೆ.

ಅಕ್ರಮ ಸಾರಾಯಿ ಮಾರಾಟ; ಮೂವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
ಅಕ್ರಮ ಸಾರಾಯಿ ಮಾರಾಟ
Follow us
TV9 Web
| Updated By: preethi shettigar

Updated on:Aug 13, 2021 | 1:29 PM

ಧಾರವಾಡ: ಕಳೆದ ಹಲವು ವರ್ಷಗಳಿಂದ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮ ಸಾರಾಯಿ ಮುಕ್ತ ಗ್ರಾಮವಾಗಿತ್ತು. ಖುದ್ದು ಅಲ್ಲಿನ ಮಹಿಳೆಯರು ಗ್ರಾಮಸ್ಥರು ಸೇರಿ ಗ್ರಾಮದಲ್ಲಿ ಸಾರಾಯಿ ಮಾರಾಟ ಮಾಡುವುದನ್ನು ಬಂದ್ ಮಾಡಿದ್ದರು. ಆದರೂ ಕದ್ದು ಮುಚ್ಚಿ ಸಾರಾಯಿ ಮಾರುವುದು ಅಲ್ಲಲ್ಲಿ ಕಂಡುಬರುತ್ತಿತ್ತು. ಇದನ್ನು ಮನಗಂಡ ಗ್ರಾಮಸ್ಥರು ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಗ್ರಾಮದಲ್ಲಿ ಸಾರಾಯಿ ನಿಷೇಧವಿದ್ದರೂ ಕಲಘಟಗಿ ಪಟ್ಟಣದ ಮೂವರ ತಂಡ ತಡರಾತ್ರಿ ಗ್ರಾಮಕ್ಕೆ ಬಂದು ಸಾರಾಯಿ ಮಾರಾಟ ಮಾಡಿ ಹೋಗುತ್ತಿತ್ತು. ಕಳೆದ ಹಲವು ದಿನಗಳಿಂದ ಈ ರೀತಿಯ ಘಟನೆ ನಡೆಯುತ್ತಿದೆ ಎಂದು ಗ್ರಾಮಸ್ಥರಿಗೆ ಗೊತ್ತಾಗಿತ್ತು. ಆದರೆ ಪಟ್ಟಣದ ಈ ಸಾರಾಯಿಗಳ್ಳರು ಗ್ರಾಮಕ್ಕೆ ಯಾವಗ ಬರುತ್ತಾರೆ ಎನ್ನೋದು ಮಾತ್ರ ತಿಳಿದಿರಲಿಲ್ಲ. ಹೀಗಾಗೇ ಉಪಾಯ ಮಾಡಿದ್ದ ಗ್ರಾಮಸ್ಥರು. ಊರ ಕೆಲ ಜನರನ್ನು ಕಾವಲು ಕಾಯಿವಂತೆ ಹೇಳಿದ್ದರು. ಅದೇ ಪ್ರಕಾರ ತಡರಾತ್ರಿ ಅಪರಿಚಿತ ಕಾರ್​ ಒಂದು ಬರುವುದನ್ನು ಗಮನಿಸಿದ ಗ್ರಾಮಸ್ಥರು ಕೂಡಲೆ ಅವರನ್ನು ಹಿಡಿದಿದ್ದಾರೆ.

ಆರೋಪಿಗಳ ಕಾರ್ ಡೋರ್ ತೆಗೆದು ನೋಡಿದರೆ ಲಕ್ಷಾಂತರ ರೂಪಾಯಿ ಮೌಲ್ಯದ ಸಾರಾಯಿ ಪತ್ತೆಯಾಗಿದೆ. ಸದ್ಯ ಮೂವರು ಹಾಗೂ ಒಂದು ಕಾರ್ ಅನ್ನು ಕಲಘಟಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಾರಾಯಿ ಮಾರಲು ಬಂದ ಮೂವರು ಕಲಘಟಗಿ ಪಟ್ಟಣದವರೆಂದು ಹೇಳಲಾಗುತ್ತಿದ್ದು, ಸದ್ಯ ಪೊಲೀಸರು ತನೀಖೆ ನಡೆಸುತ್ತಿದ್ದಾರೆ.

ಅಕ್ರಮವಾಗಿ ಗ್ರಾಮದಲ್ಲಿ ಸಾರಾಯಿ ತಂದು ಮಾರಾಟ ಮಾಡುವುದಲ್ಲದೇ ಗ್ರಾಮದ ಮನೆಯೊಂದರಲ್ಲೆ ಸಾರಾಯಿ ಮಾರಲು ಸಿದ್ಧವಾಗಿದ್ದರು. ಆದರೆ ಈ ಸಾರಾಯಿಗಳ್ಳತನ ಲೆಕ್ಕಚಾರವನ್ನು ಗ್ರಾಮಸ್ಥರು ಬುಡಮೇಲು ಮಾಡಿದ್ದಾರೆ.

ಇದನ್ನೂ ಓದಿ: ಗುಟ್ಕಾ ಜಗಿಯಂಗಿಲ್ಲ, ಸಾರಾಯಿ ಸಿಗಲ್ಲ, ಎಣ್ಣೆ ಮತ್ತಲ್ಲಿ ಊರಿಗೆ ಬಂದ್ರೆ ಬೀಳುತ್ತೆ ದಂಡ

ಬೆಂಗಳೂರಿನಲ್ಲಿ ಅಕ್ರಮ ಮದ್ಯ ಮಾರಾಟ; ಆರೋಪಿ ಬಂಧನ

Published On - 1:27 pm, Fri, 13 August 21

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು