ಧಾರವಾಡ: ನಾಗರ ಪಂಚಮಿ ಅಂದರೆ ಉಂಡೆಗಳ ಹಬ್ಬ; ರವೆ, ಹೆಸರಿಟ್ಟು, ಎಳ್ಳು, ಕಡಲೆ ಸಮಾಗಮ

Nag panchami 2021: ಉಂಡೆಗಳೊಂದಿಗೆ ಚಕ್ಕಲಿ, ಬರ್ಫಿ, ಕಡಲೆ ಉಸುಳಿ ಸೇರಿದಂತೆ ಅನೇಕ ತಿನಿಸುಗಳನ್ನು ಕೂಡ ಮಾಡಲಾಗಿತ್ತು ಎಂದು ಸ್ಪರ್ಧೆ ಆಯೋಜಕರಾದ ಬಸಲಿಂಗಯ್ಯ ಹಿರೇಮಠ ಹೇಳಿದ್ದಾರೆ.

ಧಾರವಾಡ: ನಾಗರ ಪಂಚಮಿ ಅಂದರೆ ಉಂಡೆಗಳ ಹಬ್ಬ; ರವೆ, ಹೆಸರಿಟ್ಟು, ಎಳ್ಳು, ಕಡಲೆ ಸಮಾಗಮ
ಉಂಡೆಗಳ ಹಬ್ಬ
Follow us
TV9 Web
| Updated By: preethi shettigar

Updated on:Aug 11, 2021 | 8:57 AM

ಧಾರವಾಡ: ಶ್ರಾವಣ ಮಾಸ ಬಂದರೆ ಸಾಕು ಸಾಲು ಸಾಲು ಹಬ್ಬಗಳು ಶುರುವಾಗುತ್ತವೆ. ಅದರಲ್ಲೂ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಅಂದರೆ ಸಾಕು ಮಹಿಳೆಯರಿಗೆ ಸಂಭ್ರಮವೋ ಸಂಭ್ರಮ. ಆದರೆ ಧಾರವಾಡಲ್ಲಿ ಈ ನಾಗರ ಪಂಚಮಿ (nag panchami 2021) ಅಂದರೆ ಅದು ತಹರೇವಾರಿ ಉಂಡೆಗಳ ಹಬ್ಬ. ಇಂಥ ಉಂಡೆಗಳನ್ನು ತಯಾರಿಸುವ ಸ್ಪರ್ಧೆ ಮಾಡುವ ಮೂಲಕ ಧಾರವಾಡದ ಜಾನಪದ ಸಂಶೋಧನಾ ಕೇಂದ್ರ ಮಹಿಳೆಯರಿಗೆ ಮನರಂಜನೆ ಒದಗಿಸಿತ್ತು.

ಧಾರವಾಡದ ಜಾನಪದ ಸಂಶೋಧನ ಕೇಂದ್ರದಲ್ಲಿ ರವೆ, ಹೆಸರಿಟ್ಟು, ಎಳ್ಳು, ಕಡಲೆ, ಚುರುಮರಿ, ಮೋತಿ ಚೂರು ಉಂಡೆಗಳ ಸಮಾಗಮ ನಡೆದಿದ್ದು, ಹೀಗೆ ಹತ್ತಾರು ಬಗೆಯ ಉಂಡೆಗಳು ಒಂದೇ ಕಡೆ ಕಾಣ ಸಿಗುವುದು ಅಪರೂಪ. ನಾಡಿನ ಪ್ರಸಿದ್ಧ ಗಾಯಕರಾದ ಬಸಲಿಂಗಯ್ಯ, ವಿಶ್ವೇಶ್ವರಿ ಹಿರೇಮಠ ದಂಪತಿ ಈ  ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಮಹಿಳೆಯರಿಗಾಗಿಯೇ ನಾಗರ ಪಂಚಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮಹಿಳೆಯರಿಗಾಗಿ ಉಂಡೆ ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮಹಿಳೆಯರು ಮನೆಯಲ್ಲಿಯೇ ಬಗೆ ಬಗೆಯ ಉಂಡೆಗಳನ್ನು ತಯಾರಿಸಿಕೊಂಡು ಬಂದಿದ್ದರು. ಅವುಗಳನ್ನು ಒಂದೆಡೆ ಇಟ್ಟು, ಅವುಗಳ ಮಧ್ಯೆ ನಾಗರ ಹಾವಿನ ವಿಗ್ರಹ ಸ್ಥಾಪಿಸಿ, ಬಳಿಕ ಎಲ್ಲರೂ ಸೇರಿ ಹಾಲು ಹೊಯ್ದು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಉಂಡೆಗಳೊಂದಿಗೆ ಚಕ್ಕಲಿ, ಬರ್ಫಿ, ಕಡಲೆ ಉಸುಳಿ ಸೇರಿದಂತೆ ಅನೇಕ ತಿನಿಸುಗಳನ್ನು ಕೂಡ ಮಾಡಲಾಗಿತ್ತು ಎಂದು ಸ್ಪರ್ಧೆ ಆಯೋಜಕರಾದ ಬಸಲಿಂಗಯ್ಯ ಹಿರೇಮಠ ಹೇಳಿದ್ದಾರೆ.

ಮಕ್ಕಳೆಲ್ಲಾ ಸೇರಿ ಈ ಸಂದರ್ಭದಲ್ಲಿ ವಿವಿಧ ಹಾಡುಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ಇನ್ನು ಮಹಿಳೆಯರು ಅನೇಕ ಜಾನಪದ ಗೀತೆಗಳನ್ನು ಹಾಡುವ ಮೂಲಕ ಕಳೆದು ಹೋಗುತ್ತಿರುವ ಸಂಪ್ರದಾಯವನ್ನು ಮತ್ತೆ ನೆನಪಿಸಿದರು. ಇನ್ನು ಮಹಿಳೆಯರು ಗ್ರಾಮೀಣ ಪ್ರದೇಶದ ಉಡುಗೆಗಳನ್ನು ಧರಿಸಿ ಬಂದಿದ್ದರು. ಕಾಸಿನ ಹಾರ, ಮೂಗುತಿ, ಇಳಕಲ್ ಸೀರೆ ಹಾಗೂ ಇನ್ನಿತರ ವಿಭಿನ್ನ ಬಗೆಯ ಆಭರಣಗಳನ್ನು ಧರಿಸಿ ಬಂದಿದ್ದ ಮಹಿಳೆಯರು ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.

ಉತ್ತರ ಕರ್ನಾಟಕದ ದೊಡ್ಡ ಹಬ್ಬವಾಗಿರುವ ನಾಗರ ಪಂಚಮಿಯನ್ನು ಹೇಗೆ ಆಚರಿಸಬೇಕು ಎನ್ನುವುದು ಮುಂಬರುವ ಪೀಳಿಗೆಗೆ ಪರಿಚಯಿಸಿ ಕೊಡಲು ಇಂಥದ್ದೊಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೊರೊನಾ ಹಾವಳಿಯಿಂದಾಗಿ ಹಬ್ಬ- ಹರಿದಿನಗಳನ್ನು ಜನರು ಮರೆತೇ ಹೋಗಿದ್ದಾರೆ. ಇಂಥ ಸಂದರ್ಭದಲ್ಲಿ ಈ ಹಬ್ಬ ಮಹಿಳೆಯರಿಗೆ ಕೊಂಚ ಖುಷಿ ತರುವಲ್ಲಿ ಯಶಸ್ವಿಯಾಯಿತು ಎಂದು ಗೃಹಿಣಿ ನಂದಾ ಗುಳೇದಗುಡ್ಡ ಅಭಿಪ್ರಾಯಪಟ್ಟಿದ್ದಾರೆ.

ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಕಾರ್ಯಕ್ರಮದ ಬಳಿಕ ಉಂಡೆ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಉತ್ತರ ಕರ್ನಾಟಕ ಶೈಲಿಯ ಊಟ ಎಲ್ಲರ ಗಮನ ಸೆಳೆಯಿತು. ದಿನದಿಂದ ದಿನಕ್ಕೆ ಹಬ್ಬಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಜಾನಪದ ಸಂಶೋಧನಾ ಕೇಂದ್ರ ಮತ್ತೆ ಹಳೆಯ ಸಂಪ್ರದಾಯಗಳನ್ನು ಉಳಿಸಿ, ಅವುಗಳನ್ನು ಮುಂದಿನ ಪೀಳಿಗೆಗೆ ತೋರಿಸಿಕೊಡುವಂಥ ಕೆಲಸ ಮಾಡುತ್ತಿರುವುದು ಸಂತಸದ ಸಂಗತಿಯೇ ಸರಿ.

ವರದಿ: ನರಸಿಂಹಮೂರ್ತಿ ಪ್ಯಾಟಿ ಇದನ್ನೂ ಓದಿ:

Nag Panchami 2021: ಶ್ರಾವಣ ಮಾಸದ ಅಚ್ಚುಮೆಚ್ಚಿನ ಹಬ್ಬ ನಾಗರ ಪಂಚಮಿ- ಏನಿದರ ವಿಶೇಷ, ಆಚರಣೆ, ಭಾವ-ಭಕ್ತಿ ಹೇಗೆ?

ಗವಿಗಂಗಾಧರೇಶ್ವರನ ಸನ್ನಿಧಿಯಲ್ಲಿ ನಾಗರ ಪಂಚಮಿಯ ಸಡಗರ

Published On - 8:55 am, Wed, 11 August 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ