ಹುಬ್ಬಳ್ಳಿ, ನ.14: ದೀಪಾವಳಿ ಪ್ರಯುಕ್ತ ಹುಬ್ಬಳ್ಳಿಯಲ್ಲಿ ಸ್ಥಳೀಯ ಕರಕುಶಲ ವಸ್ತುಗಳಲ್ಲಿ ಒಂದಾದ ಮಣ್ಣಿನ ದೀಪದ ಹಣತೆಯನ್ನು ಖರೀದಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ವೋಕಲ್ ಫಾರ್ ಲೋಕಲ್(Vocal For Local) ಅಭಿಯಾನದಲ್ಲಿ ಭಾಗವಹಿಸಿ, ದೀಪಗಳ ಹಬ್ಬ ದೀಪಾವಳಿ ಆಚರಿಸಿದೆನು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi)ಯವರು ಟ್ವೀಟ್ ಮಾಡಿದ್ದಾರೆ. ನಾವು ಹಬ್ಬ-ಹರಿದಿನಗಳಲ್ಲಿ ಸಂಭ್ರಮಿಸುವಂತೆ ನಮ್ಮವರು ಹಬ್ಬ ಆಚರಿಸುವಂತಾಗಬೇಕು ಎಂಬುದು ಮೋದಿಜೀಯ ಆಶಯ. ಇದನ್ನು ಸಾಕರಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಮಾತ್ರವಲ್ಲದೆ ನಮ್ಮ ಜವಾಬ್ದಾರಿಯೂ ಹೌದು ಎಂದಿದ್ದಾರೆ.
#VocalForLocal
ದೀಪಾವಳಿಯ ಪ್ರಯುಕ್ತ ಹುಬ್ಬಳ್ಳಿಯಲ್ಲಿ ಸ್ಥಳೀಯ ಕರಕುಶಲ ವಸ್ತುಗಳಲ್ಲಿ ಒಂದಾದ ಮಣ್ಣಿನ ದೀಪದ ಹಣತೆಯನ್ನು ಖರೀದಿಸುವ ಮೂಲಕ ಪ್ರಧಾನಮಂತ್ರಿ ಶ್ರೀ @narendramodi ಅವರ #VocalForLocal ಅಭಿಯಾನದಲ್ಲಿ ಭಾಗವಹಿಸಿ, ದೀಪಗಳ ಹಬ್ಬ ದೀಪಾವಳಿ ಆಚರಿಸಿದೆನು.
ನಾವು ಹಬ್ಬ ಹರಿದಿನಗಳಲ್ಲಿ ಸಂಭ್ರಮಿಸುವಂತೆ ನಮ್ಮವರು ಹಬ್ಬ… pic.twitter.com/GnA6bQ2mzA— Pralhad Joshi (@JoshiPralhad) November 14, 2023
ಪ್ರಮುಖ ಹಬ್ಬಗಳಲ್ಲಿ ಒಂದಾದ ದೀಪಾವಳಿಯ ಸಂದರ್ಭದಲ್ಲಿ ನಾವೆಲ್ಲರೂ ಸ್ಥಳೀಯ ಕರಕುಶಲಕರ್ಮಿಗಳಿಂದ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ಕೊಟ್ಟಿದ್ದರು. ಜೊತೆಗೆ ಅವರ ವಸ್ತುಗಳನ್ನು ಖರೀದಿಸಿ ತಯಾರಿಸಿದವರ ಜೊತೆಯಲ್ಲಿಯೇ ಸೆಲ್ಪಿ ತೆಗೆದುಕೊಂಡು ನಮೋ ಆ್ಯಪ್ನಲ್ಲಿ ಹಂಚಿಕೊಳ್ಳುವಂತೆ ಕರೆ ನೀಡಿದ್ದರು. ಈ ಮೂಲಕ ಸ್ಥಳೀಯ ಗುಡಿ ಕೈಗಾರಿಕೆಗಳು, ಕುಶಲಕರ್ಮಿಗಳನ್ನು ಬಲಪಡಿಸುವಂತೆ ಜನರಲ್ಲಿ ಮನವಿ ಮಾಡಿದ್ದರು.
ಇದನ್ನೂ ಓದಿ:ಯೂಟ್ಯೂಬರ್ಗಳೊಂದಿಗೆ ಮೋದಿ ಮಾತು; ಸ್ವಚ್ಛತೆ, ಡಿಜಿಟಲ್ ಪಾವತಿ, ವೋಕಲ್ ಫಾರ್ ಲೋಕಲ್ ಬಗ್ಗೆ ಮಾತನಾಡಿದ ಪ್ರಧಾನಿ
ಹೌದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವಂತಹ ಸ್ಪೂರ್ತಿದಾಯಕ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ದೇಶಾದ್ಯಂತ ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ. ಇದರ ಜೊತೆಗೆ ಅನುಕರಣೆಯ ವೇಗವನ್ನೂ ಪಡೆಯುತ್ತಿದೆ ಎಂದು ಹೇಳಿದ್ದರು. “ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ದೇಶಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ