ರಾಜ್ಯದಲ್ಲಿ ಧ್ವನಿವರ್ಧಕ ಬಳಕೆ ಕುರಿತು ವಿವಾದ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡದಲ್ಲಿ 268 ಧಾರ್ಮಿಕ ಕೇಂದ್ರಗಳಿಗೆ ನೋಟಿಸ್

| Updated By: ಆಯೇಷಾ ಬಾನು

Updated on: Apr 08, 2022 | 1:13 PM

ರಾಜ್ಯದಲ್ಲಿ ಧ್ವನಿವರ್ಧಕ ಬಳಕೆ ಕುರಿತು ವಿವಾದ ಬೆನ್ನಲ್ಲೇ ಪೊಲೀಸರು ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ. ನಿಗದಿಪಡಿಸಿದ ಡೆಸಿಬಲ್ಕ್ಕಿಂತ ಹೆಚ್ಚಿನ ಶಬ್ದ ಬರದಂತೆ ಸೂಚನೆ ನೀಡಿದ್ದಾರೆ. ಧ್ವನಿವರ್ಧಕದ ಮೂಲಕ ಶಬ್ದ ಹೊರಸೂಸುವ ಧಾರ್ಮಿಕ ಮಂದಿರಗಳಿಗೆ ನೋಟಿಸ್ ನೀಡಲಾಗಿದೆ.

ರಾಜ್ಯದಲ್ಲಿ ಧ್ವನಿವರ್ಧಕ ಬಳಕೆ ಕುರಿತು ವಿವಾದ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡದಲ್ಲಿ 268 ಧಾರ್ಮಿಕ ಕೇಂದ್ರಗಳಿಗೆ ನೋಟಿಸ್
ಸಾಂದರ್ಭಿಕ ಚಿತ್ರ
Follow us on

ಹುಬ್ಬಳ್ಳಿ: ರಾಜ್ಯದಲ್ಲಿ ಮಸೀದಿಗಳ ಮೇಲೆ ಹಾಕಿರಲಾಗಿರುವ ಮೈಕ್‌ಗಳನ್ನ ತೆರವು ಮಾಡುವ ಕಾರ್ಯ ಶುರುವಾಗಿದೆ. ರಾಜ್ಯದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ ವಿಚಾರಕ್ಕೆ ಸಂಬಂಧಿಸಿ ಹುಬ್ಬಳ್ಳಿ-ಧಾರವಾಡದ ಧಾರ್ಮಿಕ ಮಂದಿರಗಳಿಗೆ ನೋಟಿಸ್ ನೀಡಲಾಗಿದೆ. ಪೊಲೀಸ್ ಕಮಿಷನರ್ 268 ಕೇಂದ್ರಗಳಿಗೆ ನೋಟಿಸ್ ನೀಡಿದ್ದಾರೆ.

ರಾಜ್ಯದಲ್ಲಿ ಧ್ವನಿವರ್ಧಕ ಬಳಕೆ ಕುರಿತು ವಿವಾದ ಬೆನ್ನಲ್ಲೇ ಪೊಲೀಸರು ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ. ನಿಗದಿಪಡಿಸಿದ ಡೆಸಿಬಲ್ಕ್ಕಿಂತ ಹೆಚ್ಚಿನ ಶಬ್ದ ಬರದಂತೆ ಸೂಚನೆ ನೀಡಿದ್ದಾರೆ. ಧ್ವನಿವರ್ಧಕದ ಮೂಲಕ ಶಬ್ದ ಹೊರಸೂಸುವ ಧಾರ್ಮಿಕ ಮಂದಿರಗಳಿಗೆ ನೋಟಿಸ್ ನೀಡಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರದ ಮಂದಿರ, ಮಸೀದಿ ಸೇರಿ 268 ಕೇಂದ್ರಗಳಿಗೆ ಪೊಲೀಸ್ ಕಮಿಷನರ್ ನೋಟಿಸ್ ನೀಡಿದ್ದು ಈ ಪೈಕಿ 150 ಮಸೀದಿಗಳಿವೆ. ನೋಟಿಸ್ನಲ್ಲಿ ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಮಾಡದಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ ಧ್ವನಿವರ್ಧಕ ಬಳಕೆ ಕುರಿತು ವಿವಾದ ಉಂಟಾಗಿರುವ ಬೆನ್ನಲ್ಲೆ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಇಂತಹದೊಂದು ಕ್ರಮಕ್ಕೆ ಮುಂದಾಗಿದೆ.

ಆಯಾ ಪೊಲೀಸ್ ಠಾಣಾಧಿಕಾರಿಗಳಿಗೆ ಅವರ ವ್ಯಾಪ್ತಿಯಲ್ಲಿನ ಮಸೀದಿ, ಮಂದಿರ, ಚರ್ಚ್ ಸೇರಿ ಧ್ವನಿವರ್ಧಕ ಬಳಸುವ ಇತರೆ ಕೇಂದ್ರಗಳಿಗೆ ನೋಟಿಸ್ ನೀಡಲು ಕಮೀಷನರ್ ಆದೇಶ ನೀಡಿದ್ದಾರೆ. ಆದೇಶದ ಪ್ರಕಾರ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕಗಳನ್ನು ಬಳಸಬಾರದು. ಧ್ವನಿವರ್ಧಕವನ್ನು ಆಜಾನ್, ಸಾವು, ಸಮಾಧಿಯ ಸಮಯ ಮತ್ತು ಚಂದ್ರನನ್ನು ನೋಡುವುದು ಸೇರಿದಂತೆ ಇನ್ನಿತರ ಪ್ರಮುಖ ಘೋಷಣೆಗಳಿಗೆ ಮಾತ್ರ ಬಳಸಬೇಕೆಂದು ಆದೇಶ ನೀಡಿದ್ದಾರೆ.

ನೊಟೀಸ್‌ನಲ್ಲಿ ಏನಿದೆ?
2010ರ ಶಬ್ದ ಮಾಲಿನ್ಯ ಕಾನೂನಿನ ಪ್ರಕಾರ ನಿಗದಿಪಡಿಸಿದ ಡೆಸಿಬಲ್ ಶಬ್ದಕ್ಕಿಂತ ಹೆಚ್ಚಿನ ಶಬ್ದವನ್ನು ಉಪಯೋಗಿಸಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಶಬ್ದ ಮಾಲಿನ್ಯ ಕಾನೂನಿನಡಿ ಜವಾಬ್ದಾರರಾಗಿರುತ್ತೀರಿ ಎಂದು ನೊಟೀಸ್ ನೀಡಲಾಗಿದೆ.

ಇದನ್ನೂ ಓದಿ: ಕಾಡಿನಲ್ಲಿ ಬಳ್ಳಿಗೆ ಸಿಲುಕಿದ್ದ ಕರಡಿಯನ್ನು ರಕ್ಷಿಸಿದ್ದು ಹೇಗೆ? ನೋಡಿ</span

ಕೋಡಿ ಮಠದ ಸ್ವಾಮೀಜಿ ಮಾತಿಗೆ ನಿಖರತೆ, ಸ್ಪಷ್ಟತೆ ಇಲ್ಲ : ಪ್ರತಾಪ್ ಸಿಂಹ