ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸಾಧನೆ ಮಾಡಿದ ಎರಡು ವರ್ಷದ ಬಾಲಕ; ಆ ಸಾಧನೆ ಏನು?
ಪಟಾ ಪಟ್ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸುವ ತೊದಲು ನುಡಿಯ ಕಂದನ ಹೆಸರು ಅಥರ್ವ ಎಸ್. ಅಥರ್ವ್ ಎಸ್ ವಾಣಿಜ್ಯನಗರಿ ಹುಬ್ಬಳ್ಳಿ ಶಿರೂರ್ ಪಾರ್ಕ್ ನಿವಾಸಿಯಾದ ಪ್ರತಿಭಾ ಹಾಗೂ ಶರಣ್ ದಂಪತಿಗಳ ಮಗ.
ಹುಬ್ಬಳ್ಳಿ: ಹುಟ್ಟಿದ ಮಗು (Baby) ತನ್ನ ಒಂದೊಂದು ಕಾರ್ಯ ಆರಂಭಿಸಿದರೆ ಹೆತ್ತವರಿಗೆ ಆಗೋ ಸಂತೋಷ ಅಷ್ಟಿಷ್ಟಲ್ಲ. ಇನ್ನು ಇಡೀ ಜಗತ್ತೇ ತಿರುಗಿ ನೋಡುವಂತೆ ಸಾಧನೆ ಮಾಡಿದರೆ ಅವರ ಖುಷಿಗೆ ಪಾರವೇ ಇರಲ್ಲ. ಜಿಲ್ಲೆಯಲ್ಲಿ ಮಗುವೊಂದು ಇನ್ನೂ ಅಮ್ಮನ (Mother) ಮಡಿಲಲ್ಲಿ ಆಟ ಆಡುವ ವಯಸ್ಸು. ಆದರೆ ಆತನ ಜ್ಞಾನ ನೋಡಿದರೇ ಅಮ್ಮನಿಗೆ ಅಚ್ಚರಿ ಆಗುತ್ತದೆ. ತನ್ನ ಅಪಾರ ಜ್ಞಾಪಕ ಶಕ್ತಿಯಿಂದ ಮಗು ದಾಖಲೆ ಮಾಡಿದೆ. ಪಟಾ ಪಟ್ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸುವ ತೊದಲು ನುಡಿಯ ಕಂದನ ಹೆಸರು ಅಥರ್ವ್ ಎಸ್. ಅಥರ್ವ್ ಎಸ್ ವಾಣಿಜ್ಯನಗರಿ ಹುಬ್ಬಳ್ಳಿ ಶಿರೂರ್ ಪಾರ್ಕ್ ನಿವಾಸಿಯಾದ ಪ್ರತಿಭಾ ಹಾಗೂ ಶರಣ್ ದಂಪತಿಗಳ ಮಗ. ತನ್ನ ಅಗಾಧವಾದ ಜ್ಞಾಪಕ ಶಕ್ತಿಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸಾಧನೆ ಮಾಡಿದ್ದಾನೆ.
ಎರಡು ವರ್ಷದ ಈ ಬಾಲಕ ಜನರಲ್ ನಾಲೆಡ್ಜ್, ಅಂಕಿ ಸಂಖ್ಯೆಗಳನ್ನು ಅಳ್ಳು ಹುರಿದಂತೆ ಹೇಳುತ್ತಾನೆ. ಜೊತೆಗೆ ವಿಶ್ವದ ಬಹುತೇಕ ರಾಷ್ಟ್ರದ ನಕ್ಷೆಯನ್ನು ನೋಡುತ್ತಲೇ ದೇಶವನ್ನು ಗುರುತಿಸುತ್ತಾನೆ. ಎರಡೂ ವರ್ಷದಲ್ಲಿಯೇ ಇಂತಹದೊಂದು ಸಾಧನೆ ಮಾಡಿದ್ದು, ಹೆತ್ತವರ ಹರ್ಷವನ್ನು ಇಮ್ಮಡಿಗೊಳಿಸಿದೆ.
ಅಮ್ಮನ ಮಡಿಲನ್ನೇ ತನ್ನ ಪಾಠಶಾಲೆಯನ್ನಾಗಿ ಮಾಡಿಕೊಂಡ ಅಥರ್ವ್ ಸಮಾಜದ ಅರಿವು ಇಲ್ಲದ ವಯಸ್ಸಿನಲ್ಲಿಯೇ ಅರ್ಥಪೂರ್ಣ ಸಾಧನೆ ಮಾಡಿದ್ದಾನೆ. ಇಂಡಿಯಾ ಬುಕ್ ಆಫ್ ರೆಕಾರ್ಡ್-2022ನಲ್ಲಿ ತನ್ನ ಹೆಸರನ್ನು ದಾಖಲು ಮಾಡಿರುವ ಅಥರ್ವ್ನ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಆನ್ಲೈನ್ ಮೂಲಕ ನಡೆದ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಅಥರ್ವ್ ಸಾಧನೆ ಮಾಡಿದ್ದು, ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸಿದೆ.
ಇದನ್ನೂ ಓದಿ
ಹಿಂದೂ ಮುಸ್ಲಿಂ ಸಾಮರಸ್ಯದ ಕರಗ ಉತ್ಸವಕ್ಕೆ ಎದುರಾಗಲಿದೆಯಾ ಕಂಟಕ? ದರ್ಗಾ ಪ್ರವೇಶಿಸುತ್ತಾಳ ದ್ರೌಪಧಿಯಮ್ಮ
ವರದಿ: ರಹಮತ್ ಕಂಚಗಾರ್