AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಮಾತ್ರ ಬ್ರಿಲಿಯಂಟ್ ಅಲ್ಲಾ ತಲೆಲಿ ಕೂದಲು ಉದುರಿದೆಯಾದ್ರು ನನಗೂ ಜ್ಞಾಪಕ ಶಕ್ತಿ ಇದೆ: ಹೆಚ್​ಡಿ ಕುಮಾರಸ್ವಾಮಿ

ಕಾಂಗ್ರೇಸ್ ಪಕ್ಷದವರು ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಹೇಳಿಕೆ ನೀಡಿದ್ದರಿಂದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಯ್ತು. ಇನ್ನು ದೇಶದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಸಮಾಜದ ಸಾಮರಸ್ಯವನ್ನ ಹಾಳು ಮಾಡುತ್ತಿವೆ. ಈ ಎರಡು ರಾಷ್ಟ್ರೀಯ ಪಕ್ಷಗಳಿಂದ ಜನರು ಎಚ್ಚೆತ್ತುಕೊಳ್ಳಬೇಕು ಎಂದು ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಸಿದ್ದರಾಮಯ್ಯ ಮಾತ್ರ ಬ್ರಿಲಿಯಂಟ್ ಅಲ್ಲಾ ತಲೆಲಿ ಕೂದಲು ಉದುರಿದೆಯಾದ್ರು ನನಗೂ ಜ್ಞಾಪಕ ಶಕ್ತಿ ಇದೆ: ಹೆಚ್​ಡಿ ಕುಮಾರಸ್ವಾಮಿ
ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ
TV9 Web
| Edited By: |

Updated on:Mar 27, 2022 | 6:00 PM

Share

ಕೋಲಾರ: ಸಿದ್ದರಾಮಯ್ಯ ಮಾತ್ರ ಬ್ರಿಲಿಯಂಟ್ ಅಲ್ಲ. ನನಗೂ ಜ್ಞಾಪಕ ಶಕ್ತಿ ಇದೆ. 2014ರಲ್ಲೆ ಹೇಳಿದ್ದೆ ಒಂದು ವರ್ಷದಲ್ಲಿ ಎತ್ತಿನಹೊಳೆ ನೀರು ಬಂದ್ರೆ ಆಗ ತಲೆ ತುಂಬ ಕೂದಲಿತ್ತು ಬೋಳಿಸಿಕೊಳ್ಳುವೆ ಎಂದಿದ್ದೇ ಇಂದು ಕೂದಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswami) ವ್ಯಂಗ್ಯ ಮಾಡಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014 ರಲ್ಲಿ ಎತ್ತಿನಹೊಳೆ ಯೋಜನೆ ಅಡಿಪಾಯ ಹಾಕಿ ಒಂದು ವರ್ಷದಲ್ಲಿ ಅವಳಿ ಜಿಲ್ಲೆಗಳಿಗೆ ನೀರು ಹರಿಸುತ್ತೇವೆ ಎಂದಿದ್ದರು. ಆಗ ನಾನು ಒಂದು ವರ್ಷದಲ್ಲಿ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ಳುವೆ ಎಂದಿದ್ದೆ. ಅಂದು ತಲೆ ತುಂಬಾ ಕೂದಲಿತ್ತು ಇಂದು ಇಲ್ಲವಾಗಿದೆ ಸಿದ್ದರಾಮಯ್ಯ (Siddaramaiah) ಮಾತ್ರ ಬ್ರಿಲಿಯಂಟ್ (Brilliant) ಅಲ್ಲಾ ತಲೆಲಿ ಕೂದಲು ಉದುರಿದೆಯಾದ್ರು ನನಗೂ ಜ್ಞಾಪಕಶಕ್ತಿ ಇದೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಆದ್ರೂ ರಾಜ್ಯದಲ್ಲಿ ಇವತ್ತಿನ ಪರಿಸ್ಥಿತಿಗೆ ಅವರೇ ಕಾರಣ. ಮೈತ್ರಿ ಸರ್ಕಾರ ಉಳಿವಿಗಾಗಿ ನಮಗೆ ಇಷ್ಟವಿಲ್ಲದಿದ್ದರು, ಪ್ರಯತ್ನ ಪಟ್ಟೆ ಅದೂ ಕಾಂಗ್ರೇಸ್, ಬಿಜೆಪಿ ಎರಡು ರಾಷ್ಟ್ರಿಯ ಪಕ್ಷಗಳ ವಿರುದ್ಧ ಹೋರಾಟ ಮಾಡಿದ್ದೇನೆ. 2004 ರಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲ ಕೊಟ್ಟಿದ್ದವರು ನಾವು. ಬಿಜೆಪಿಗೆ 104 ಸ್ಥಾನ ಬರಲು ಸಿದ್ದರಾಮಯ್ಯ ಕಾರಣ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.

ಕಾಂಗ್ರೇಸ್ ಪಕ್ಷದವರು ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಹೇಳಿಕೆ ನೀಡಿದ್ದರಿಂದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಯ್ತು. ಇನ್ನು ದೇಶದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಸಮಾಜದ ಸಾಮರಸ್ಯವನ್ನ ಹಾಳು ಮಾಡುತ್ತಿವೆ. ಈ ಎರಡು ರಾಷ್ಟ್ರೀಯ ಪಕ್ಷಗಳಿಂದ ಜನರು ಎಚ್ಚೆತ್ತುಕೊಳ್ಳಬೇಕು ಎಂದು ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

2023 ರ ಚುನಾವಣೆಗೆ ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಸಂಬಂಧಿಸಿದ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಹೆಚ್​ಡಿಕೆ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೇಸ್ ಪಕ್ಷದವರಿಗೆ ನಮ್ಮ ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡಲು ಅವರ ಬಳಿ ಬೇರೆ ಯಾವುದೇ ವಿಷಯ ಇಲ್ಲ. ಅದು ಅಲ್ಲದೆ ಮುಂದೆ ಅವರದ್ದು ಏನು ನಡೆಯೋದಿಲ್ಲ ಈಗಾಗಲೇ ಸಿದ್ದರಾಮಯ್ಯ ಅವರನ್ನ ನಂಬಿ ಮುಸಲ್ಮಾನರು ಸಹ ಬೀದಿಗೆ ಬಂದಿದ್ದಾರೆ ಅವರಲ್ಲೂ ಸಹ ಮರು ಚಿಂತನೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ಕರ್ನಾಟಕಕ್ಕೆ ಈ ಪರಿಸ್ಥಿತಿ ಬರುತ್ತೆಂದು ಊಹಿಸಿರಲಿಲ್ಲ; ರಾಷ್ಟ್ರೀಯ ಪಕ್ಷಗಳು ಸಾಮರಸ್ಯ ಹಾಳುಮಾಡುತ್ತಿವೆ: ಹೆಚ್​ಡಿ ಕುಮಾರಸ್ವಾಮಿ

ಹಿಜಾಬ್, ದುಪಟ್ಟಾ ಜತೆ ಸ್ವಾಮೀಜಿ ಪೇಟಾ ಹೋಲಿಸಬಾರದು; ಸಿದ್ದರಾಮಯ್ಯ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಟಾಂಗ್

Published On - 5:44 pm, Sun, 27 March 22