ಬೆಂಗಳೂರಿನಿಂದ ಚೆನ್ನೈ ಸಂಪರ್ಕಿಸಿರೋ ಎಕ್ಸ್‌ಪ್ರೆಸ್ ಹೈವೇ ಕಾಮಗಾರಿಯಿಂದಾಗಿ ಕಾಡು ಪ್ರಾಣಿಗಳಿಗೆ ಎದುರಾಯ್ತು ಸಂಕಷ್ಟ
ಬೆಂಗಳೂರಿನಿಂದ ಚೆನ್ನೈ ಸಂಪರ್ಕಿಸಿರೋ ಎಕ್ಸ್‌ಪ್ರೆಸ್ ಹೈವೇ ಕಾಮಗಾರಿಯಿಂದಾಗಿ ಅರಣ್ಯವೇ ನಾಶವಾಗಿ ಹೆದ್ದಾರಿ ರೂಪಕೊಳ್ತಿದೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಕೃಷ್ಣವರಂ ಹಾಗೂ ದೊಡ್ಡೂರು, ಕರಪನಹಳ್ಳಿ ಗ್ರಾಮಗಳ ಬಳಿ ಇದೇ ಕಾಮಗಾರಿ ಭರದಿಂದ ಸಾಗಿದೆ.
ಕೋಲಾರ: ಈ ಜಿಲ್ಲೆ ಅಪರೂಪದ ಜೀವಸಂಕುಲ ವಾಸ ಇರೋ ಪ್ರದೇಶ. ಆದ್ರೆ ಅದೇ ಅರಣ್ಯದ ಪಕ್ಕದಲ್ಲಿ ಹಾದು ಹೋಗ್ತಿರೋ ಹೆದ್ದಾರಿ ಮೂಕಪ್ರಾಣಿಗಳಿಗೆ ಕುತ್ತು ತಂದಿದೆ. ಬೃಹತ್ ಯಂತ್ರಗಳ ಸದ್ದಿಗೆ ಕಾಡುಮೃಗಗಳು ದಿಕ್ಕಾಪಾಲಾಗಿ ಓಡ್ತಿವೆ. ದೈತ್ಯ ಯಂತ್ರಗಳ ಸದ್ದು, ಅರಣ್ಯದ ಆಹುತಿ, ಕಾಡು ಪ್ರಾಣಿಗಳು ದಿಕ್ಕೆಟ್ಟು ಓಡುವಂತೆ ಮಾಡಿದೆ.
ಎಕ್ಸ್‌ಪ್ರೆಸ್ ಹೈವೇ ಕಾಮಗಾರಿ, ಕಾಡು ಪ್ರಾಣಿಗಳಿಗೆ ಕಿರಿಕಿರಿ ಬೆಂಗಳೂರಿನಿಂದ ಚೆನ್ನೈ ಸಂಪರ್ಕಿಸಿರೋ ಎಕ್ಸ್‌ಪ್ರೆಸ್ ಹೈವೇ ಕಾಮಗಾರಿಯಿಂದಾಗಿ ಅರಣ್ಯವೇ ನಾಶವಾಗಿ ಹೆದ್ದಾರಿ ರೂಪಕೊಳ್ತಿದೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಕೃಷ್ಣವರಂ ಹಾಗೂ ದೊಡ್ಡೂರು, ಕರಪನಹಳ್ಳಿ ಗ್ರಾಮಗಳ ಬಳಿ ಇದೇ ಕಾಮಗಾರಿ ಭರದಿಂದ ಸಾಗಿದೆ. ಬೆಂಗಳೂರಿಂದ ಚೆನ್ನೈಗೆ ಹೊಸದಾಗಿ ಇಂಡಸ್ಟ್ರಿಯಲ್ ಎಕ್ಸ್ಪ್ರೆಕ್ಸ್ ಕಾರಿಡಾರ್ ಹೈವೇ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಮಗಾರಿಗೆ ರೈತರ ಸಾವಿರಾರು ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದ್ದು, ಸರಿಯಾದ ಪರಿಹಾರ ಕೊಟ್ಟಿಲ್ಲ ಅನ್ನೋ ಆರೋಪ ಕೇಳಿಬಂದಿತ್ತು. ಇದ್ರ ಬೆನ್ನಲ್ಲೇ ಈ ಕಾಮಗಾರಿಯಿಂದಾಗಿ ಈಗ ಮೂಕಪ್ರಾಣಿಗಳು ಕೂಡಾ ರೋಧಿಸುತ್ತಿವೆ.
ಈ ಹೆದ್ದಾರಿ ನಿರ್ಮಾಣದಿಂದಾಗಿ ಸಾವಿರಾರು ಕೃಷ್ಣಮೃಗ ಹಾಗೂ ಜಿಂಕೆಗಳು ವಾಸವಿದ್ದ ಕೃಷ್ಣಾವರಂ ಬಳಿಯ ಬಡಮಾಕನಹಳ್ಳಿ ಅರಣ್ಯ ಪ್ರದೇಶ ನಾಶವಾಗ್ತಿದೆ. ಇಲ್ಲೇ ಕೆಲಸ ನಡೆಯುತ್ತಿರೋದ್ರಿಂದ ಯಂತ್ರಗಳ ಸದ್ದಿಗೆ ಜಿಂಕೆಗಳು ದಿಕ್ಕಾಪಾಲಾಗಿ ಓಡ್ತಿವೆ. ಸದ್ದು ಗದ್ದಲಕ್ಕೆ ಬೆದರಿರುವ ಜಿಂಕೆಗಳು ತಮ್ಮ ನೆಲೆ ಕಳೆದುಕೊಂಡು ಅಕ್ಕ ಪಕ್ಕದ ಗ್ರಾಮಗಳ ಬಳಿಗೆ ಬಂದು ಬೀದಿ ನಾಯಿಗಳಿಗೆ ಆಹಾರವಾಗ್ತಿವೆ. ಅಷ್ಟೇ ಅಲ್ಲ ಹಗಲುರಾತ್ರಿ ನಡೆಯುತ್ತಿರೋ ಬ್ಲಾಸ್ಟಿಂಗ್‌ಗೆ ನವಿಲು, ಕಾಡು ಹಂದಿಗಳು ಕೂಡಾ ಇಲ್ಲಿ ಕಾಣ್ತಿಲ್ಲ. ಆದ್ರೆ ಅರಣ್ಯ ಇಲಾಖೆ ಮಾತ್ರ, ಅರಣ್ಯ ಪ್ರದೇಶದಲ್ಲಿ ಹೆದ್ದಾರಿ ಹಾದು ಹೋಗ್ತಿಲ್ಲ ಅಂತಿದ್ದಾರೆ. ಒಟ್ನಲ್ಲಿ ಬೆಳೆಯುತ್ತಿರೋ ಯುಗದಲ್ಲಿ ಹೆದ್ದಾರಿಗಳು, ಎಕ್ಸ್‌ಪ್ರೆಸ್ ಹೈವೇಗಳು ಅನಿವಾರ್ಯ. ಆದ್ರೆ ಈ ನಿರ್ಮಾಣ ಕಾಮಗಾರಿಗೂ ಮುನ್ನ ಈ ಮೂಕಪ್ರಾಣಿಗಳನ್ನ ಸಂರಕ್ಷಣೆ ಮಾಡೋ ಕೆಲಸ ಆಗಬೇಕಿದೆ.
ವರದಿ: ರಾಜೇಂದ್ರ ಸಿಂಹ, ಟಿವಿ9 ಕೋಲಾರ
ಇದನ್ನೂ ಓದಿ: ಬ್ಯಾಂಕ್ಗೆ 20 ಕೋಟಿ ರೂ.ವಂಚನೆ ಕೇಸ್; 10 ವರ್ಷಗಳ ನಂತರ ಗುಜರಾತ್ ಮೂಲದ ಉದ್ಯಮಿಯನ್ನು ಬಂಧಿಸಿದ ಸಿಬಿಐ
ಕೋಲಾರದಲ್ಲಿ ಪುರಾತನ ದೇಗುಲ ವಿರೂಪಗೊಳಿಸಿದ ಕಿಡಿಗೇಡಿಗಳು; ಹಿಂದೂ ಕಾರ್ಯಕರ್ತರಿಂದ ಆಕ್ರೋಶ, ಸ್ಥಳದಲ್ಲಿ ಹೈ ಅಲರ್ಟ್