ಕೋಲಾರದಲ್ಲಿ ಪುರಾತನ ದೇಗುಲ ವಿರೂಪಗೊಳಿಸಿದ ಕಿಡಿಗೇಡಿಗಳು; ಹಿಂದೂ ಕಾರ್ಯಕರ್ತರಿಂದ ಆಕ್ರೋಶ, ಸ್ಥಳದಲ್ಲಿ ಹೈ ಅಲರ್ಟ್
ಕೋಲಾರ ಜಿಲ್ಲೆ ಕೆಜಿಎಫ್ನ ಅಲ್ಲಿಕುಂಟೆ ಕದಿರೇನಹಳ್ಳಿಯಲ್ಲಿರೋ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿರೋ ಐತಿಹಾಸಿಕ ವೇಣುಗೋಪಾಲ ಸ್ವಾಮಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ. ಆದ್ರೆ ಮೊನ್ನೆ ರಾತ್ರಿ ಯಾರೋ ಕಿಡಿಗೇಡಿಗಳು ದೇವಸ್ಥಾನದ ಗೋಪುರದ ಮೇಲಿದ್ದ ವಿಗ್ರಹಗಳು ಹಾಗೂ ಧ್ವಜ ಕಂಬವನ್ನು ವಿರೂಪಗೊಳಿಸಿದ್ದಾರೆ.
ಕೋಲಾರ: ಜಿಲ್ಲೆಯಲ್ಲಿರುವ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದ ಪ್ರಸಿದ್ಧ ದೇವಾಲಯಕ್ಕೆ ಈಗ ಕಿಡಿಗೇಡಿಗಳ ಕಾಟ ಶುರುವಾಗಿದೆ. ರಾತ್ರೋರಾತ್ರಿ ಬಂದ ದುಷ್ಕರ್ಮಿಗಳು ವಿಗ್ರಹಗಳನ್ನು ವಿರೂಪಗೊಳಿಸಿದ್ದಾರೆ. ಈಗ ಇದೇ ವಿಚಾರ ವಿವಾದದ ಕಿಡಿ ಹೊತ್ತಿಸಿದೆ. ದೇವಸ್ಥಾನದ ಧ್ವಜಕಂಬ, ವಿಗ್ರಹಗಳು ವಿರೂಪಗೊಂಡಿವೆ. ಗೋಡೆಯ ಮೇಲೆಲ್ಲಾ ಚಿತ್ರ ವಿಚಿತ್ರವಾಗಿ ಹೆಸರು ಬರೆಯಲಾಗಿದೆ. ಸುತ್ತಮುತ್ತಲ ಊರಿನ ಜನರೆಲ್ಲಾ ಓಡೋಡಿ ಬಂದಿದ್ರು. ಖಾಕಿ ಪಡೆಯೂ ದೌಡಾಯಿಸಿ ಪರಿಶೀಲನೆ ನಡೆಸಿದ್ರು. ಯಾಕಂದ್ರೆ ಕಿಡಿಗೇಡಿಗಳು ಮಾಡಿರುವ ಕೃತ್ಯ ಇದೀಗ ವಿವಾದವನ್ನೇ ಸೃಷ್ಟಿಸಿದೆ.
ಕೋಲಾರ ಜಿಲ್ಲೆ ಕೆಜಿಎಫ್ನ ಅಲ್ಲಿಕುಂಟೆ ಕದಿರೇನಹಳ್ಳಿಯಲ್ಲಿರೋ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿರೋ ಐತಿಹಾಸಿಕ ವೇಣುಗೋಪಾಲ ಸ್ವಾಮಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ. ಆದ್ರೆ ಮೊನ್ನೆ ರಾತ್ರಿ ಯಾರೋ ಕಿಡಿಗೇಡಿಗಳು ದೇವಸ್ಥಾನದ ಗೋಪುರದ ಮೇಲಿದ್ದ ವಿಗ್ರಹಗಳು ಹಾಗೂ ಧ್ವಜ ಕಂಬವನ್ನು ವಿರೂಪಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ದೇವಾಲಯದ ಗೋಡೆಗಳ ಮೇಲೆ ವಿಚಿತ್ರವಾಗಿ ಹೆಸರುಗಳನ್ನು ಬರೆದು ವಿಕಾರ ಮಾಡಿದ್ದಾರೆ. ವಿಷಯ ತಿಳೀತಿದ್ದಂತೆ ಸ್ಥಳಕ್ಕೆ ಬಂದ ಸುತ್ತಮುತ್ತಲ ಗ್ರಾಮಸ್ಥರು ಕ್ಯಾಸಂಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ರು. ತಕ್ಷಣ ದೌಡಾಯಿಸಿದ ಖಾಕಿ ಪಡೆ ಪರಿಶೀಲನೆ ನಡೆಸಿದ್ರು. ಇನ್ನು ಈ ದೇಗುಲದ ಕೂಗಳತೆ ದೂರದಲ್ಲೇ ಗೋಶಾಲಿಯಾ ದರ್ಗಾವಿದ್ದು, 3 ದಿನಗಳಿಂದ ಉರುಸ್ ಕಾರ್ಯಕ್ರಮವಿತ್ತು. ಹೀಗಾಗಿ ಇದೇ ವೇಳೆ ದುಷ್ಕರ್ಮಿಗಳು ಕೋಮು ಸೌಹಾರ್ದತೆ ಕದಡಲು ಉದ್ದೇಶ ಪೂರ್ವಕವಾಗಿ ಕೃತ್ಯ ಎಸಗಿದ್ದಾರೆ ಅನ್ನೋದು ಸ್ಥಳೀಯರ ಆರೋಪ.
ಸೂಕ್ಷ್ಮ ವಿಚಾರವಾಗಿದ್ರಿಂದ ಪೊಲೀಸ್ರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ರು. ಸ್ಥಳಕ್ಕೆ ಭೇಟಿ ನೀಡಿ ಕೆಜಿಎಫ್ ಎಸ್ಪಿ ಧರಣಿದೇವಿ, ಡಿವೈಎಸ್ಪಿ ಮುರಳೀಧರ್ ಪರಿಶೀಲನೆ ನಡೆಸಿದ್ರು. ಕಿಡಿಗೇಡಿಗಳ ಬಂಧನಕ್ಕೆ 4 ತಂಡ ರಚಿಸಲಾಗಿದ್ದು, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಗೋಶಾಲಿಯಾ ದರ್ಗಾದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ರದ್ದುಪಡಿಸಿ, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸದ್ಯ ಕಂದಾಯ ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳು ವಿರೂಪವಾಗಿರುವ ದೇವರ ಮೂರ್ತಿಗಳನ್ನು ಸರಿಪಡಿಸಿ ದೇವಸ್ಥಾನ ಅಭಿವೃದ್ಧಿಪಡಿಸೋದಾಗಿ ಹೇಳಿದ್ದಾರೆ. ಒಟ್ಟಾರೆ ಇತ್ತೀಚೆಗೆ ಕೋಮು ಸೌಹಾರ್ದ ಕದಡುವ ಘಟನೆಗಳು ಹೆಚ್ಚಾಗುತ್ತಿದ್ದು ಪೊಲೀಸರು ಮತ್ತಷ್ಟು ಅಲರ್ಟ್ ಆಗಿರಬೇಕಿದೆ.
ವರದಿ: ರಾಜೇಂದ್ರಸಿಂಹ, ಟಿವಿ9, ಕೋಲಾರ
ಇದನ್ನೂ ಓದಿ: Shocking News: ಗಂಡ ಸತ್ತ ಮೇಲೆ ತವರುಮನೆಯಲ್ಲಿದ್ದ ವಿಧವೆಗೆ ತಮ್ಮನ ಮೇಲೇ ಲವ್ ಆಯ್ತು; ಹೀಗೊಂದು ವಿಚಿತ್ರ ಪ್ರೇಮಕತೆ!
ರೋಡ್ ಡಿವೈಡರ್ಗೆ ಬೈಕ್ ಡಿಕ್ಕಿ; ಬೆಂಗಳೂರಿನ ಇಬ್ಬರೂ ಬೈಕ್ ಸವಾರರು ಸ್ಥಳದಲ್ಲೇ ಸಾವು