ರೋಡ್​ ಡಿವೈಡರ್​​ಗೆ ಬೈಕ್ ಡಿಕ್ಕಿ; ಬೆಂಗಳೂರಿನ ಇಬ್ಬರೂ ಬೈಕ್ ಸವಾರರು ಸ್ಥಳದಲ್ಲೇ ಸಾವು

ಅಮರೇಶ್ (49) ಮತ್ತು ಕಾಂತರಾಜ್ (47) ಮೃತಪಟ್ಟವರು. ಇಬ್ಬರೂ ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿಗಳು. ಮೃತದೇಹಗಳನ್ನು ಚನ್ನಪಟ್ಟಣದ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.

ರೋಡ್​ ಡಿವೈಡರ್​​ಗೆ ಬೈಕ್ ಡಿಕ್ಕಿ; ಬೆಂಗಳೂರಿನ ಇಬ್ಬರೂ ಬೈಕ್ ಸವಾರರು ಸ್ಥಳದಲ್ಲೇ ಸಾವು
ರೋಡ್​ ಡಿವೈಡರ್​​ಗೆ ಬೈಕ್ ಡಿಕ್ಕಿ; ಬೆಂಗಳೂರಿನ ಇಬ್ಬರೂ ಬೈಕ್ ಸವಾರರು ಸ್ಥಳದಲ್ಲೇ ಸಾವು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 25, 2022 | 7:13 PM

ರಾಮನಗರ: ರಸ್ತೆ ವಿಭಜಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ, ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಗ್ರಾಮದ ಬಳಿ ನಡೆದಿದೆ. ಮಂಡ್ಯದಿಂದ ಬೆಂಗಳೂರಿಗೆ ಹೋಗುವಾಗ ಈ ಘಟನೆ ನಡೆದಿದೆ.

ಅಮರೇಶ್ (49) ಮತ್ತು ಕಾಂತರಾಜ್ (47) ಮೃತಪಟ್ಟವರು. ಅಮರೇಶ್ ಖಾಸಗಿ ಕಂಪನಿಯಲ್ಲಿ ಉದ್ಯೋಗಿ, ಕಾಂತರಾಜ್ ಏರ್ ಪೋರ್ಟ್ ನಲ್ಲಿ ಕಾರು ಚಾಲಕ. ಇಬ್ಬರೂ ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿಗಳು. ಮೃತದೇಹಗಳನ್ನು ಚನ್ನಪಟ್ಟಣದ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.

ಕೊಟ್ಟ ಸಾಲ ವಾಪಸ್ ನೀಡಿಲ್ಲಂತ ಸ್ನೇಹಿತರಿಂದಲೇ ಸಹೋದರರ ಕಿಡ್ನಾಪ್; ಅಣ್ಣ ಸಾವು, ತಮ್ಮನ ಸ್ಥಿತಿ ಚಿಂತಾಜನಕ ಚಿಕ್ಕಬಳ್ಳಾಪುರ: ಆತ ಕಷ್ಟ ಅಂತ ಗೆಳೆಯನ ಬಳಿ ಹಣ ಪಡೆದಿದ್ದ. ಆದ್ರೆ ಹಣ ಕೊಡೋದು ಲೇಟಾಯ್ತು ಅಂತ ಸ್ನೇಹಿತರೇ ಅವನನ್ನು ಸಿನಿಮಾ ಸ್ಟೈಲ್ನಲ್ಲಿ ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾರೆ. ಹಂತಕರ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನು ಖೆಡ್ಡಾಗೆ ಕೆಡವಿದ್ದಾರೆ. ಆರೋಪಿ ಜಾಫರ್, ಶೌಕತ್, ಮೌಲಾ, ಮುಬಾರಕ್ ಬಂಧಿತರು.

ಬೆಂಗಳೂರಿನ ಯಲಹಂಕ ಬಳಿ ಇರುವ ಚಿಕ್ಕಬೆಟ್ಟಹಳ್ಳಿಯಲ್ಲಿ ಕೇವಲ 13 ಸಾವಿರ ಹಣಕ್ಕಾಗಿ ಸ್ನೇಹಿತ ಪ್ರಾಣವನ್ನೇ ತೆಗೆದಿದ್ದಾರೆ. ಬೆಂಗಳೂರಿನ ಇಲಿಯಾಜ್ ನಗರದಲ್ಲಿ ವಾಸವಾಗಿದ್ದ ಶಿಡ್ಲಘಟ್ಟ ಮೂಲದ ಸೈಯದ್ ಉಮರ್ ಅನ್ನೋನು ಆರೋಪಿ ಜಾಫರ್ ಬಳಿ 30 ಸಾವಿರ ಸಾಲ ಪಡೆದಿದ್ನಂತೆ. ಇದ್ರಲ್ಲಿ 17 ಸಾವಿರ ವಾಪಸ್ ಕೊಟ್ಟು ಇನ್ನೂ 13 ಸಾವಿರ ರೂಪಾಯಿ ಬಾಕಿ ಉಳಿಸಿಕೊಂಡಿದ್ನಂತೆ. ಎಷ್ಟೇ ಕೇಳಿದ್ರೂ ಹಣ ಕೊಡದಿದ್ದಾಗ ಜಾಫರ್ ತನ್ನ ಪಟಾಲಂ ಕಟ್ಟಿಕೊಂಡು ಬಂದು ಸೈಯದ್ ಉಮರ್ ಹಾಗೂ ಆತನ ತಮ್ಮ ಸೈಯದ್ ಜಭಿನನ್ನು ಕಿಡ್ನಾಪ್ ಮಾಡಿದ್ರು. ಬಳಿಕ ಸೈಯದ್ ಉಮರ್ನನ್ನು ಕೊಂದು, ತಮ್ಮನಿಗೆ ಹೊಡೆದು ಪರಾರಿಯಾಗಿದ್ರು.

ಅಂದಹಾಗೇ, ಮಾರ್ಚ್ 14ರಂದು ಜಾಫರ್ ಅಂಡ್ ಟೀಮ್, ಬೆಂಗಳೂರಿನಲ್ಲಿ ಉಮರ್ನನ್ನು ಕಿಡ್ನಾಪ್ ಮಾಡಿತ್ತು. ಬಳಿಕ ಶಿಡ್ಲಘಟ್ಟದಲ್ಲಿದ್ದ ತಮ್ಮನ ಬಳಿ ಬಂದು ಸಾಲದ ಹಣ ಕೊಡುವಂತೆ ಕೇಳಿದ್ರು. ಆದ್ರೆ ಹಣ ಇಲ್ಲ ಎಂದಿದ್ದಕ್ಕೆ ಇಬ್ಬರನ್ನೂ ಕಾರಿನಲ್ಲಿ ಎತ್ತಾಕ್ಕೊಂಡು ಹೋಗಿದ್ದಾರೆ. ಚಿಕ್ಕಬಳ್ಳಾಪುರ ದೇವನಹಳ್ಳಿ ನಂದಿ ಬೆಟ್ಟದ ಕ್ರಾಸ್ ಸುತ್ತಾಡಿಸಿ, ಕಾರಿನಲ್ಲಿ ಹಾಗೂ ಅರಣ್ಯದಲ್ಲಿ ಮನಸ್ಸೊ ಇಚ್ಚೆ ಥಳಿಸಿದ್ದಾರೆ. ಕೊನೆಗೆ ಮುತ್ತೂರು ಗ್ರಾಮದ ಬಳಿ ನಡು ರಸ್ತೆಯಲ್ಲಿ ಇಬ್ಬರನ್ನು ಎಸೆದು ಪರಾರಿಯಾಗಿದ್ರು, ಆಸ್ಪತ್ರೆ ಸೇರುವಷ್ಟರಲ್ಲಿ ಸೈಯದ್ ಉಮರ್ ಮೃತಪಟ್ಟರೆ. ಆತನ ತಮ್ಮ ಸೈಯದ್ ಜಬಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸಂಬಂಧಿಕರು ಕೊಟ್ಟ ದೂರಿನ ಹಿನ್ನೆಲೆ ತನಿಖೆ ನಡೆಸಿದ ಶಿಡ್ಲಘಟ್ಟ ಪೊಲೀಸ್ರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಕಷ್ಟ ಅಂತ ಸ್ನೇಹಿತರ ಬಳಿ ಸಾಲ ಪಡೆದಿದ್ದ ಸೈಯದ್ ಉಮರ್ 13 ಸಾವಿರಕ್ಕಾಗಿ ಪ್ರಾಣವನ್ನೇ ಕಳೆದುಕೊಂಡಿದ್ದು ಮಾತ್ರ ದುರಂತವೇ ಸರಿ.