AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್​ಖೈದಾ ಉಗ್ರರಿಗಂತೂ ಅರ್ಥವಾಗುವುದಿಲ್ಲ, ಆದರೆ ಭಾರತೀಯ ಮುಸ್ಲಿಮರಿಗೇನಾಗಿದೆ?-ಅಸ್ಸಾಂ ಸಿಎಂ ಹಿಮಂತ್​ ಬಿಸ್ವಾ ಶರ್ಮಾ ಪ್ರಶ್ನೆ

ಶಾಲಾ-ಕಾಲೇಜುಗಳಲ್ಲಿ ನಿಯಮ ಪಾಲನೆ ಮಾಡಿದರೆ ಸಾಕು. ಅಲ್ಲಿಂದ ಮನೆಗೆ ಬಂದ ತಕ್ಷಣ ನಿಮಗೇನು ಇಷ್ಟವೋ ಅದನ್ನು ಧರಿಸಬಹುದಲ್ಲ ಎಂದು ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಅಲ್​ಖೈದಾ ಉಗ್ರರಿಗಂತೂ ಅರ್ಥವಾಗುವುದಿಲ್ಲ, ಆದರೆ ಭಾರತೀಯ ಮುಸ್ಲಿಮರಿಗೇನಾಗಿದೆ?-ಅಸ್ಸಾಂ ಸಿಎಂ ಹಿಮಂತ್​ ಬಿಸ್ವಾ ಶರ್ಮಾ ಪ್ರಶ್ನೆ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ
TV9 Web
| Updated By: Lakshmi Hegde|

Updated on:Apr 07, 2022 | 10:29 AM

Share

ಜೈಶ್ರೀರಾಮ್​ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿಗಳ ಎದುರು ಅಲ್ಲಾ ಹು ಅಕ್ಬರ್​ ಎಂದು ಕೂಗಿದ್ದ ಮಂಡ್ಯದ ಮುಸ್ಕಾನ್​ಳನ್ನು ಅಲ್​ ಖೈದಾ (Al-Qaeda) ಉಗ್ರ ಸಂಘಟನೆ ಮುಖ್ಯಸ್ಥ ಅಯ್ಮಾನ್​ ಅಲ್​ ಜವಾಹಿರಿ ಹೊಗಳಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮತ್ತೆ ಈ ಬಗ್ಗೆ ಚರ್ಚೆ ಶುರುವಾಗಿದೆ. ಮುಸ್ಕಾನ್​ ತಂದೆಯಂತೂ ನಮಗೆ ಆ ಜವಾಹಿರಿ ಯಾರೆಂದೇ ಗೊತ್ತಿಲ್ಲ. ನಮಗಿದೆಲ್ಲ ತಲೆನೋವು ಬೇಡವೇ ಬೇಡ ಎಂದುಬಿಟ್ಟಿದ್ದಾರೆ. ಆದರೂ ಮಂಡ್ಯದ ಮುಸ್ಕಾನ್​ಗೆ ಅಲ್​ಖೈದಾ ಮುಖ್ಯಸ್ಥ ಪ್ರತಿಕ್ರಿಯೆ ಕೊಟ್ಟಿದ್ದು ಈಗ ರಾಷ್ಟ್ರಮಟ್ಟದಲ್ಲಿ ಮತ್ತೆ ಚರ್ಚೆಗೆ ಕಾರಣವಾಗುತ್ತಿದೆ. ಹಾಗೇ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಕೂಡ ಈ ಬಗ್ಗೆ ಮಾತನಾಡಿದ್ದು, ಅಲ್​ಖೈದಾ ಉಗ್ರರಿಗಂತೂ ಈ ಸಮವಸ್ತ್ರದ ಮಹತ್ವವೆಲ್ಲ ಅರ್ಥವಾಗುವುದಿಲ್ಲ. ಆದರೆ ಭಾರತೀಯ ಮುಸ್ಲಿಮರು ಸಮವಸ್ತ್ರದ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು. ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಸಂಕೇತ ವಸ್ತ್ರಗಳನ್ನು ನಿರ್ಬಂಧಿಸದೆ ಇದ್ದರೆ, ಆ ಸಂಸ್ಥೆಗಳೆಲ್ಲ ಧಾರ್ಮಿಕ ಆಚರಣೆ ಮಾಡುವ ಕೇಂದ್ರಗಳಾಗಿ ಪರಿವರ್ತನೆಗೊಳ್ಳುತ್ತವೆ ಎಂದು ಹೇಳಿದ್ದಾರೆ. ಈ ಮೂಲಕ ಕರ್ನಾಟಕ ಹೈಕೋರ್ಟ್​ ಹಿಜಾಬ್​ ವಿಚಾರಕ್ಕೆ ಸಂಬಂಧಪಟ್ಟಂತೆ ನೀಡಿರುವ ತೀರ್ಪಿಗೆ ಬೆಂಬಲ ಸೂಚಿಸಿದ್ದಾರೆ.

ಶಾಲೆ-ಕಾಲೇಜುಗಳಿಗೆ ಎಲ್ಲ ಧರ್ಮದವರೂ ಹೋಗುತ್ತಾರೆ. ಅಲ್ಲಿ ಒಬ್ಬರು ಹಿಜಾಬ್ ಧರಿಸಿದರೆ, ಇನ್ನೊಂದು ಧರ್ಮದವರು ತಮ್ಮ ಧಾರ್ಮಿಕ ಸಂಕೇತವನ್ನು ಧರಿಸಿ ಬರುತ್ತಾರೆ. ಹೀಗೆ ಆದರೆ ಶಾಲೆ-ಕಾಲೇಜುಗಳು ಧಾರ್ಮಿಕ ಆಚರಣೆಗಳನ್ನು ಆಚರಿಸುವ ಸ್ಥಳಗಳಾಗಿ ಪರಿವರ್ತನೆಗೊಳ್ಳುತ್ತವೆ. ಯಾರಲ್ಲೂ ಬೇಧ-ಭಾವ ಮೂಡಬಾರದು ಎಂಬ ಕಾರಣಕ್ಕೆ ಸಮವಸ್ತ್ರ ನಿಗದಿಪಡಿಸಲಾಗುತ್ತದೆ. ಅದರ ಮೇಲೆ ಕೂಡ ಹೀಗೆ ಹಿಜಾಬ್​, ಮತ್ತೊಂದು ಧರಿಸಿದರೆ ಅಲ್ಲಿ ಸಮಾನತೆಗೆ ಏನು ಅರ್ಥ ಬಂದಂತಾಯಿತು ಎಂದು ಸಿಎಂ ಪ್ರಶ್ನಿಸಿದ್ದಾರೆ.

ಅಲ್​ ಖೈದಾ ಸಂಘಟನೆಯ ಸಿಬ್ಬಂದಿಗೆ ಇದೆಲ್ಲ ಅರ್ಥವಾಗುವಂಥದ್ದಲ್ಲ. ಆದರೆ ಭಾರತೀಯ ಮುಸ್ಲಿಮರು ಇದನ್ನು ಅರಿತುಕೊಳ್ಳಬೇಕು. ಶಾಲಾ-ಕಾಲೇಜುಗಳಲ್ಲಿ ನಿಯಮ ಪಾಲನೆ ಮಾಡಿದರೆ ಸಾಕು. ಅಲ್ಲಿಂದ ಮನೆಗೆ ಬಂದ ತಕ್ಷಣ ನಿಮಗೇನು ಇಷ್ಟವೋ ಅದನ್ನು ಧರಿಸಬಹುದಲ್ಲ. ಭಾರತೀಯ ಮುಸ್ಲಿಮರು ಇದನ್ನು  ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಆಶಯ ನನ್ನದು ಎಂದೂ ಹಿಮಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ.  ಅಂದಹಾಗೇ, ಜವಾಹಿರಿ ಸುಮಾರು 8.43 ನಿಮಿಷಗಳ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾನೆ. ಅದರಲ್ಲಿ ಮುಸ್ಕಾನ್​​ರನ್ನು ಸಿಕ್ಕಾಪಟೆ ಹೊಗಳಿದ್ದಾನೆ. ಈತನೊಬ್ಬ ಮೋಸ್ಟ್​ ವಾಂಟೆಡ್​ ಉಗ್ರನಾಗಿದ್ದು, ಮುಸ್ಕಾನ್​ಗೆ ಅಲ್ಲಾಹು ಒಳ್ಳೆಯದನ್ನು ಮಾಡಲಿ ಎಂದು ಹೇಳಿದ್ದನ್ನು ವಿಡಿಯೋದಲ್ಲಿ ಕೇಳಬಹುದು.

ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ಶಹಬಾಸ್ ಎಂದ ಅಲ್​ ಖೈದಾ ನಾಯಕನನ್ನು ಎಲ್ರೂ ತರಾಟೆಗೆ ತೆಗೆದುಕೊಂಡಿರುವಾಗ ಸಿದ್ದರಾಮಯ್ಯ ಏನಂದರು ನೋಡಿ!?

Published On - 9:55 am, Thu, 7 April 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?