ಬೆಂಗಳೂರಲ್ಲಿ ಹೊಸ ಜೀವನ ಶುರು ಮಾಡಿದ ಅಸ್ಸಾಂ ಮುಖ್ಯಮಂತ್ರಿ ಪುತ್ರ; ಹೆಮ್ಮೆಯಿಂದ ಫೋಟೋ ಹಂಚಿಕೊಂಡ ಹಿಮಂತ ಬಿಸ್ವಾ ಶರ್ಮಾ

ಬೆಂಗಳೂರಲ್ಲಿ ಹೊಸ ಜೀವನ ಶುರು ಮಾಡಿದ ಅಸ್ಸಾಂ ಮುಖ್ಯಮಂತ್ರಿ ಪುತ್ರ; ಹೆಮ್ಮೆಯಿಂದ ಫೋಟೋ ಹಂಚಿಕೊಂಡ ಹಿಮಂತ ಬಿಸ್ವಾ ಶರ್ಮಾ
ಅಸ್ಸಾಂ ಸಿಎಂ ಕುಟುಂಬ

ನನ್ನ ಮಗ ನನ್ನನ್ನು ಹಿಂಬಾಲಿಸಿ ರಾಜಕೀಯಕ್ಕೆ ಬರುವುದು ನನಗೆ ಇಷ್ಟವಿಲ್ಲ ಎಂದು ಹಿಮಂತ ಬಿಸ್ವಾ ಶರ್ಮಾ ಈಗಾಗಲೇ ಹೇಳಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ನಂದಿಲ್​ ರಾಜಕೀಯದಿಂದ ದೂರವೇ ಉಳಿಯಬೇಕು ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

TV9kannada Web Team

| Edited By: Lakshmi Hegde

Nov 01, 2021 | 4:34 PM

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Assam Chief Minister Himanta Biswa Sarma) ಪುತ್ರ ನಂದಿಲ್​ ಬಿಸ್ವಾ ಶರ್ಮಾ (Nandil Biswa Sarma) ಬೆಂಗಳೂರಿನ  ನ್ಯಾಷನಲ್​ ಲಾ ಸ್ಕೂಲ್​ ಆಫ್​ ಇಂಡಿಯಾ ಯೂನಿವರ್ಸಿಟಿ(NLSIU ಅಥವಾ NLS)ಗೆ ಸೇರ್ಪಡೆಯಾಗಿದ್ದಾರೆ.  ಪುತ್ರ ನಂದಿಲ್​ರನ್ನು ಈ ರಾಷ್ಟ್ರೀಯ ಕಾನೂನು ಶಾಲೆಯ ಹಾಸ್ಟೆಲ್​​ಗೆ ಸೇರಿಸಿರುವ ಹಿಮಂತ ಬಿಸ್ವಾ ಶರ್ಮಾ, ಭಾನುವಾರ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಹಿಮಂತ್​ ಬಿಸ್ವಾ ಶರ್ಮಾರ ಪತ್ನಿ ರಿನಿಕಿ ಭುಯಾನ್ ಶರ್ಮಾ ಮತ್ತು ಮಗಳು ಸುಕನ್ಯಾ ಕೂಡ ಇದ್ದಾರೆ. ನಂದಿಲ್​ ಇಂದಿನಿಂದ ಹಾಸ್ಟೆಲ್​​ನಲ್ಲಿ ತನ್ನ ಹೊಸ ಜೀವನ ಶುರು ಮಾಡುತ್ತಿದ್ದಾನೆ. ನಮ್ಮ ಸಂಪೂರ್ಣ ಆಶೀರ್ವಾದದೊಂದಿಗೆ ಅವನನ್ನು ಇಲ್ಲಿ ಬಿಟ್ಟು ತೆರಳುತ್ತಿದ್ದೇವೆ ಎಂದು ಹೇಳಿದ್ದಾರೆ. 

ನಂದಿಲ್​ ಶರ್ಮಾ 2019ರಲ್ಲಿ ಪ್ರತಿಷ್ಠಿತ ಡೂನ್​ ಶಾಲೆಯಲ್ಲಿ ಪದವಿ ಓದಿದ್ದಾರೆ. ಡೂನ್​ ಸ್ಕೂಲ್​​ನಲ್ಲಿ ಅವರು ಕ್ಯಾಪ್ಟನ್​ ಕೂಡ ಆಗಿದ್ದರು. ಅವರು ಪದವಿ ದಿನಗಳಲ್ಲಿ ಮಾತನಾಡಿದ ವಿಡಿಯೋವನ್ನು ಕೂಡ ಹಿಮಂತ್​ ಬಿಸ್ವಾ ಶರ್ಮಾ ಶೇರ್​ ಮಾಡಿದ್ದಾರೆ.  ಅದರಲ್ಲಿ ಅವರು ತಮ್ಮ ಬಾಲ್ಯದ ದಿನಗಳ ಬಗ್ಗೆ ಮಾತನಾಡಿದ್ದಾರೆ. ನಾನು ಚಿಕ್ಕವನಿದ್ದಾಗ ಮನೆಯಿಂದ ಹೊರಬರಲೇ ಹೆದರುತ್ತಿದ್ದೆ..ಆಗಿನಿಂದ ಶಾಲಾ ಕ್ಯಾಪ್ಟನ್​ ಆಗುವವರೆಗೆ ತಮ್ಮ ಪ್ರಯಾಣ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ.  ಇದೀಗ ಮಗನನ್ನು ಹಾಸ್ಟೆಲ್​ ರೂಮ್​​ನಲ್ಲಿ ಬಿಟ್ಟ ಫೋಟೋವನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಂಚಿಕೊಳ್ಳುತ್ತಿದ್ದಂತೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಅನೇಕರು ವಿಶ್​ ಮಾಡಿ, ಒಳಿತಾಗಲಿ ಎಂದು ಹಾರೈಸಿದ್ದಾರೆ.

ಇನ್ನು ನನ್ನ ಮಗ ನನ್ನನ್ನು ಹಿಂಬಾಲಿಸಿ ರಾಜಕೀಯಕ್ಕೆ ಬರುವುದು ನನಗೆ ಇಷ್ಟವಿಲ್ಲ ಎಂದು ಹಿಮಂತ ಬಿಸ್ವಾ ಶರ್ಮಾ ಈಗಾಗಲೇ ಹೇಳಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ನಂದಿಲ್​ ರಾಜಕೀಯದಿಂದ ದೂರವೇ ಉಳಿಯಬೇಕು. ಅದು ಅವನಿಗೇ ಒಳ್ಳೆಯದು. ಈ ಜಗತ್ತಿಗೆ ಅವನು ಬೇಡ..ಇಲ್ಲಿನ ಸವಾಲುಗಳನ್ನು ಅವನೂ ಎದುರಿಸುವುದೂ ಬೇಡ.  ಅಷ್ಟಕ್ಕೂ ಇಲ್ಲಿನ ಕಷ್ಟಗಳನ್ನು ಅವರು ಸಹಿಸುವಷ್ಟು ಸಮರ್ಥರು ಆಗಿದ್ದಾರೆ ಎಂಬ ನಂಬಿಕೆಯೂ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ನಮಗೆ ಹಿರಿಯರು, ಆದ್ರೆ ಹೋರಾಟ ಇನ್ನೂ ಯುವಕರಂತೆ: ವಾಟಾಳ್ ನಾಗರಾಜ್​ರನ್ನು ಹೊಗಳಿದ ಸಿಎಂ ಬೊಮ್ಮಾಯಿ

ನವಾಬ್​ ಮಲಿಕ್​ ಬಗ್ಗೆ ಸ್ಫೋಟಕ ವಿಷಯ ಬಹಿರಂಗ ಮಾಡ್ತೇನೆ; ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್​ ಎಚ್ಚರಿಕೆ

Follow us on

Related Stories

Most Read Stories

Click on your DTH Provider to Add TV9 Kannada