ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ತನ್ನ ಮಗುವನ್ನು ಬೇರೆಯವರಿಗೆ ಕೊಟ್ಟು ಡ್ರಾಮ ಮಾಡಿದ್ದ ತಾಯಿ ಬಂಧನ!
ಬಂಧಿತ ಆರೋಪಿ ಸಲ್ಮಾ ತನ್ನ ಮಗುವನ್ನ ತಾನೇ ಕಿಡ್ನ್ಯಾಪ್ ಮಾಡಿಸಿ ನಾಟಕವಾಡಿದ್ದಳು. ಕೈಯಲ್ಲಿದ್ದ ಮಗುವನ್ನು ಕಸಿದುಕೊಂಡು ಹೋದರು ಎಂದು ದೂರಿದ್ದಳು. ನಂತರ ಜೂನ್ 13ಕ್ಕೆ ಸಲ್ಮಾ ಹಾಗೂ ಪೋಷಕರು ಸೇರಿ ದೂರು ನೀಡಿದ್ದರು.
ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ (KIMS Hospital) ತನ್ನ ಮಗುವನ್ನು ಬೇರೆಯವರಿಗೆ ಕೊಟ್ಟು ಮಗು ಕಳ್ಳತನವಾಗಿದೆ ಎಂದು ನಾಟಕ ಮಾಡಿದ್ದ ಮಗುವಿನ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಲ್ಮಾ ಬಂಧಿತ ಮಹಿಳೆ. ಕೂಲಂಕುಷವಾಗಿ ವಿಚಾರಣೆ ನಡೆಸಿದ ಬಳಿಕ ವಿದ್ಯಾನಗರ ಪೊಲೀಸರು ಸಲ್ಮಾಳನ್ನು ತಡರಾತ್ರಿ ಬಂಧಿಸಿ ನ್ಯಾಯಾಧೀಶರೆದರು ಹಾಜರು ಪಡಿಸಿದ್ದಾರೆ. 14 ದಿನಗಳ ವರಗೆ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಆದೇಶ ನೀಡಿದೆ. ಬಂಧಿತ ಆರೋಪಿ ಸಲ್ಮಾ ತನ್ನ ಮಗುವನ್ನ ತಾನೇ ಕಿಡ್ನ್ಯಾಪ್ ಮಾಡಿಸಿ ನಾಟಕವಾಡಿದ್ದಳು.
ಜೂನ್ 13ಕ್ಕೆ ಕೈಯಲ್ಲಿದ್ದ ಮಗುವನ್ನು ಕಸಿದುಕೊಂಡು ಹೋದರು ಎಂದು ಸಲ್ಮಾ ದೂರಿದ್ದಳು. ನಂತರ ಸಲ್ಮಾ ಹಾಗೂ ಪೋಷಕರು ಸೇರಿ ದೂರು ನೀಡಿದ್ದರು. ಮಗು ಕಾಣೆಯಾದ ಮಾರನೆ ದಿನ ಕಿಮ್ಸ್ ಆವರಣದಲ್ಲಿ ಮಗು ಪತ್ತೆಯಾಗಿತ್ತು.
ಬಂಧನಕ್ಕೆ ಒಳಗಾಗಿರುವ ಅಸ್ಮಾ ಮಗುವಿನ ಮಿದುಳು ಬೆಳವಣಿಗೆ ಆಗದ ಹಿನ್ನೆಲೆ ಕಿಡ್ನ್ಯಾಪ್ ಮಾಡಿಸಿದ್ದಾಗಿ ಹೇಳಿಕೆ ನೀಡಿದ್ದಾಳೆ. ಸದ್ಯ ಮಗುವಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇದನ್ನೂ ಓದಿ: ‘777 ಚಾರ್ಲಿ’ ಸಿನಿಮಾಗೆ ಮಾತ್ರ ತೆರಿಗೆ ವಿನಾಯಿತಿ ಯಾಕೆ? ಬೊಮ್ಮಾಯಿ ಸರ್ಕಾರದ ಕಿವಿ ಹಿಂಡಿದ ಮಂಸೋರೆ
ಘಟನೆ ಏನು? ಜೂನ್ 13 ನಾಪತ್ತೆಯಾಗಿದ್ದ 40 ದಿನದ ಮಗು ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಪತ್ತೆಯಾಗಿತ್ತು. ಆಸ್ಪತ್ರೆಯಲ್ಲಿ ಮಧ್ಯಾಹ್ನದ ಹೊತ್ತಿಗೆ ತಾಯಿ ಕೈಯಲ್ಲಿದ್ದ ಹಸುಗೂಸನ್ನು ಖದೀಮರು ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ದೂರು ದಾಖಲಾಗಿತ್ತು. ಮಗುವಿಗಾಗಿ ಪೊಲೀಸರು ಮೂರು ತಂಡ ರಚಿಸುವ ಮೂಲಕ ಬಲೆ ಬೀಸಿದ್ದರು. ಪೊಲೀಸರ ತನಿಖೆ ಚುರುಕುಗೊಂಡ ಹಿನ್ನೆಲೆ ಭಯಗೊಂಡ ಆರೋಪಿತರು ಮಗುವನ್ನು ತಂದು ಆಸ್ಪತ್ರೆ ಆವರಣದಲ್ಲಿ ಬಿಟ್ಟು ಹೋಗಿದ್ದರು.
ತಾಯಿ ಸಲ್ಮಾ ತಾನೇ ಕಾರಿಡಾರ್ಗೆ ಬಂದು ಮಗು ನೀಡಿ ಇಷ್ಟೆಲ್ಲಾ ಡ್ರಾಮ ಮಾಡಿದ್ದಾಳೆ. ಕಿಮ್ಸ್ ಸಿಸಿಟಿವಿ ಪರಿಶೀಲನೆ ಬಳಿಕ ತಾಯಿ ಸಲ್ಮಾ ಬೇರೆಯವರಿಗೆ ಮಗು ನೀಡಿ, 103 ವಾಡ್೯ ನಲ್ಲಿದ್ದ ಮಗುವನ್ನ ಕಸಿದುಕೊಂಡು ಹೋದರೆಂದು ಕಥೆ ಕಟ್ಟಿದ್ದ ನಾಟಕ ಬಯಲಾಗಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:34 am, Sun, 19 June 22