ಹುಬ್ಬಳ್ಳಿಯಲ್ಲಿ ಕ್ರೈಂ ಮಟ್ಟ ಹಾಕಲು ಪಣತೊಟ್ಟ ಖಾಕಿ ಪಡೆ; ಬರೋಬ್ಬರಿ 172 ರೌಡಿ ಶೀಟರ್​ ಮನೆಗಳ ಮೇಲೆ ಪೊಲೀಸರ ದಾಳಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 28, 2023 | 7:50 PM

ಅದು ಚೋಟಾ ಮುಂಬೈ ಎಂದು ಹೆಸರುವಾಸಿಯಾದ ನಗರ. ಅಲ್ಲಿ ಸಣ್ಣ ಪುಟ್ಟ ವಿಷಯಕ್ಕೂ ಚಾಕು ಚೂರಿ ಹಾಕೋರಿಗೆ ಏನು ಕಡಿಮೆ ಇಲ್ಲ. ದಿನಕ್ಕೆ ಒಂದಲ್ಲ ಒಂದು ಕಡೆ ಚಾಕು, ಚೂರಿ ಹಾಕುವುದು ಕಾಮನ್ ಆಗಿದೆ. ಆ ಚೋಟಾ ಮುಂಬೈನಲ್ಲಿ ಹೆಚ್ಚು ಕಡಿಮೆ ಒಂದು ಸಾವಿರ ರೌಡಿ ಶೀಟರ್ ಗಳಿದ್ದಾರೆ. ಪೊಲೀಸರು ರೌಡಿಗಳನ್ನ ಮಟ್ಟ ಹಾಕೋಕೆ ಮುಂದಾಗಿದ್ದಾರೆ‌. ಕಳೆದ ಕೆಲ ದಿನಗಳಿಂದ ಅಲ್ಲಿನ ಪೊಲೀಸರು ರೌಡಿ ಶೀಟರ್​ಗಳ ಮನೆ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ‌.

ಹುಬ್ಬಳ್ಳಿಯಲ್ಲಿ ಕ್ರೈಂ ಮಟ್ಟ ಹಾಕಲು ಪಣತೊಟ್ಟ ಖಾಕಿ ಪಡೆ; ಬರೋಬ್ಬರಿ 172 ರೌಡಿ ಶೀಟರ್​ ಮನೆಗಳ ಮೇಲೆ ಪೊಲೀಸರ ದಾಳಿ
ಹುಬ್ಬಳ್ಳಿ ಪೊಲೀಸರಿಂದ ರೌಡಿಶೀಟರ್​ ಮನೆ ಮೇಲೆ ದಾಳಿ
Follow us on

ಹುಬ್ಬಳ್ಳಿ,ನ.28: ಚೋಟಾ ಮುಂಬೈ ಹುಬ್ಬಳ್ಳಿ(Hubballi)ಯಲ್ಲಿ ರೌಡಿಶೀಟರ್ ಮಟ್ಟ ಹಾಕಲು ಖಾಕಿ ಪಣತೊಟ್ಟಂತೆ ಕಾಣುತ್ತಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗಲ್ಲಿಗೊಬ್ಬ ರೌಡಿಶೀಟರ್(Rowdy Sheeter) ಇದ್ದಾನೆ. ಸಣ್ಣ ಪುಟ್ಟ ವಿಷಯಕ್ಕೆ ಚಾಕು-ಚೂರಿ ಹಾಕಿ ಪುಡಿರೌಡಿಗಳು ಹುಟ್ಟಿಕೊಂಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ ವ್ಯಾಪ್ತಿಯಲ್ಲಿ ಹೆಚ್ಚು ಕಡಿಮೆ ಒಂದು ಸಾವಿರಕ್ಕೂ ಅಧಿಕ ರೌಡಿ ಶೀಟರ್​ಗಳಿದ್ದಾರೆ. ಕೆಲವರು ಹಲವು ವರ್ಷಗಳಿಂದ ಕೋರ್ಟ್​ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾರೆ. ಇಂತವರನ್ನ ಪಟ್ಟಿ ಮಾಡಿ ಹು-ಧಾ ಪೊಲೀಸರು ಬರೋಬ್ಬರಿ 172 ಜನ ರೌಡಿ ಶೀಟರ್​ಗಳ ಮನೆ ಮೇಲೆ ದಾಳಿ ಮಾಡಿದ್ದಾರೆ.

ಬರೋಬ್ಬರಿ 172 ರೌಡಿಶೀಟರ್​ ಮನೆ ಮೇಲೆ ದಾಳಿ

ಇನ್ನು ದಾಳಿ ಮಾಡಿದಾಗ ಕೆಲ ರೌಡಿಗಳ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಕೂಡ ಪತ್ತೆಯಾಗಿವೆ. ಕೆಲ ರೌಡಿಗಳು ಕೋರ್ಟ್​ಗೆ ಹಾಜರಾಗಿರಲಿಲ್ಲ. ಅಂತವರನ್ನು ಹೆಡೆಮುರಿ ಕಟ್ಟಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಒಂದೇ ದಿನ ಏಕಕಾಲಕ್ಕೆ 172 ಜನ ರೌಡಿ ಶೀಟರ್​ಗಳ ಮನೆ ಮೇಲೆ ದಾಳಿ ಮಾಡಿದ್ದು, ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಷಣ್ಮುಗ ಗುಡಿಹಾಳ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪತ್ತೆಯಾಗಿದೆ. ಕೂಡಲೇ ಆತನ ವಿರುದ್ದ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ರೌಡಿಶೀಟರ್ ಕೇಸ್​ ಹಾಕುವ ಬೆದರಿಕೆ, ಹುಬ್ಬಳ್ಳಿ ಕೇಶ್ವಾಪೂರ ಠಾಣೆಯ ಇನ್ಸ್ಪೆಕ್ಟರ್ ವಿರುದ್ದ ಮತ್ತೊಂದು ಗಂಭೀರ ಆರೋಪ

ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ ನಟೋರಿಯಸ್ ರೌಡಿಶೀಟರ್​

ಹು-ಧಾ ಅವಳಿ ನಗರದಲ್ಲಿ ಸಣ್ಣ ಪುಟ್ಟ ವಿಷಯಕ್ಕೆ ಕೊಲೆಯಾಗತ್ತದೆ. ಇನ್ನು ಮೀಸೆ ಚಿಗುರದ ಯುವಕರು ಸಣ್ಣ ಪುಟ್ಟ ವಿಷಯಕ್ಕೂ ಕ್ರೈಂ ನಲ್ಲಿ ಭಾಗಿಯಾಗುತ್ತಾರೆ. ರೌಡಿಗಳನ್ನು ಮಟ್ಟ ಹಾಕಬೇಕು ಎನ್ನುವ ಕಾರಣಕ್ಕೆ ಹು-ಧಾ ಪೊಲೀಸರು ದಾಳಿಗೆ ಮುಂದಾಗಿದ್ದರು. ಹೀಗೆ ದಾಳಿ ಮಾಡಿದ ನಂತರವೂ ಹುಬ್ಬಳ್ಳಿಯ ಓರ್ವ ನಟೋರಿಯಸ್ ರೌಡಿಶೀಟರ್ ಸತೀಶ್ ಗೋನಾ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ. ಪೊಲೀಸರ ಮೇಲೆಯೇ ತಲ್ವಾರ್​ ಬೀಸಲು ಮುಂದಾಗಿದ್ದ. ತಕ್ಷಣವೇ ಪೊಲೀಸರು‌ ಫೈರಿಂಗ್ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ, ‘ನಟೋರಿಯಸ್ ರೌಡಿಶೀಟರ್ ಸತೀಶ್ ಗೋನಾ ಕೇಸ್ ಮುಗಿದ ಬಳಿಕವೂ ಅಂತಹುದೇ ನಟೋರಿಯಸ್ ರೌಡಿಶೀಟರ್ ಕಮರಿಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅರೆಸ್ಟ್ ಮಾಡಿದ್ದೇವೆ. ವಸೀಂ ಎನ್ನುವ ಮತ್ತೊಬ್ನ ರೌಡಿ ಶೀಟರ್​ನನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಇದು ಕೇವಲ ಒಂದು ದಿನ ಅಲ್ಲ, ಇವತ್ತಿನ ಸಣ್ಣ ಪುಟ್ಟ ರೌಡಿಗಳು ನಾಳೆ ದೊಡ್ಡ ಕ್ರೈಮ್ ಮಾಡುತ್ತಾರೆ. ಹಾಗಾಗಿ ನಾವು ರೌಡಿಗಳ ಮಟ್ಟ ಹಾಕೋಕೆ‌ ಮುಂದಾಗಿದ್ದಾವೇ ಎಂದಿದ್ದಾರೆ. ಒಟ್ಟಾರೆ ಹುಧಾ ಅವಳಿ ನಗರದಲ್ಲಿ ರೌಡಿಗಳಿಗೆ ನಡುಕ ಉಂಟಾಗಿದೆ. ಏಕ ಕಾಲಕ್ಕೆ ಪೊಲಿಸರು 172 ಜನರ ಮೇಲೆ ದಾಳಿ ಮಾಡಿದ್ದು, ಬಹುತೇಕರು ನಟೋರಿಯಸ್ ರೌಡಿಗಳೇ ಆಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ