AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೌಡಿಶೀಟರ್ ಕೇಸ್​ ಹಾಕುವ ಬೆದರಿಕೆ, ಹುಬ್ಬಳ್ಳಿ ಕೇಶ್ವಾಪೂರ ಠಾಣೆಯ ಇನ್ಸ್ಪೆಕ್ಟರ್ ವಿರುದ್ದ ಮತ್ತೊಂದು ಗಂಭೀರ ಆರೋಪ

ಈ ಹಿಂದೆ ನಿಖಿಲ್ ಎಂಬ ಯುವಕನ ಆತ್ಮಹತ್ಯೆಗೆ ಇನ್ಸ್ಪೆಕ್ಟರ್ ಸಾತೇನಹಳ್ಳಿ ಕಿರುಕುಳವೇ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಈಗ ಕೇಸ್ ವಾಪಸ್ ತಗೆದುಕೊಳ್ಳದೆ ಹೋದರೆ ರೌಡಿಶೀಟರ್ ಹಾಕೋದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಕೇಶ್ವಾಪೂರ ನಿವಾಸಿ ಹರೀಸ್ ಪೂಜಾರಿ ಎಂಬುವವರು ಆರೋಪ ಮಾಡಿದ್ದಾರೆ.

ರೌಡಿಶೀಟರ್ ಕೇಸ್​ ಹಾಕುವ ಬೆದರಿಕೆ, ಹುಬ್ಬಳ್ಳಿ ಕೇಶ್ವಾಪೂರ ಠಾಣೆಯ ಇನ್ಸ್ಪೆಕ್ಟರ್ ವಿರುದ್ದ ಮತ್ತೊಂದು ಗಂಭೀರ ಆರೋಪ
ಇನ್ಸ್ಪೆಕ್ಟರ್ ಯು.ಹೆಚ್​. ಸಾತೇನಹಳ್ಳಿ
TV9 Web
| Edited By: |

Updated on:Nov 06, 2023 | 4:07 PM

Share

ಹುಬ್ಬಳ್ಳಿ, ನ.06: ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಯು.ಹೆಚ್​. ಸಾತೇನಹಳ್ಳಿ (UH Sathenahalli)  ವಿರುದ್ದ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಈ ಹಿಂದೆ ನಿಖಿಲ್ ಎಂಬ ಯುವಕನ ಆತ್ಮಹತ್ಯೆಗೆ ಇನ್ಸ್ಪೆಕ್ಟರ್ ಸಾತೇನಹಳ್ಳಿ ಕಿರುಕುಳವೇ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಈಗ ಕೇಸ್ ವಾಪಸ್ ತಗೆದುಕೊಳ್ಳದೆ ಹೋದರೆ ರೌಡಿಶೀಟರ್ (Rowdy Sheeter) ಹಾಕೋದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಕೇಶ್ವಾಪೂರ ನಿವಾಸಿ ಹರೀಸ್ ಪೂಜಾರಿ ಎಂಬುವವರು ಆರೋಪ ಮಾಡಿದ್ದಾರೆ.

ಹರೀಶ್ ಪೂಜಾರಿ ಕಳೆದ ವರ್ಷ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದರು. ವಿಚ್ಛೇದನ ಆದರೂ ಹರೀಶ್ ಇಬ್ಬರ ಹೆಸರಲ್ಲಿ ಒಂದು ಫ್ಲ್ಯಾಟ್ ಖರೀದಿ ಮಾಡಿದ್ದರು. ಅದೇ ಪ್ಲ್ಯಾಟ್ ವಿಷಯಕ್ಕೆ ಹರೀಶ್ ಪೂಜಾರಿ ಹಾಗೂ ಪತ್ನಿ ಮನೆಯವರ ನಡುವೆ ಗಲಾಟೆಯಾಗಿತ್ತು. ಗಲಾಟೆ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ‌ಯಾಗಿತ್ತು. ಕಳೆದ ಆಗಸ್ಟ್ 22ರಂದು ಹರೀಶ್ ಪೂಜಾರಿ ಪತ್ನಿ ವಿನಯಾ ತಂದೆ ಸಂಬಂಧಿಕರು ಹರೀಶ್ ಪೂಜಾರಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ರಾಡ್ ನಿಂದ ಹಲ್ಲೆಗೆ ಯತ್ನಿಸಿದ್ದರು. ಆಗ ಹರೀಶ್ ಅವರ ಅಜ್ಜನಿಗೆ ಗಾಯಗಳಾಗಿವೆ. ಗಲಾಟೆ ಬಳಿಕ ಹರೀಶ್ ಅವರು ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಐದು ಜನರ ವಿರುದ್ಧ ದೂರು ನೀಡಿದ್ದರು. ಇದೀಗ ಆ ದೂರು ವಾಪಸ್ ತಗೆದುಕೊಳ್ಳಲು ಇನ್ಸ್ಪೆಕ್ಟರ್ ಸಾತೇನಹಳ್ಳಿ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನೀನು ಕೇಸ್ ತೆಗೆದುಕೊಳ್ಳದೆ ಹೋದ್ರೆ ರೌಡಿಶೀಟರ್ ಹಾಕ್ತೀನಿ ಎಂದು ಬೆದರಿಕೆ ಹಾಕಿದ್ದಾರೆ. ನನಗೆ ಜೀವ ಭಯ ಇದೆ ಎಂದು ಹರೀಶ್ ಪೂಜಾರಿ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ದಾಂಪತ್ಯದಲ್ಲಿ ಕಲಹ, ಆತ್ಮಹತ್ಯೆ ಮಾಡಿಕೊಂಡ ಪತಿ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್; ಪೊಲೀಸರ ವಿರುದ್ದವೇ ದಾಖಲಾಯ್ತು ಕೇಸ್​

ಹುಬ್ಬಳ್ಳಿಯ ಕೋಟೆಲಿಂಗೇಶ್ವರ ನಗರದಲ್ಲಿ‌ 28 ವರ್ಷದ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದ. ನಿಖಿಲ್ ಆತ್ಮಹತ್ಯೆಗೆ ಪೊಲೀಸರ ಹಾಗೂ ಪತ್ನಿ ಕಿರುಕುಳ ಕಾರಣ ಎನ್ನುವ ಗಂಭೀರ ಆರೋಪ‌ ಕೇಳಿ ಬಂದಿತ್ತು. ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಾತೇನಹಳ್ಳಿ ಹಾಗೂ ASI ಜಯಶ್ರೀ ಚಲವಾದಿ ವಿರುದ್ದ ಈ ಆರೋಪ ಕೇಳಿ ಬಂದಿದ್ದು, ಗಂಡ ಹೆಂಡತಿಯ ಜಗಳ ರಾಜೀ ಸಂಧಾನಕ್ಕೆ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹೀಗಾಗಿ ನೊಂದ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದಾಗ ಪೊಲೀಸರು, ಇನ್ಸಪೆಕ್ಟರ್ ಸಾತೇನಹಳ್ಳಿ,  ASI ಜಯಶ್ರೀ ಚಲವಾದಿ, ನಿಖಿಲ್ ಪತ್ನಿ ಸೇರಿ ಎಂಟು ಜನರ ವಿರುದ್ದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:35 pm, Mon, 6 November 23

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?