ಸೈಕಲಲ್ಲಿ 5 ಸಾವಿರ ಕಿಮೀ ಕ್ರಮಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಹುಬ್ಬಳ್ಳಿಯ 60 ವರ್ಷದ ವ್ಯಕ್ತಿ

ಪರಿಸರವನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಬಿಟ್ಟುಕೊಡುವುದು ನನ್ನ ಏಕೈಕ ಉದ್ದೇಶವಾಗಿದೆ. ಜಗತ್ತು ಜಾಗತಿಕ ತಾಪಮಾನದಿಂದ ಬಳಲುತ್ತಿದೆ. ಪಳೆಯುಳಿಕೆ ಇಂಧನಗಳ ಮೇಲೆ ಚಲಿಸುವ ವಾಹನಗಳಿಂದ ಹಸಿರನ್ನು ರಕ್ಷಿಸುವುದು ಅತಿಮುಖ್ಯವಾಗಿದೆ. ಹಾಗಾಗಿ ಸೈಕ್ಲಿಂಗ್ ನನ್ನ ಕೊನೆಯ ಆಯ್ಕೆಯಾಗಿದೆ ಎಂದು ಗುರುಮೂರ್ತಿ ಹೇಳಿದರು.

ಸೈಕಲಲ್ಲಿ 5 ಸಾವಿರ ಕಿಮೀ ಕ್ರಮಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಹುಬ್ಬಳ್ಳಿಯ 60 ವರ್ಷದ ವ್ಯಕ್ತಿ
ಗುರುಮೂರ್ತಿ ಮಾತರಂಗಿಮಠ
Follow us
ವಿವೇಕ ಬಿರಾದಾರ
|

Updated on:Nov 08, 2023 | 7:00 AM

ಹುಬ್ಬಳ್ಳಿ ನ.06: ಚಾರ್ಟೆಡ್ ಅಕೌಂಟೆಂಟ್ (CA) ಒಬ್ಬರು 60ನೇ ವಯಸ್ಸಿನಲ್ಲಿ ಸೈಕಲ್​​​​​ಲ್ಲಿ (Cycle) 5 ಸಾವಿರ ಕಿಮೀ ಕ್ರಮಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​​ನಲ್ಲಿ (Indian Book of Records) ಸ್ಥಾನ ಪಡೆದಿದ್ದಾರೆ. ಅಷ್ಟಕ್ಕೂ ಈ ಸಧಾನೆ ಮಾಡಿದವರು ಯಾರು? ಸಾಧನೆಗೆ ಪ್ರೇರಣೆ ಏನು ಇಲ್ಲಿದೆ ಓದಿ. ಚಾರ್ಟೆಡ್ ಅಕೌಂಟೆಂಟ್ ಗುರುಮೂರ್ತಿ ಮಾತರಂಗಿಮಠ ಅವರಿಗೆ 60ನೇ ವಯಸ್ಸಿನಲ್ಲಿ ಫುಟ್​ ಕಾರ್ನ್‌ ಆಗಿತ್ತು. ಇದರಿಂದ ನಡೆಯಲು ಕೂಡ ಸಾಧ್ಯವಾಗುತ್ತಿರಲ್ಲಿಲ್ಲ. ಹೀಗಾಗಿ ಅವರು ಸಹಜವಾಗಿ ಸೈಕ್ಲಿಂಗ್​ನತ್ತ ತಮ್ಮ ಒಲವು ಹರಿಸಿದರು. ಸೈಕ್ಲಿಂಗ್​​ನಿಂದ​ ದೈಹಿಕವಾಗಿ ಆರೋಗ್ಯವಾಗಿರಬಹುದು ಮತ್ತು ಪರಿಸರ ರಕ್ಷಣೆಯಾಗುತ್ತದೆ ಎಂಬ ನಿಲುವಿನಿಂದ ಗುರುಮೂರ್ತಿಯವರು ಸೈಕ್ಲಿಂಗ್​​ ಆರಂಭಿಸಿದರು.​

ಈಗಿನ ಯುವ ಪೀಳಿಗೆ ಮೋಟಾರು ವಾಹನಗಳತ್ತ ಮಾರು ಹೋಗುತ್ತಿದ್ದು, ಇದರಿಂದ ಪರಿಸರ ಮಾಲಿನ್ಯವಾಗುತ್ತದೆ ಮತ್ತು ಆರೋಗ್ಯ ಕೂಡ ಹಾಳಾಗುತ್ತದೆ. ಇದರ ಬಗ್ಗೆ ಯುವ ಜನತೆಯಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸೈಕ್ಲಿಂಗ್ ಆರಂಭಿಸಿದರು. ಸೈಕ್ಲಿಂಗ್ ವ್ಯಾಯಾಮದ ಒಂದು ರೂಪವಾಗಿದೆ. ಮತ್ತು ಸೈಕಲ್​ ಬಳಸುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ.

ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಮತ್ತು ಪರಿಸರವನ್ನು ರಕ್ಷಿಸುವ ದೃಷ್ಟಿಯಿಂದ ಗುರುಮೂರ್ತಿ ಅವರು ಸೈಕ್ಲಿಂಗ್​​ ಆರಂಭಿಸಿದರು. ಗುರುಮೂರ್ತಿ ಅವರು ಮೇ 11 ರಿಂದ ಆಗಸ್ಟ್ 18 ರ ವರೆಗೆ ಒಟ್ಟು 5,000 ಕಿಮೀ ದೂರವನ್ನು 100 ದಿನಗಳಲ್ಲಿ ಕ್ರಮಿಸಿದರು. ಈ ಗುರಿ ಮುಟ್ಟಲು ಗುರುಮೂರ್ತಿ ಅವರು ಪ್ರತಿದಿನ 50 ಕಿಮೀ ಸೈಕಲ್ ಓಡಿಸುತ್ತಿದ್ದರು. ಗುರಮೂರ್ತಿ ಅವರು ಪ್ರತಿದಿನ ಬೆಳಿಗ್ಗೆ 5 ರಿಂದ 8 ರ ಒಳಗೆ ಸೈಕಲ್​​ನಲ್ಲಿ 50 ಕಿಮೀ ಕ್ರಮಿಸುತ್ತಿದ್ದರು. ಅಂತಿಮವಾಗಿ ಗರುಮೂರ್ತಿಯವರು 63ನೇ  ವಯಸ್ಸಿನಲ್ಲಿ ಈ ಸಾಧನೆ ಮಾಡಿದರು. ಇಂಡಿಯಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​​​ನಲ್ಲಿ ಅವರ ಹೆಸರು ಸೇರಿತು.

ಗುರುಮೂರ್ತಿ ಅವರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​​ನಲ್ಲಿ ತಮ್ಮ ಹೆಸರು ಸೇರಿಸಲು ಒಂದೇ ಲೇನ್‌ನಲ್ಲಿ ನಾಲ್ಕು ಕಿಮೀ ಕ್ರಮಿಸಲು ಪ್ರಯತ್ನಿಸಿದರು. ಈ ಕಾರ್ಯಕ್ರಮವನ್ನು ಹುಬ್ಬಳ್ಳಿಯ ಬೈಸಿಕಲ್ ಕ್ಲಬ್ ಎರಡು ಬಾರಿ ಆಯೋಜಿಸಿತ್ತು. ಯುವಕರನ್ನು ಸೈಕ್ಲಿಂಗ್​ನತ್ತ ಸೆಳೆಯಲು ಗುರುಮೂರ್ತಿಯವರು ನಾನಾ ಕಾರ್ಯಕ್ರಮಗಳನ್ನು ಮಾಡಿದ್ದರು.

ಇದನ್ನೂ ಓದಿ: ಮೂರು ವರ್ಷದ ಬಾಲೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​​ ಗರಿಮೆ ಹಿರಿಮೆ! ಪಟ್ ಪಟ್ ಅಂತ ಸಂಸ್ಕೃತ ಶ್ಲೋಕ ಉಚ್ಛರಿಸುವ ಮುದ್ದು ಪುಟಾಣಿ!

ಪರಿಸರವನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಬಿಟ್ಟುಕೊಡುವುದು ನನ್ನ ಏಕೈಕ ಉದ್ದೇಶವಾಗಿದೆ. ಜಗತ್ತು ಜಾಗತಿಕ ತಾಪಮಾನದಿಂದ ಬಳಲುತ್ತಿದೆ. ಪಳೆಯುಳಿಕೆ ಇಂಧನಗಳ ಮೇಲೆ ಚಲಿಸುವ ವಾಹನಗಳಿಂದ ಹಸಿರನ್ನು ರಕ್ಷಿಸುವುದು ಅತಿಮುಖ್ಯವಾಗಿದೆ. ಹಾಗಾಗಿ ಸೈಕ್ಲಿಂಗ್ ನನ್ನ ಕೊನೆಯ ಆಯ್ಕೆಯಾಗಿದೆ ಎಂದು ಗುರುಮೂರ್ತಿ ಹೇಳಿದರು.

ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ 310 ಮೆಕ್ಯಾನಿಕಲ್ ಮತ್ತು 30 ಎಲೆಕ್ಟ್ರಿಕಲ್ ಬೈಸಿಕಲ್​ಗಳನ್ನು ಇರಿಸುವ 34 ಡಾಕಿಂಗ್ ಸ್ಟೇಷನ್​ಗಳನ್ನು ಸ್ಥಾಪಿಸಲಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಯೋಜನೆಗೆ ಚಾಲನೆ ದೊರೆಯದಿದ್ದರೂ ಕ್ರಮೇಣ ಜನರೂ ಅದರತ್ತ ಆಕರ್ಷಿತರಾಗುತ್ತಿದ್ದಾರೆ. ಈ ಸೈಕಲ್​ಗಳನ್ನು ಕನಿಷ್ಠ ಒಂದು ಗಮ್ಯಸ್ಥಾನದಿಂದ ಇನ್ನೊಂದಕ್ಕೆ ತಲುಪುವ ಬದಲು ವ್ಯಾಯಾಮದ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:21 am, Mon, 6 November 23

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್