ಹುಬ್ಬಳ್ಳಿ: ನಿಖಿಲ್​ ಸಾವಿಗೆ ಕೇಶ್ವಾಪುರ ಠಾಣೆ ಪೊಲೀಸರು ಕಾರಣ; ಕ್ರಮಕೈಗೊಳ್ಳದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕುಟುಂಬಸ್ಥರ ಎಚ್ಚರಿಕೆ

ಪೊಲೀಸರ ವಿರುದ್ಧ ಎಫ್​ಐ​ಆರ್​ ದಾಖಲಾದರೂ ಯಾವುದೇ ಕ್ರಮ ಆಗಿಲ್ಲ. ಸಾಮಾನ್ಯ ಜನರಿಗೊಂದು ನ್ಯಾಯ, ಪೊಲೀಸರಿಗೊಂದು ನ್ಯಾಯನಾ? ಕೂಡಲೇ ಇನ್ಸ್​ಪೆಕ್ಟರ್, ಎಎಸ್​ಐರನ್ನು ಅಮಾನತು ಮಾಡಬೇಕು ಎಂದು ನಿಖಿಲ್​ ಕುಟುಂಬಸ್ಥರು ಆಗ್ರಹಿಸಿದರು.

ಹುಬ್ಬಳ್ಳಿ: ನಿಖಿಲ್​ ಸಾವಿಗೆ ಕೇಶ್ವಾಪುರ ಠಾಣೆ ಪೊಲೀಸರು ಕಾರಣ; ಕ್ರಮಕೈಗೊಳ್ಳದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕುಟುಂಬಸ್ಥರ ಎಚ್ಚರಿಕೆ
ನಿಖಲ್​ ಕುಟುಂಬಸ್ಥರ ಸುದ್ದಿಗೋಷ್ಠಿ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ವಿವೇಕ ಬಿರಾದಾರ

Updated on: Nov 07, 2023 | 2:54 PM

ಹುಬ್ಬಳ್ಳಿ ನ.07: ಪೊಲೀಸರು (Police) ಮತ್ತು ಪತ್ನಿಯ (Wife) ಕಿರುಕುಳದಿಂದ ನಿಖಿಲ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಖಿಲ್​ ಸಾವಿಗೆ ಹುಬ್ಬಳ್ಳಿ(Hubballi) ಕೇಶ್ವಾಪುರ ಇನ್ಸ್​​ಪೆಕ್ಟರ್​ ಸಾತೇನಹಳ್ಳಿ, ಎಎಸ್​ಐ ಜಯಶ್ರೀ ಛಲವಾದಿ, ಪತ್ನಿ ಮನೆಕಡೆಯವರೇ ಕಾರಣ ಎಂದು ನಿಖಿಲ್​ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ನಿಖಿಲ್​ ತಂದೆ, ತಾಯಿ, ಸೋದರರು ಸುದ್ದಿಗೋಷ್ಠಿ ನಡೆಸಿ ಪೊಲೀಸರ ವಿರುದ್ಧ ಎಫ್​ಐ​ಆರ್​ ದಾಖಲಾದರೂ ಯಾವುದೇ ಕ್ರಮ ಆಗಿಲ್ಲ. ಸಾಮಾನ್ಯ ಜನರಿಗೊಂದು ನ್ಯಾಯ, ಪೊಲೀಸರಿಗೊಂದು ನ್ಯಾಯನಾ? ಕೂಡಲೇ ಇನ್ಸ್​ಪೆಕ್ಟರ್, ಎಎಸ್​ಐರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಅಮಾನತು ಮಾಡದಿದ್ದರೇ ಕುಟುಂಬದವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಕಚೇರಿ ಮುಂದೆ ವಿಷ ಕುಡಿಯುತ್ತೇವೆ ಎಂದು ನಿಖಲ್​ ತಾಯಿ ಗೀತಾ ಎಚ್ಚರಿಕೆ ನೀಡಿದ್ದಾರೆ. ನವೆಂಬರ್​ 3ರಂದು ಕೋಟಿಲಿಂಗೇಶ್ವರ ನಗರದ ತಮ್ಮ ನಿವಾಸದಲ್ಲಿ ನಿಖಿಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಖಿಲ್ ಸಾವಿಗೆ ಪೊಲೀಸರು, ಪತ್ನಿ ಕಿರುಕುಳ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ನಿಖಿಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಭಂದಿಸಿದೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇನ್ಸಪೆಕ್ಟರ್ ಸಾತೇನಹಳ್ಳಿ, ಎಎಸ್​ಐ ಜಯಶ್ರೀ ಚಲವಾದಿ, ಪತ್ನಿ ಪ್ರೀಯಾ ಸೇರಿ ಎಂಟು ಜನರ ವಿರುದ್ಧ ಕೇಸ್ ದಾಖಲಾಗಿತ್ತು.

ಇದನ್ನೂ ಓದಿ: ರೌಡಿಶೀಟರ್ ಕೇಸ್​ ಹಾಕುವ ಬೆದರಿಕೆ, ಹುಬ್ಬಳ್ಳಿ ಕೇಶ್ವಾಪೂರ ಠಾಣೆಯ ಇನ್ಸ್ಪೆಕ್ಟರ್ ವಿರುದ್ದ ಮತ್ತೊಂದು ಗಂಭೀರ ಆರೋಪ

ಕೇಸ್ ದಾಖಲಾದ ಬೆನ್ನಲ್ಲೆ ಪೊಲೀಸರು ಕೆಲವರನ್ನು ಬಂಧಿಸಿದ್ದರು. ಆದರೆ ಪ್ರಕರಣ ದಾಖಲಾಗಿ ನಾಲ್ಕು ದಿನ ಕಳೆದರೂ ಪೊಲೀಸರ ಮೇಲೆ ಯಾವದೂ ಕ್ರಮ ಆಗಿಲ್ಲ. ಹೀಗಾಗಿ ಮೃತ ನಿಖಿಲ್ ಕುಟುಂಬಸ್ಥರಿಂದ ಸುದ್ದಿಗೋಷ್ಠಿ ನಡೆಸಿ ಪೊಲೀಸ್ ಅಧಿಕಾರಿಗಳನ್ನ ಅಮನಾತು ಮಾಡದೆ ಹೋದರೇ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ

ನಿಖಲ್ 11 ತಿಂಗಳ ಹಿಂದೆ ಪ್ರೀತಿ ಎಂಬುವರನ್ನು ವಿವಾಹವಾಗಿದ್ದರು. ಆದರೆ ದಂಪತಿ ನಡುವೆ ಆರಂಭದಿಂದಲೂ ಸಾಮರಸ್ಯ ಮೂಡದೆ ವೈಮನಸ್ಸು ಬೆಳೆದು ನಿತ್ಯ ಜಗಳವಾಡುತ್ತಿದ್ದರು. ಇದರಿಂದಾಗಿ ಪ್ರೀತಿ ತವರು ಮನೆಗೆ ಹೋಗಿದ್ದಳು. ಗುರುವಾರ (ನ.02) ಪ್ರೀತಿ ಮತ್ತು ಕುಟುಂಬಸ್ಥರು ನಿಖಿಲ್​​ನನ್ನು ಕೇಶ್ವಾಪುರ ಠಾಣೆಗೆ ಕರೆಯಿಸಿದ್ದರು. ಠಾಣೆಯಲ್ಲಿ ಪೊಲೀಸರು ನಿಖಲ್​ಗೆ ಮಾನಿಸಕವಾಗಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿತ್ತು.

ಕೇಶ್ವಾಪುರ ಪೊಲೀಸರು ನಿಖಲ್​ಗೆ ಒಂದೇ ದಿನದಲ್ಲಿ 2 ಲಕ್ಷ ರೂ. ನೀಡುವಂತೆ ತಾಕೀತು ಮಾಡಿದ್ದರು. ಇದರಿಂದ ಮನನೊಂದು ಮನೆಗೆ ಬಂದ ನಿಖಿಲ್​​​, ಶುಕ್ರವಾರ (ನ.03) ಬೆಳಗಿನ ಜಾವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ