AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರದಿಂದ ಅಕ್ಕಪಕ್ಕದ ಬೆಳೆ ನಾಶ; ಆ ರೈತನ ಹೊಲದಲ್ಲಿನ ಮೆಕ್ಕೆಜೋಳ ಮಾತ್ರ ಹಚ್ಚ ಹಸಿರು, ಹೇಗೆ ಅಂತೀರಾ?

ರಾಜ್ಯದಲ್ಲಿ ಈ ಬಾರಿ ಭೀಕರ ಬರಗಾಲ ಆವರಿಸಿದ್ದು, ಇದಕ್ಕೆ ಧಾರವಾಡ ಜಿಲ್ಲೆ ಹೊರತಾಗಿಲ್ಲ. ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಫಸಲು ಕೈ ಕೊಟ್ಟಿದೆ. ಇದೀಗ ಹಿಂಗಾರು ಮಳೆ ಕೂಡ ಕೈಕೊಟ್ಟಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಆದರೆ, ಜಿಲ್ಲೆಯ ನವಲಗುಂದ ತಾಲೂಕಿನ ಓರ್ವ ರೈತ ಬರದಲ್ಲಿಯೂ ಅದ್ಭುತವಾದ ಮೆಕ್ಕೆಜೋಳ ಬೆಳೆದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ. ಹೌದು, ಅಕ್ಕಪಕ್ಕದ ಹೊಲಗಳಲ್ಲಿ ಮೆಕ್ಕೆಜೋಳ ಸಂಪೂರ್ಣವಾಗಿ ಒಣಗಿ ಹೋಗಿದ್ದರೆ, ಆ ರೈತನ ಹೊಲದಲ್ಲಿನ ಮೆಕ್ಕೆಜೋಳ ಹಚ್ಚಹಸುರಾಗಿ ಕಂಗೊಳಿಸುತ್ತಿದೆ. ಹೇಗೆ ಅಂತೀರಾ?, ಇಲ್ಲಿದೆ ನೋಡಿ.

ಬರದಿಂದ ಅಕ್ಕಪಕ್ಕದ ಬೆಳೆ ನಾಶ; ಆ ರೈತನ ಹೊಲದಲ್ಲಿನ ಮೆಕ್ಕೆಜೋಳ ಮಾತ್ರ ಹಚ್ಚ ಹಸಿರು, ಹೇಗೆ ಅಂತೀರಾ?
ಧಾರವಾಡ ಜಿಲ್ಲೆಯಲ್ಲಿ ಬರದ ನಡುವೆಯು ಮೆಕ್ಕೆಜೋಳ ಬೆಳೆದು ಗೆದ್ದ ರೈತ
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಕಿರಣ್ ಹನುಮಂತ್​ ಮಾದಾರ್|

Updated on:Nov 07, 2023 | 4:30 PM

Share

ಧಾರವಾಡ,ನ.07: ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಬಹುತೇಕ ಕಡೆ ಇರುವುದು ಕಪ್ಪು ಮಣ್ಣು. ಹೀಗಾಗಿ ಇಲ್ಲಿನ ರೈತರಿಗೆ ಮುಂಗಾರು ಮಳೆಗಿಂತ ಹಿಂಗಾರು ಮಳೆಯೇ ಆಧಾರ. ಸರಿಯಾದ ವೇಳೆಗೆ ಒಂದೆರಡು ಮಳೆಯಾಗಿ ಬಿಟ್ಟರೆ ಸಾಕು ಇಲ್ಲಿನ ರೈತರು ಬೆಳೆ ಪಡೆದು ಬಿಡುತ್ತಾರೆ. ಆದರೆ, ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಆಗಿಲ್ಲ. ಹೀಗಾಗಿ ಇಲ್ಲಿನ ರೈತರು(Farmers) ಹಿಂಗಾರು ಮಳೆಯಾದರೆ ಒಳ್ಳೆಯದು ಎಂದು ಕಾಯುತ್ತಾ ಕೂತು. ಅನೇಕರು ಹಿಂಗಾರು ಮಳೆ ನಂಬಿಕೊಂಡು ಬಿತ್ತನೆ ಕಾರ್ಯ ಮಾಡಿಬಿಟ್ಟದ್ದಾರೆ. ಆದರೆ, ಹಿಂಗಾರು ಕೂಡ ಕೈಕೊಟ್ಟಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಆದರೆ, ಸೊಟಕನಾಳ ಗ್ರಾಮದ ಬಾಲರೆಡ್ಡಿ ಎಂಬುವವರು ಹತ್ತು ಎಕರೆಯಲ್ಲಿ ಬೆಳೆದ ಮೆಕ್ಕೆಜೋಳ(Maize Crop) ಹಚ್ಚಹಸುರಾಗಿ, ಒಂದೊಂದು ಗಿಡದಲ್ಲಿ ಎರಡೆರಡು ತೆನೆ ಬಿಟ್ಟು ನಿಂತಿದೆ. ಜೊತೆಗೆ ಇದೀಗ ಕಟಾವಿಗೆ ಕೂಡ ಬಂದಿದೆ. ಆದರೆ, ಈ ಹೊಲದ ಪಕ್ಕದಲ್ಲಿಯೇ ಇರುವ ರೈತರ ಹೊಲದಲ್ಲಿನ ಮೆಕ್ಕೆಜೋಳ ಸಂಪೂರ್ಣವಾಗಿ ಒಣಗಿ ಹೋಗಿದೆ.

ಹಳ್ಳದಿಂದ ಪೈಪ್ ಲೈನ್ ಮೂಲಕ ನೀರು ತಂದು ಕೆರೆಯಲ್ಲಿ ಸಂಗ್ರಹ

ರೈತ ಬಾಲರೆಡ್ಡಿ ಅವರ ಶ್ರಮದಿಂದ ಮೆಕ್ಕೆಜೋಳ ಹೀಗೆ ನಸುನಗುತ್ತಾ ನಿಂತಿದೆ. ಇವರು ಇಲ್ಲಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಬೆಣ್ಣೆಹಳ್ಳದಿಂದ ನೀರನ್ನು ಪೈಪ್ ಲೈನ್ ಮೂಲಕ ತಂದು ಕೆರೆಯಲ್ಲಿ ಸಂಗ್ರಹಿಸಿದ್ದಾರೆ. ಆ ಕೆರೆಯಿಂದ ಈ ಹೊಲಕ್ಕೆ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹೀಗಾಗಿ ಎಲ್ಲ ಕಡೆಗಳಲ್ಲಿ ಮೆಕ್ಕೆಜೋಳ ಒಣಗಿ ಹೋಗಿದ್ದರೆ, ಇಲ್ಲಿ ಮಾತ್ರ ನಳನಳಿಸುತ್ತಾ ನಿಂತಿದೆ. ಈ ಬೆಳೆಯನ್ನು ನೋಡಿದರೆ ಕನಿಷ್ಟ ಒಂದು ಎಕರೆಗೆ 25 ರಿಂದ 30 ಕ್ಷಿಂಟಾಲ್ ಮೆಕ್ಕೆಜೋಳ ಬರುವುದು ಗ್ಯಾರಂಟಿಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆದ ರೈತರು, ಬೆಳೆ ಕಳೆದುಕೊಂಡು ಹೈರಾಣಾಗಿದ್ದಾರೆ. ಎಷ್ಟೋ ಕಡೆಗಳಲ್ಲಿ ಒಣಗಿ ಹೋಗುತ್ತಿರುವ ಮೆಕ್ಕೆಜೋಳ ಕಟಾವು ಮಾಡಿ ಜಾನುವಾರುಗಳಿಗೆ ಹಾಕುತ್ತಿದ್ದಾರೆ. ಆದರೆ, ಈ ಬಾಲರೆಡ್ಡಿ ಅವರ ಹೊಲದಲ್ಲಿ ಮಾತ್ರ ದೊಡ್ಡ ಮ್ಯಾಜಿಕ್ ನಡೆದಿದೆ.

ಇದನ್ನೂ ಓದಿ:ರೈತರು ಬೆಳೆದ ಬೆಳೆಯನ್ನು ಖರೀದಿಸಿ ಬಡವರಿಗೆ ಹಂಚಿಕೆ; ಕೋಲಾರದ ಸಂಸ್ಥೆಯ ಕಾರ್ಯಕ್ಕೆ ಜನರ ಮೆಚ್ಚುಗೆ

VO 03:- ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನೀರಿಲ್ಲದೇ ಎಲ್ಲ ಬೆಳೆಗಳೂ ಒಣಗುತ್ತಿವೆ. ಸಾಮಾನ್ಯವಾಗಿ ಮುಂಗಾರು ಕೈಕೊಟ್ಟರೆ ಹಿಂಗಾರು ಮಳೆ ಬಂದೇ ಬರುತ್ತೆ ಅನ್ನೋ ನಂಬಿಕೆ ಜನರಲ್ಲಿದೆ. ಆದರೆ ಆ ನಂಬಿಕೆಯೂ ಈ ಬಾರಿ ಸುಳ್ಳಾಗಿದೆ. ಇದರಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಶ್ರಮಪಟ್ಟರೆ ಬರದಲ್ಲಿಯೂ ಬಂಗಾರದ ಬೆಳೆ ತೆಗೆಯಬಹುದು ಅನ್ನೋದನ್ನು ಈ ರೈತ ನಿರೂಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Tue, 7 November 23

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​