AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಡ್ ಶೆಡ್ಡಿಂಗ್: ವಾಟ್ಸಪ್ ಗ್ರೂಪ್​ನಲ್ಲಿ ವಿದ್ಯುತ್ ಮಾಹಿತಿ ನೀಡಲು ಮುಂದಾದ ಹೆಸ್ಕಾಂ

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ಉದ್ಭವಿಸಿದೆ. ಯಾವಾಗ ಕರೆಂಟ್ ಹೋಗುತ್ತೋ, ಯಾವಾಗ ಬರುತ್ತೋ ತಿಳಿಯುವುದಿಲ್ಲ. ಹೀಗಾಗಿ ಸಮಸ್ಯೆ ಬಗೆಹರಿಸಲು ಹೆಸ್ಕಾಂ ಅಧಿಕಾರಿಗಳ ವಿಭಿನ್ನ ಪ್ಲ್ಯಾನ್ ಮಾಡಿದ್ದಾರೆ. ಸ್ಮಾರ್ಟ್ ಯುಗದಲ್ಲಿ ಸ್ಮಾರ್ಟ್ ಫೋನ್ ಮೂಲಕವೇ ವಿದ್ಯುತ್ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಲೋಡ್ ಶೆಡ್ಡಿಂಗ್: ವಾಟ್ಸಪ್ ಗ್ರೂಪ್​ನಲ್ಲಿ ವಿದ್ಯುತ್ ಮಾಹಿತಿ ನೀಡಲು ಮುಂದಾದ ಹೆಸ್ಕಾಂ
ಸ್ಮಾರ್ಟ್ ಯುಗದಲ್ಲಿ ಸ್ಮಾರ್ಟ್ ಫೋನ್ ಮೂಲಕವೇ ವಿದ್ಯುತ್ ಬಗ್ಗೆ ಮಾಹಿತಿ ನೀಡುತ್ತಿರುವ ಹೆಸ್ಕಾಂ ಅಧಿಕಾರಿಗಳುImage Credit source: missisya/123rf.com
ಶಿವಕುಮಾರ್ ಪತ್ತಾರ್
| Updated By: Rakesh Nayak Manchi|

Updated on:Oct 21, 2023 | 3:41 PM

Share

ಹುಬ್ಬಳ್ಳಿ, ಅ.21: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ (Load Shedding) ಸಮಸ್ಯೆ ಉದ್ಭವಿಸಿದೆ. ಯಾವಾಗ ಕರೆಂಟ್ ಹೋಗುತ್ತೋ, ಯಾವಾಗ ಬರುತ್ತೋ ತಿಳಿಯುವುದಿಲ್ಲ. ಹೀಗಾಗಿ ಸಮಸ್ಯೆ ಬಗೆಹರಿಸಲು ಹೆಸ್ಕಾಂ (HESCOM) ಅಧಿಕಾರಿಗಳ ವಿಭಿನ್ನ ಪ್ಲ್ಯಾನ್ ಮಾಡಿದ್ದಾರೆ. ಸ್ಮಾರ್ಟ್ ಯುಗದಲ್ಲಿ ಸ್ಮಾರ್ಟ್ ಫೋನ್ ಮೂಲಕವೇ ವಿದ್ಯುತ್ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಹೆಸ್ಕಾಂ ಅಧಿಕಾರಿಗಳು ವಾಟ್ಸ್​ಆ್ಯಪ್ ಗ್ರೂಪ್ ರಚಿಸಿದ್ದು, ಇದರಲ್ಲಿ ಪಂಪ್ ಸೆಟ್ ಉಪಯೋಗಿಸುವ ರೈತರನ್ನು ಒಳಗೊಂಡು ಗ್ರಾಹಕರನ್ನು ಸೇರಿಸಲಾಗಿದೆ. ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಸರ್ಕಲ್​ನಲ್ಲಿ ಈ ಹೊಸ ಪ್ರಯತ್ನ ಮಾಡಲಾಗಿದೆ.

ಬ್ಯಾಹಟ್ಟಿ ಸರ್ಕಲ್​ನ ಸುಳ್ಳ, ಹೆಬಸೂರ, ಕಿರೇಸೂರ, ಕುಸುಗಲ್ ಗ್ರಾಮದಲ್ಲಿ ಪಂಪ್ ಸೆಟ್ ಹೊಂದಿದ ರೈತರಿಗೆ ಇದು ಅನುಕೂಲವಾಗಲಿದೆ. ಲೋಡ್ ಶೆಡ್ಡಿಂಗ್ ಹಿನ್ನೆಲೆ ರೈತರಿಗೆ ಇದೀಗ ಕೇವಲ ಐದು ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಕೆಲವೆಡೆ ಐದು ಗಂಟೆಯೂ ವಿದ್ಯುತ್ ನೀಡುತ್ತಿಲ್ಲ ಎಂಬ ಆರೋಪವೂ ಇದೆ.

ಇದನ್ನೂ ಓದಿ: ವಿದ್ಯುತ್ ಕಣ್ಣಾ ಮುಚ್ಚಾಲೆ: ಅನಧಿಕೃತ ಲೋಡ್ ಶೆಡ್ಡಿಂಗ್​ನಿಂದ ಯಾದಗಿರಿ ಜಿಲ್ಲೆಯ ರೈತರು ಕಂಗಾಲು

ಅಷ್ಟು ಮಾತ್ರವಲ್ಲದೆ, ಕರೆಂಟ್ ಯಾವಾಗ ಹೋಗುತ್ತದೆ, ಯಾವಾಗ ಬರತ್ತದೆ ಎಂಬುದರ ಬಗ್ಗೆ ಗ್ರಾಹಕರಿಗೆ ಮಾಹಿತಿ ಇರುವುದಿಲ್ಲ. ಹೀಗಾಗಿ ರೈತರು ರಾತ್ರಿ ಇಡೀ ಜಮೀನಿನಲ್ಲಿ ಕಾಯುತ್ತಿರುತ್ತಾರೆ. ಈ ಸಮದ್ಯೆ ದೂರ ಮಾಡಲು ರೈತರಿಗೆ ವಾಟ್ಸ್​ಆ್ಯಪ್ ಗ್ರೂಪ್ ಮೂಲಕ ಮಾಹಿತಿ ರವಾನೆ ಮಾಡಲಾಗುತ್ತದೆ.

ವಿದ್ಯುತ್ ಎಷ್ಟು ಗಂಟೆಗೆ ಬರತ್ತದೆ, ಎಷ್ಟು ವ್ಯತ್ಯಯ ಆಗಲಿದೆ ಎಂದು ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ನೀಡಲಿದ್ದಾರೆ. ಆರೇಳು ಜಿಲ್ಲಾ ವ್ಯಾಪ್ತಿಯ ಹೆಸ್ಕಾಂನಲ್ಲಿ ಬ್ಯಾಹಟ್ಟಿ ಸರ್ಕಲ್​ನಲ್ಲಿ ಮಾಡಿರುವ ಈ ಪ್ರಯೋಗ ಯಶಸ್ವಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:36 pm, Sat, 21 October 23

Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ