ಹುಬ್ಬಳ್ಳಿ- ಧಾರವಾಡ: ಇನ್ನೊಮ್ಮೆ ಅಧಿಕಾರ ಕೊಟ್ಟರೆ ಅರ್ಧಕ್ಕೆ ನಿಂತ ಕಾಮಗಾರಿ ಪೂರ್ಣ ಮಾಡ್ತೇವೆ: ಪ್ರಲ್ಹಾದ್ ಜೋಶಿ
ಸೆಪ್ಟಂಬರ್ 3 ರಂದು ಹುಬ್ಬಳ್ಳಿ- ಧಾರವಾಡ ಪಾಲಿಕೆ ಚುನಾವಣೆ ನಡೆಯಲಿದೆ. ಪಾಲಿಕೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ರಿಂದ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ.
ಹುಬ್ಬಳ್ಳಿ: ಕಳೆದ ಬಾರಿ ನಾವು ನೀಡಿದ್ದ ಭರವಸೆ ಈಡೇರಿಸಿದ್ದೇವೆ. ಇನ್ನೊಮ್ಮೆ ಅಧಿಕಾರ ಕೊಟ್ಟರೆ ಕಾಮಗಾರಿಗಳು ಪೂರ್ಣ ಆಗಲಿವೆ. ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ಣ ಮಾಡ್ತೇವೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ನೀಡಿದ್ದಾರೆ. ಪ್ರಣಾಳಿಕೆಯಲ್ಲಿ ಬಿಆರ್‌ಟಿಎಸ್ ಯೋಜನೆ ಕೈಬಿಟ್ಟ ವಿಚಾರವಾಗಿ ಮಾತನಾಡಿದ ಅವರು, ಪ್ರಣಾಳಿಕೆಯಲ್ಲಿ ಯೋಜನೆ ಬಿಟ್ಟಿದ್ದಕ್ಕೆ ಫೇಲ್ಯೂರ್ ಅಂತಲ್ಲ. ಕೆಲವೊಂದು ಲೋಪದೋಷಗಳಾಗಿದೆ ಅಷ್ಟೇ. ಲೋಪ ದೋಷಗಳ ಬಗ್ಗೆ ಅರವಿಂದ ಬೆಲ್ಲದ್ ಹೇಳಿದ್ದರು. ಅದನ್ನು ಸರಿಪಡಿಸುವುದಾಗಿ ಶಾಸಕ ಬೆಲ್ಲದ್‌ಗೆ ಹೇಳಿದ್ದೇನೆ ಎಂದು ಸಚಿವ ಜೋಶಿ ಹೇಳಿದ್ದಾರೆ.
ಸೆಪ್ಟೆಂಬರ್ 3 ರಂದು ಹುಬ್ಬಳ್ಳಿ- ಧಾರವಾಡ ಪಾಲಿಕೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಪ್ರಣಾಳಿಕೆ ಬಿಡುಗಡೆ ಮಾಡಿವೆ. ಭಾನುವಾರ (ಆಗಸ್ಟ್ 29) ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಚಿವ ಜಗದೀಶ್ ಶೆಟ್ಟರ್, ಸಚಿವ ಶ್ರೀರಾಮುಲು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ನಾವು ಹುಬ್ಬಳ್ಳಿ- ಧಾರವಾಡ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದೇವೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ ಮೇಲ್ದರ್ಜೆಗೇರಿಸಿದ್ದೇವೆ. ಈಗಾಗಲೇ ಗ್ಯಾಸ್ ಪೈಪ್‌ಲೈನ್ ಯೋಜನೆ ಪ್ರಗತಿಯಲ್ಲಿದೆ. ಕೊರೊನಾ ವೇಳೆ ಆಕ್ಸಿಜನ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. 70 ವರ್ಷ ಆಡಳಿತ ನಡೆಸಿದವರು ನಿನ್ನೆ ಮಾತನಾಡಿದ್ದಾರೆ. ಇವರು ಕುಡಿಯುವ ನೀರಿನ ಯೋಜನೆ ತಡೆ ಹಿಡಿದಿದ್ದರು. ಮತ್ತೆ ಅದನ್ನ ನಾವು ಪುನಾರಂಭ ಮಾಡಿದ್ದೇವೆ. ಹುಬ್ಬಳ್ಳಿಗೆ ಐಐಟಿ ಬೇಡ ಎಂದು ಸಿದ್ದರಾಮಯ್ಯರಿಂದ ಪತ್ರ ಬರೆದಿದ್ದರು. ಸಿದ್ದರಾಮಯ್ಯ ಪತ್ರ ಬರೆದಿದ್ದು ಕೈ ನಾಯಕರಿಗೆ ನೆನಪಿಲ್ವಾ? ಎಂದು ಡಿ.ಕೆ. ಶಿವಕುಮಾರ್‌ಗೆ ಕೇಂದ್ರ ಸಚಿವ ಪ್ರಲ್ಗಾದ್ ಜೋಶಿ ಪ್ರಶ್ನೆ ಕೇಳಿದ್ದಾರೆ.
ಸೆಪ್ಟಂಬರ್ 3 ರಂದು ಹುಬ್ಬಳ್ಳಿ- ಧಾರವಾಡ ಪಾಲಿಕೆ ಚುನಾವಣೆ ನಡೆಯಲಿದೆ. ಪಾಲಿಕೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ರಿಂದ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ.
ಬಿಜೆಪಿ ಅಭ್ಯರ್ಥಿ ಪರ ಸಚಿವ ಬಿ. ಶ್ರೀರಾಮುಲು ಪ್ರಚಾರ ನಡೆಸಿದ್ದಾರೆ. ವಾರ್ಡ್ ನಂ.78 ರಲ್ಲಿ ಸಚಿವ ಬಿ. ಶ್ರೀರಾಮುಲು ಪ್ರಚಾರ ಕೈಗೊಂಡಿದ್ದಾರೆ. ಶ್ರೀರಾಮುಲು ಪ್ರಚಾರದ ವೇಳೆ ನೂರಾರು ಜನ ಸೇರಿದ್ದರು. ಪಾಲಿಕೆ ಚುನಾವಣೆ ಪ್ರಚಾರ ವೇಳೆ ರೂಲ್ಸ್ ಬ್ರೇಕ್ ಆಗಿದೆ. ಸಚಿವ ಬಿ. ಶ್ರೀರಾಮುಲುಗೆ ಹೂವಿನ ಮಳೆ ಸುರಿಸಿ ಸ್ವಾಗತ ಕೋರಲಾಗಿದೆ. ದೈಹಿಕ ಅಂತರ ಮರೆತು, ಮಾಸ್ಕ್ ಧರಿಸದೆ ಪ್ರಚಾರ ನಡೆಸಲಾಗಿದೆ.
ಪಕ್ಷೇತರ ಅಭ್ಯರ್ಥಿ ಪ್ರಚಾರ ವೇಳೆ ವಾಗ್ವಾದ ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ ಹಿನ್ನೆಲೆ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡುವ ವೇಳೆ ಗಲಾಟೆ ನಡೆದಿದೆ. ಇನ್ಸ್‌ಪೆಕ್ಟರ್ ಹಾಗೂ ಪಕ್ಷೇತರ ಅಭ್ಯರ್ಥಿ ಬೆಂಬಲಿಗರ ಮಧ್ಯೆ ಗಲಾಟೆ ಸಂಭವಿಸಿದೆ. ಕೊವಿಡ್ ನಿಯಮ ಪಾಲಿಸಿ ಪ್ರಚಾರ ಮಾಡುವಂತೆ ಸೂಚನೆ ನೀಡಲಾಗಿತ್ತು. ಬೆಂಡಿಗೇರಿ ಇನ್ಸ್‌ಪೆಕ್ಟರ್ ಸೂಚಿಸಿದ್ದರು. ಈ ಹಿನ್ನೆಲೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಚಿವರು ಪ್ರಚಾರ ಮಾಡುವಾಗ ಜನರು ಗುಂಪು ಸೇರಿದ್ದರು. ಬಿಜೆಪಿ, ಕಾಂಗ್ರೆಸ್ ಪ್ರಚಾರದ ವೇಳೆ ಕೊವಿಡ್ ರೂಲ್ಸ್ ಬ್ರೇಕ್ ಆಗಿದೆ. ಅವರು ಪ್ರಚಾರ ಮಾಡುವಾಗ ಏಕೆ ಈ ಮಾತನ್ನು ಹೇಳಲಿಲ್ಲ? ಅವರಿಗಿಲ್ಲದ ನಿಮಯ ನಮಗೆ ಮಾತ್ರ ಏಕೆಂದು ಪ್ರಶ್ನೆ ಮಾಡಿದ್ದಾರೆ. ಇನ್ಸ್‌ಪೆಕ್ಟರ್ ಹಾಗೂ ಪಕ್ಷೇತರ ಅಭ್ಯರ್ಥಿ ಬೆಂಬಲಿಗರ ಮಧ್ಯೆ ವಾಗ್ವಾದ ಸಂಭವಿಸಿದೆ.
ಇದನ್ನೂ ಓದಿ: ಹುಬ್ಬಳ್ಳಿ ಧಾರವಾಡ ಮೆಟ್ರೋ ರೈಲು ಮಾರ್ಗ ನಿರ್ಮಾಣ; ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ
ಹುಬ್ಬಳ್ಳಿ- ಧಾರವಾಡ ಪಾಲಿಕೆ ಚುನಾವಣೆ: ನಾಮಪತ್ರ ಸಲ್ಲಿಸಬೇಕಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ಹೃದಯಾಘಾತ
Published On - 3:10 pm, Sun, 29 August 21