
ಧಾರವಾಡ: ಬುದ್ಧಿಜೀವಿಗಳು ಮುಸ್ಲಿಂ, ಕ್ರಿಶ್ಚಿಯನ್‌ರಿಗಾಗಿ ಹೊರಗೆ ಬರುತ್ತಾರೆ. ಹಿಂದೂಗಳ ವಿಷಯದಲ್ಲಿ ಬರುವುದಿಲ್ಲ. ಹರ್ಷ ಕೊಲೆ, ಚಂದ್ರು ಕೊಲೆ ಇವರಿಗೆ ಗೊತ್ತಾಗಲಿಲ್ಲ. ಕರ್ನಾಟಕದಲ್ಲಿ 40 ಹಿಂದೂಗಳ ಕೊಲೆಯಾದಾಗ ಎಲ್ಲಿ ಮಲಗಿದ್ರು. ಕ್ರಿಶ್ಚಿಯನ್, ಮಸ್ಲಿಮರ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಬುದ್ಧಿಜೀವಿಗಳಲ್ಲ, ಬುದ್ಧಿಗೇಡಿಗಳು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ನುಗ್ಗಿಕೇರಿಯಲ್ಲಿ ಮುಸ್ಲಿಂ ವ್ಯಾಪಾರಿ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿರುವ ಮುತಾಲಿಕ್, ಬುದ್ಧಿಜೀವಿಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಇನ್ನು ಇದೇ ವೇಳೆ ತಮ್ಮ ಗಡಿಪಾರು ಆಗ್ರಹ ವಿಚಾರಕ್ಕೆ ಸಂಬಂಧಿಸಿ ಮುತಾಲಿಕ್ ಪ್ರತಿಕ್ರಿಯಿಸಿದ್ದು, ನನ್ನ ಗಡಿಪಾರು ಮಾಡುವುದು 10-15 ವರ್ಷದಿಂದ ನಡೆಯುತ್ತಿದೆ. ನಾನು ಹಿಂದುತ್ವಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ದೇಶದ ಹಿತಕ್ಕಾಗಿ ಹೋರಾಟ ಮಾಡುತ್ತ ಬಂದಿದ್ದೇನೆ. ಈಗಾಗಲೇ 17-18 ಸಲ ಜಿಲ್ಲೆಗಳಿಂದ ಗಡಿಪಾರು ಮಾಡಿದ್ದಾರೆ. ಇದೇನೂ ಬಹಳ ದೊಡ್ಡ ವಿಷಯವಲ್ಲ. ಗಡಿಪಾರು ಎಲ್ಲಿಗೆ ಮಾಡುವವರಿದ್ದೀರಿ? ಎಲ್ಲಿಗೆ ಕಳುಹಿಸುತ್ತೀರಿ ನನ್ನ? ನನ್ನ ಗಡಿಪಾರು ಮಾಡಲು ನೀವು ಯಾರು? ಗಡಿಪಾರಿಗೆ ಆಗ್ರಹಿಸುವವರು ಬನ್ನಿ. ಶಾಸಕ ಅಬ್ಬಯ್ಯ, ತಟಮಗಾರ ಬನ್ನಿ. ಏನು ಸಂವಿಧಾನ ವಿರೋಧಿ ಮಾಡುತ್ತಿದ್ದೀರಿ ಚರ್ಚೆ ಮಾಡೋಣ ಎಂದು ಆಹ್ವಾನಿಸಿದ್ದಾರೆ.
ಸಿದ್ದರಾಮಯ್ಯ, ಧರ್ಮಸಿಂಗ್, ಹೆಚ್‌ಡಿಕೆ ಸಹ ಹಿಂದೆ ಗಡಿಪಾರು ಮಾತು ಹೇಳಿದ್ದರು. ಗಡಿಪಾರಿಗೆ ಎಲ್ಲವೂ ಮುಗಿಯೋದಿಲ್ಲ. ಎದುರಾ-ಬದುರಾ ಬನ್ನಿ ಮಾತನಾಡೋಣ. ಎಸ್‌ಡಿಪಿಐ, ಓವೈಸಿ ಬಗ್ಗೆ ಮಾತನಾಡಿ ನೋಡೋಣ. ಎಸ್‌ಡಿಪಿಐ ದೇಶದ್ರೋಹಿ ಅಂತಾ ನನ್ನ ಬಳಿ ದಾಖಲೆ ಇದೆ. ಅದರ ಬಗ್ಗೆ ಮಾತನಾಡಿರುವಂತೆ ಬನ್ನಿ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಇದೇ ವೇಳೆ ಅವರು, ಬೆಂಗಳೂರು ನಗರ ಮಾತ್ರವಲ್ಲ ಇಡೀ ರಾಜ್ಯದಲ್ಲಿ ರಸ್ತೆಗಳಿಗೆ ಮುಸ್ಲಿಂ, ಕ್ರಿಶ್ಚಿಯನ್ ಹೆಸರುಗಳಿವೆ. ಆ ಬ್ರಿಟಿಷರು ಭಾರತವನ್ನು ಬಿಟ್ಟು ಹೋದರೂ ಅವರ ಹೆಸರಿನಲ್ಲೇ ರಸ್ತೆಗಳಿವೆ. ಕಬ್ಬನ್, ವಿಕ್ಟೋರಿಯಾ ಇಲ್ಲೇ ಇದ್ದಾರೆ. ರಸ್ತೆಗಳಿಗೆ ಕನ್ನಡ ಹೋರಾಟಗಾರರು, ಸಾಹಿತಿ, ಕವಿಗಳ ಹೆಸರಿಡುವಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮಧ್ಯ ಪ್ರದೇಶ: ರಾಮನವಮಿ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿದ್ದ ವ್ಯಕ್ತಿಗಳ ಆಸ್ತಿ ಧ್ವಂಸ
ಈಶ್ವರಪ್ಪನನ್ನು ಕೂಡಲೇ ಮಂತ್ರಿ ಮಂಡಲದಿಂದ ವಜಾ ಮಾಡಿ ಬಂಧಿಸಿ: ರಣದೀಪ್ ಸುರ್ಜೇವಾಲ ಒತ್ತಾಯ