ಹುಬ್ಬಳ್ಳಿ: ಪ್ರಚೋದನಕಾರಿ ವಾಟ್ಸಾಪ್ (WhatsApp) ಸ್ಟೇಟಸ್ನಿಂದ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿ 3 ತಿಂಗಳಿಂದ ಸಾಲು ಸಾಲು ಕ್ಯಾಂಪೇನ್ಗಳೇ (Campaign) ಈ ಗಲಾಟೆಗೆ ಕಾರಣ ಎಂದು ಹೇಳಲಾಗುತ್ತಿದೆ. ಇದಲ್ಲದೆ ಶ್ರೀರಾಮನವಮಿ ದಿನದಂದು ಗಲಾಟೆ ನಡೆಯುತ್ತಿತ್ತು. ಹುಬ್ಬಳ್ಳಿಯ ಪೆಂಡಾರ್ ಗಲ್ಲಿಯ ಮಸೀದಿ ಮೇಲೆ ಜೈ ಶ್ರೀರಾಮ್ ಎಂದು ಕಿಡಿಗೇಡಿಗಳು ಲೇಸರ್ ಲೈಟ್ ಹಾಕಿದ್ದರು. ಇದನ್ನು ಮುಸ್ಲಿಂ ಸಮುದಾಯದ ಹಿರಿಯ ಮುಖಂಡರು ತಡೆದಿದ್ದರು. ನಂತರ ವಿವಾದಿತ ಪೋಸ್ಟ್ ಹಾಕುತ್ತಿದ್ದಂತೆ ಮುಸ್ಲಿಂ ಸಮುದಾಯ ರೊಚ್ಚಿಗೆದ್ದಿತು.
ಪೋಸ್ಟ್ ಹಾಕಿದವರನ್ನು ಮುಗಿಸಲು ಸ್ಕೆಚ್ ಹಾಕಲಾಗಿತ್ತು. ಹುಬ್ಬಳ್ಳಿಯ ಗಲ್ಲಿಗಲ್ಲಿಯಲ್ಲೂ ಗಲಾಟೆಗೆ ಸಂಚು ರೂಪಿಸಲಾಗಿತ್ತು. ಪೋಸ್ಟ್ ಹಾಕಿದ್ದ ಅಭಿಷೇಕ್ ಹಿರೇಮಠನನ್ನು ಪೊಲೀಸರು ರಕ್ಷಿಸಿದ್ದರು. ಹೀಗಾಗಿ ಉದ್ರಿಕ್ತರ ಗುಂಪು ಪೊಲೀಸರನ್ನು ಟಾರ್ಗೆಟ್ ಮಾಡಿತ್ತು. ಇಬ್ಬರು ಪೊಲೀಸರನ್ನು ಕೊಲ್ಲಲು ಯತ್ನಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ವಸೀಂ ಪಠಾಣ್, ಇರ್ಫಾನ್, ಮೊಹಮ್ಮದ್ ಆರೀಫ್ ಹುಬ್ಬಳ್ಳಿ ಕಿಂಗ್ಸ್ ಎಂಬ ವಾಟ್ಸಾಪ್ ಗ್ರೂಪ್ನಲ್ಲಿ ಈ ಬಗ್ಗೆ ಕರೆ ನೀಡಿದ್ದರು. ಮೂವರ ಸೂಚನೆ ಮೇರೆಗೆ ನೂರಾರು ಜನರು ಜಮಾವಣೆ ಆಗಿದ್ದರು.
ಗಲಾಟೆ ವೇಳೆ ಮೌಲ್ವಿ, ಇನ್ಸ್ಪೆಕ್ಟರ್ ಜತೆ ವಾಗ್ವಾದ ನಡೆಸಿದ್ದ ಎಂಐಎಂ ಮುಖಂಡ ಮೊಹಮ್ಮದ್ ಆರೀಫ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿ ಜನರಿಗೆ ಶಾಂತಿ ಸಂದೇಶ ಸಾರಲು ಬಂದಿದ್ದೇನೆ- ಅಬ್ದುಲ್ ಅಜೀಮ್:
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್, ಹುಬ್ಬಳ್ಳಿ ಗಲಾಟೆ ಪ್ರಕರಣದ ಕುರಿತ ವರದಿ ತರಿಸಿಕೊಂಡಿದ್ದೇನೆ. ಗಲಾಟೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಹುಬ್ಬಳ್ಳಿ ಜನರಿಗೆ ಶಾಂತಿ ಸಂದೇಶ ಸಾರಲು ಬಂದಿದ್ದೇನೆ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇರಬೇಕು. ಸೌಹಾರ್ದತೆ ಮೂಡುವವರೆಗೂ ಶಾಂತಿ ಕಾಪಾಡಲು ಆಗಲ್ಲ. ಹುಬ್ಬಳ್ಳಿ ಪೊಲೀಸ್ ಆಯುಕ್ತರು, ಅಧಿಕಾರಿಗಳು ದಕ್ಷರಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸದ್ಯ ಹುಬ್ಬಳ್ಳಿ ನಗರದಲ್ಲಿ ಶಾಂತಿಯುತ ವಾತಾವರಣ ಇದೆ. ಶಾಂತಿ ಕಾಪಾಡುವ ಸಂಬಂಧ ನಮ್ಮ ಮುಖಂಡರ ಜತೆ ಚರ್ಚಿಸುವೆ. ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು
ಇದನ್ನೂ ಓದಿ
ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ವಿಚಾರ; ಪರಾರಿಯಾಗಿರುವ ಪ್ರಮುಖ ಆರೋಪಿಗಳು ಒಂದೇ ಕಡೆ ಇರುವ ಅನುಮಾನ
MI vs CSK: ಐಪಿಎಲ್ನಲ್ಲಿಂದು ರೋಚಕ ಕದನ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಿಎಸ್ಕೆ-ಮುಂಬೈ
Published On - 9:14 am, Thu, 21 April 22