Diabetes Care Clinic; ಹುಬ್ಬಳ್ಳಿಯ ಕಿಮ್ಸ್​​ನಲ್ಲಿ ಪ್ರತ್ಯೇಕ ಡಯಾಬಿಟೀಸ್ ಕೇರ್ ಕ್ಲಿನಿಕ್ ಆರಂಭ

ಮೂಲಗಳ ಪ್ರಕಾರ, ಕಿಮ್ಸ್ ಆಡಳಿತ ಮಂಡಳಿಯು ಐದು ವರ್ಷಗಳ ಹಿಂದೆ ಪ್ರತ್ಯೇಕ ಮಧುಮೇಹ ಆರೈಕೆ ಘಟಕವನ್ನು ಪ್ರಾರಂಭಿಸಲು ಯೋಜಿಸಿತ್ತು.ಮಧುಮೇಹ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಪಡೆಯಲು ಕ್ಲಿನಿಕ್ ಸಹಾಯ ಮಾಡಲಿದೆ. ಇದು ಉತ್ತರ ಕರ್ನಾಟಕ ಪ್ರದೇಶದ ಬಡ ರೋಗಿಗಳಿಗೆ ಚಿಕಿತ್ಸೆಯನ್ನು ಒದಗಿಸುತ್ತದೆ. ಗುರುವಾರ ಅನೇಕ ರೋಗಿಗಳು ಚಿಕಿತ್ಸಾಲಯಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದಾರೆ.

Diabetes Care Clinic; ಹುಬ್ಬಳ್ಳಿಯ ಕಿಮ್ಸ್​​ನಲ್ಲಿ ಪ್ರತ್ಯೇಕ ಡಯಾಬಿಟೀಸ್ ಕೇರ್ ಕ್ಲಿನಿಕ್ ಆರಂಭ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Sep 08, 2023 | 4:58 PM

ಹುಬ್ಬಳ್ಳಿ, ಸೆಪ್ಟೆಂಬರ್ 8: ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ (KIMS) ಹುಬ್ಬಳ್ಳಿಯ ಒಪಿಡಿ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ‘ಮಧುಮೇಹ ನಿಗಾ ಘಟಕ (Diabetes Care Unit)’ ಅಥವಾ ಕ್ಲಿನಿಕ್​ಗೆ ಗುರುವಾರ ಚಾಲನೆ ನೀಡಲಾಯಿತು. ಪ್ರಾಯೋಗಿಕ ಯೋಜನೆಯ ಭಾಗವಾಗಿ ಪ್ರತಿ ಗುರುವಾರ ಕ್ಲಿನಿಕ್ ತೆರೆಯಲಿದ್ದು, ಈ ಪ್ರತ್ಯೇಕ ಘಟಕದಲ್ಲಿ ಜನರಲ್ ಮೆಡಿಸಿನ್, ಸರ್ಜರಿ, ನ್ಯೂರಾಲಜಿ, ಪೀಡಿಯಾಟ್ರಿಕ್ಸ್ ಮತ್ತು ನೇತ್ರಶಾಸ್ತ್ರ ಸೇರಿದಂತೆ ವಿವಿಧ ವಿಭಾಗಗಳ ತಜ್ಞರ ತಂಡ ಅಗತ್ಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲಿದೆ. ಇದು ಮಧುಮೇಹ ರೋಗಿಗಳಿಗೆ ಒಂದೇ ಸೂರಿನಡಿ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

ಮೂಲಗಳ ಪ್ರಕಾರ, ಕಿಮ್ಸ್ ಆಡಳಿತ ಮಂಡಳಿಯು ಐದು ವರ್ಷಗಳ ಹಿಂದೆ ಪ್ರತ್ಯೇಕ ಮಧುಮೇಹ ಆರೈಕೆ ಘಟಕವನ್ನು ಪ್ರಾರಂಭಿಸಲು ಯೋಜಿಸಿತ್ತು. ಕೋವಿಡ್ -19 ಸಾಂಕ್ರಾಮಿಕದ ಕಾರಣದಿಂದಾಗಿ ಯೋಜನೆಯನ್ನು ಕಾರ್ಯಗತಗೊಳಿಸಲಿಲ್ಲ. ಈಗ ಈ ಯೋಜನೆ ಕೈಗೆತ್ತಿಕೊಂಡಿದ್ದು, ಇದರಿಂದ ಮಧುಮೇಹ ರೋಗಿಗಳು ಸುಲಭವಾಗಿ ಸೂಕ್ತ ಚಿಕಿತ್ಸೆ ಪಡೆಯಬಹುದು ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ತಿಳಿಸಿದೆ.

ಮಧುಮೇಹ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಪಡೆಯಲು ಕ್ಲಿನಿಕ್ ಸಹಾಯ ಮಾಡಲಿದೆ. ಇದು ಉತ್ತರ ಕರ್ನಾಟಕ ಪ್ರದೇಶದ ಬಡ ರೋಗಿಗಳಿಗೆ ಚಿಕಿತ್ಸೆಯನ್ನು ಒದಗಿಸುತ್ತದೆ. ಗುರುವಾರ ಅನೇಕ ರೋಗಿಗಳು ಚಿಕಿತ್ಸಾಲಯಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದಾರೆ.

ಕ್ಲಿನಿಕ್ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಮಧುಮೇಹ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಮಾನ್ಯ ಶಸ್ತ್ರಚಿಕಿತ್ಸಕರು ಮತ್ತು ವೈದ್ಯರಿಗೆ ಅಗತ್ಯ ತರಬೇತಿ ನೀಡಲಾಗಿದೆ ಎಂದು ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅವರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ಗಾಯ ಗುಣವಾದರೂ ಫಿಸಿಯೋಥೆರಪಿ ಯಾಕೆ ಅಗತ್ಯ?

ರೋಗಿಗಳಲ್ಲಿ ಜೀವನೋತ್ಸಾಹ ಮೂಡಿಸಲು ಮತ್ತು ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲು ಪ್ರತ್ಯೇಕ ತಂಡವನ್ನು ರಚಿಸಲಾಗಿದೆ. ಅನೇಕ ವೈದ್ಯರು ಮತ್ತು ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಈಗ ಚಿಕಿತ್ಸೆಗಾಗಿ ವಾರಕ್ಕೊಮ್ಮೆ ಗುರುವಾರ ಕ್ಲಿನಿಕ್ ತೆರೆದಿರುತ್ತದೆ. ಮುಂದಿನ ದಿನಗಳಲ್ಲಿ ವಾರಕ್ಕೆ ಎರಡು ಬಾರಿ ಅಥವಾ ನಿಯಮಿತವಾಗಿ ತೆರೆಯುವ ಯೋಜನೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಧುಮೇಹ ಕ್ಲಿನಿಕ್ ಬಹುಕಾಲದ ಬೇಡಿಕೆಯಾಗಿದ್ದು, ಅದನ್ನು ಈಡೇರಿಸಲಾಗಿದೆ. ಮೊದಲು ಬೇರೆ ಬೇರೆ ವಿಭಾಗಗಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕಾಗುತ್ತಿತ್ತು. ಈಗ ಈ ಎಲ್ಲಾ ವಿಭಾಗಗಳ ವೈದ್ಯರು ಒಂದೇ ಕ್ಲಿನಿಕ್‌ನಲ್ಲಿ ಲಭ್ಯವಿರುತ್ತಾರೆ. ಬಡವರಿಗೆ ಗುಣಮಟ್ಟದ ಚಿಕಿತ್ಸೆ ಪಡೆಯಲು ಕ್ಲಿನಿಕ್ ನೆರವಾಗಲಿದೆ. ಮುಂದಿನ ದಿನಗಳಲ್ಲಿ ಪ್ರತಿನಿತ್ಯ ತೆರೆಯಬೇಕು ಎಂದು ರೋಗಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ