ಹುಬ್ಬಳ್ಳಿ: ಚುನಾವಣೆಗೂ ಮುನ್ನ ಕಾಂಗ್ರೆಸ್(Congress) ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯು ಒಂದಾಗಿದ್ದು, ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಸರ್ಕಾರ ಇದೇ ತಿಂಗಳ 11 ರಂದು ಅಧಿಕೃತವಾಗಿ ಜಾರಿಗೊಳಿಸಿತು. ಅದರಂತೆ ಶಕ್ತಿ ಯೋಜನೆಯಡಿಯಲ್ಲಿ ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ(Free Bus Service) ಹಿನ್ನಲೆ ಎಲ್ಲಾ ಬಸ್ಗಳು ಫುಲ್ ಆಗಿ ಸಂಚರಿಸುತ್ತಿವೆ. ಈ ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿದ್ದ ಮಹಿಳೆಯರು ದೇವಸ್ಥಾನ ಸೇರಿದಂತೆ ಪ್ರವಾಸಿ ಸ್ಥಳಗಳಿಗೆ ಸಂಚರಿಸಲು ಶುರು ಮಾಡಿದ್ದಾರೆ. ಅದರಂತೆ ವಾಯವ್ಯ ವಿಭಾಗಕ್ಕೆ ಒಳಪಡುವ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಉತ್ತರ ಕನ್ನಡ ಹಾವೇರಿ ಸೇರಿ 9 ಜಿಲ್ಲೆಯ ಸಾರಿಗೆ ವಿಭಾಗದಲ್ಲಿ ಮಹಿಳೆಯರ ಪ್ರಯಾಣಿಕರ ಸಂಖ್ಯೆ ಕೋಟಿ ದಾಟಿದೆ.
ಹೌದು ಜೂನ್ 11ರಿಂದ 27ರವರೆಗೆ ಬರೊಬ್ಬರಿ 2,14,75,000 ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. ಇದರ ಟಿಕೆಟ್ ಮೌಲ್ಯ 54 ಕೋಟಿಗೂ ರೂಪಾಯಿಗೂ ಅಧಿಕವಾಗಿದೆ. ಜೂ.27 ರ ಒಂದೇ ದಿನ 14,88,000 ಮಹಿಳಾ ಪ್ರಯಾಣಿಕರು ಪ್ರಯಾಣ ಬೆಳಸಿದ್ದಾರೆ. ಇನ್ನು ಮಹಿಳೆಯರ ಜೊತೆ ಪುರುಷ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗಿದೆ. ಜೂ.27 ರಂದು ಒಂದೇ ದಿನ ವಾಯುವ್ಯ ಸಾರಿಗೆ ವಿಭಾಗದಲ್ಲಿ 26 ಲಕ್ಷ 31 ಸಾವಿರ ಜನ ಪ್ರಯಾಣಿಸಿದ್ದಾರೆ. ಇದರಲ್ಲಿ 14 ಲಕ್ಷ 88 ಸಾವಿರ ಮಹಿಳಾ ಪ್ರಯಾಣಿಕರು, 11 ಲಕ್ಷ 43 ಸಾವಿರ ಪುರುಷ ಪ್ರಯಾಣಿಕರ ಪ್ರಯಾಣಕರು ಸೇರಿದ್ದಾರೆ.
ಇದನ್ನೂ ಓದಿ:Chamarajanagara: ಮಹಿಳೆಯರಿಗೆ ಉಚಿತ ಪ್ರಯಾಣ ಎಫೆಕ್ಟ್; ಡ್ರೈವರ್ ಸೀಟ್ ಮೂಲಕ ಬಸ್ ಹತ್ತಿದ ಲೇಡಿಸ್
ಗದಗ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಸಿ ಸಿ ಪಾಟೀಲ್ ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ ಬಸ್ ಪ್ರಯಾಣ ಹೊರತುಪಡಿಸಿದ್ರೆ, ಉಳಿದ ಯೋಜನೆ ಜಾರಿ ಮಾಡಲು ಸಾಧ್ಯವಾಗ್ತಾಯಿಲ್ಲ. ಈವರಿಗೆ 2 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಆ 2 ಕೋಟಿ ಪ್ರಯಾಣದ ವೆಚ್ಚವನ್ನು ಸರ್ಕಾರ ಬರಿಸಬೇಕು. ಇಲ್ಲವೆಂದರೆ ಚಾಲಕ ಹಾಗೂ ಕಂಡಕ್ಟರ್ ಬಸ್ ಬಿಟ್ಟು ಹೋಗಬೇಕಾಗುತ್ತೇ. ಇನ್ನು ಈ ಉಚಿತ ಪ್ರಯಾಣದಿಂದ ಶಾಲಾ ಮಕ್ಕಳಿಗೆ, ತೊಂದರೆಯಾಗುತ್ತಿದೆ, ಹೆಚ್ಚಿನ ಬಸ್ ವ್ಯವಸ್ಥೆ ಕೂಡ ಇಲ್ಲವೆಂದು ಆಕ್ರೋಶ ಹೊರ ಹಾಕಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ