ಬಾಂಬ್ ಬೆದರಿಕೆ ಹಾಕಿದವರ ಮೇಲೆ ಗುಂಡು ಹಾರಿಸಿ -ಇಸ್ಲಾಂ ಧರ್ಮಗುರು ಸೈಯ್ಯದ್ ತಾಜಾವುದ್ದೀನ್

| Updated By: ಆಯೇಷಾ ಬಾನು

Updated on: Dec 02, 2023 | 1:20 PM

ಬೆಂಗಳೂರಿನಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದ ವಿಚಾರಕ್ಕೆ ಸಂಬಂಧಿಸಿ ಹುಬ್ಬಳ್ಳಿ ತಾಲೂಕಿನ ಪಾಳಾ ದರ್ಗಾ ಹಜರತ್ ಬಾದಶಾ ಪೀರನ್ ಇಸ್ಲಾಂ ಧರ್ಮಗುರು ಸೈಯ್ಯದ್ ತಾಜಾವುದ್ದೀನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬೆದರಿಕೆ ಹಾಕಿದವರ ಮೇಲೆ ಗುಂಡು ಹಾರಿಸಿ. ಎಲ್ಲಿ ಆದರೂ ಅವರನ್ನು ನಿಲ್ಲಿಸಿ ಅವರ ಮೇಲೆ ಗುಂಡು ಹಾರಿಸಿ ಎಂದಿದ್ದಾರೆ.

ಬಾಂಬ್ ಬೆದರಿಕೆ ಹಾಕಿದವರ ಮೇಲೆ ಗುಂಡು ಹಾರಿಸಿ -ಇಸ್ಲಾಂ ಧರ್ಮಗುರು ಸೈಯ್ಯದ್ ತಾಜಾವುದ್ದೀನ್
ಪ್ರಾತಿನಿಧಿಕ ಚಿತ್ರ
Follow us on

ಹುಬ್ಬಳ್ಳಿ, ಡಿ.02: ನಿನ್ನೆ ಬೆಂಗಳೂರಿನಲ್ಲಿ ಬರೋಬ್ಬರಿ 48ಶಾಲೆಗಳಿಗೆ ಬಾಂಬ್​ ಬೆದರಿಕೆ (Bomb Threat) ಮೇಲ್​ ಬಂದಿದ್ದು ಭಯದ ವಾತಾವರಣ ನಿರ್ಮಾಣವಾಗಿತ್ತು. ಶಾಲೆಗಳಿಗೆ ಬಾಂಬ್​ ಬೆದರಿಕೆ ಮೇಲ್ ಬಂದಿದ್ದರ ಹಿಂದೆ ಕೈವಾಡ ಇದೆ ಎನ್ನಲಾಗುತ್ತಿದ್ದು. ಶಾಲೆಗಳ ಮೇಲ್, ದತ್ತಾಂಶ ಕಿಡಿಗೇಡಿಗಳಿಗೆ ಹೇಗೆ ಸಿಕ್ತು? ಶಿಕ್ಷಣ ಇಲಾಖೆಯಿಂದ ಖಾಸಗಿ ಶಾಲೆಗಳ ದತ್ತಾಂಶ ಸೋರಿಕೆ ಆಗಿದ್ಯಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಸದ್ಯ ಈ ಬಗ್ಗೆ ತನಿಖೆ ಚುರುಕುಗೊಂಡಿದೆ. ಮತ್ತೊಂದೆಡೆ ಈ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಇಸ್ಲಾಂ ಧರ್ಮಗುರು ಸೈಯದ್ ತಾಜಾವುದ್ದೀನ್ ಖಾದ್ರಿ ಅವರು ಪ್ರತಿಕ್ರಿಯೆ ನೀಡಿದ್ದು ಬೆದರಿಕೆ ಹಾಕಿದವರ ಮೇಲೆ ಗುಂಡು ಹಾರಿಸಿ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದ ವಿಚಾರಕ್ಕೆ ಸಂಬಂಧಿಸಿ ಹುಬ್ಬಳ್ಳಿ ತಾಲೂಕಿನ ಪಾಳಾ ದರ್ಗಾ ಹಜರತ್ ಬಾದಶಾ ಪೀರನ್ ಇಸ್ಲಾಂ ಧರ್ಮಗುರು ಸೈಯ್ಯದ್ ತಾಜಾವುದ್ದೀನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬೆದರಿಕೆ ಹಾಕಿದವರ ಮೇಲೆ ಗುಂಡು ಹಾರಿಸಿ. ಎಲ್ಲಿ ಆದರೂ ಅವರನ್ನು ನಿಲ್ಲಿಸಿ ಅವರ ಮೇಲೆ ಗುಂಡು ಹಾರಿಸಿ. ಬಾಂಬ್ ಹಾಕಿದವರನ್ನು ಗಲ್ಲಿಗೇರಿಸಿ ಅಥವಾ ಗುಂಡು ಹಾರಿಸಿ ಎಂದು ಆಕ್ರೋಶ ಹೊರ ಹಾಕಿದರು.

ಇಸ್ಲಾಂ ಧರ್ಮದಲ್ಲಿ ಯಾರೂ ಮತಾಂತರ ಮಾಡು ಅಂತಾ ಹೇಳಲ್ಲ. ಬಾಂಬ್ ಹಾಕ್ತೀವಿ ಅಂತಾ ಬೆದರಿಕೆ ಹಾಕೋದು ಸರಿ ಇಲ್ಲ. ಬೆದರಿಕೆ ಹಾಕಿರೋದು ಅತ್ಯಂತ ಖಂಡನೀಯ. ಅವರಿಗೆ ಉಗ್ರವಾದ ಶಿಕ್ಷೆ ಆಗಬೇಕು. ಮಹಮ್ಮದ್ ಪೈಗಂಬರ್ ಯಾವತ್ತೂ ಬಲವಂತದ ಮತಾಂತರ ಮಾಡಿ ಅಂತಾ ಹೇಳಿಲ್ಲ. ಇಸ್ಲಾಂ ಅಂದ್ರೆ ಶಾಂತಿ. ಹೆದರಿ ಯಾರೂ ಮತಾಂತರ ಆಗಬಾರದು ಅಂತಾ ಪೈಗಂಬರ್ ಹೇಳಿದ್ದಾರೆ. ಧಮ್ಕಿ ಹಾಕಿ ಮತಾಂತರ ಮಾಡೋದು ಖಂಡನೀಯ. ಯಾರು ಕೆಟ್ಟದನ್ನು ಮಾಡುತ್ತಾರೆ ಅವರಿಗೆ ಶಿಕ್ಷೆಯಾಗಬೇಕು ಎಂದು ಧರ್ಮಗುರು ಸೈಯದ್ ತಾಜಾವುದ್ದೀನ್ ಖಾದ್ರಿ ಅವರು ಕಿಡಿಕಾರಿದರು.

ಇದನ್ನೂ ಓದಿ: ಬೆಂಗಳೂರಿನ ಶಾಲೆಗಳಿಗೆ ಬಾಂಬ್​ ಬೆದರಿಕೆ: ನಕಲಿ ​ಐಡಿ ಬಳಸಿ ಇ-ಮೇಲ್ ಸಂದೇಶ ರವಾನೆ, ತನಿಖೆಗೆ ವಿಶೇಷ ತಂಡ ರಚನೆ

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಸೇರಿದಂತೆ ಬರೋಬ್ಬರಿ 60 ಶಾಲೆಗಳಿಗೆ ನಿನ್ನೆ ಬಾಂಬ್‌ ಬೆದರಿಕೆಯ ಇ ಮೇಲ್‌ ಬಂದಿತ್ತು. ಹೀಗಾಗಿ ಎಲ್ಲಾ ಶಾಲೆಗಳಿಗೆ ರಜೆ ನೀಡಿ ತಪಾಸಣೆ ಮಾಡಲಾಗಿತ್ತು. ಎಲ್ಲಾ ಕಡೆ ಸರ್ಚ್‌ ಮಾಡ್ತಿದ್ದಂತೆ ಅದೊಂದು ಹುಸಿಬಾಂಬ್‌ ಕರೆ ಅನ್ನೋದು ಗೊತ್ತಾಗಿದೆ. ಇನ್ನು ಈ ಬಾಂಬ್‌ ಮೇಲ್‌ನ್ನ ಯಾರು ಮಾಡಿದ್ದಾರೆ ಅನ್ನೋ ಬಗ್ಗೆ ತನಿಖೆ ಮಾಡ್ತೀವಿ ಎಂದ ಗೃಹಸಚಿವರು, ಎಲ್ಲಾ ಶಾಲೆಗಳಿಗೂ ಭೇಟಿ ನೀಡಲು ಪೊಲೀಸರಿಗೆ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ನಿನ್ನೆ ಶಾಲೆೆಗಳಿಗಳಿಗೆ ರಜೆ ನೀಡಲಾಗಿತ್ತು. ಆದರೆ ಇಂದು ಎಂದಿನಂತೆ ಶಾಲೆಗಳು ಓಪನ್ ಆಗಿವೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ