ಚಡ್ಡಿಗಳು ಮಾಡೋದು ಚಡ್ಡಿ ಕೆಲಸಾನೆ ಚಡ್ಡಿಗಳು ಇನ್ನೇನ್ ಕೆಲಸ ಮಾಡುತ್ತವೆ: ಸಿದ್ದರಾಮಯ್ಯ

| Updated By: ವಿವೇಕ ಬಿರಾದಾರ

Updated on: Jun 06, 2022 | 10:33 PM

ಚಡ್ಡಿಗಳು ಮಾಡೋದು ಚಡ್ಡಿ ಕೆಲಸಾನೆ. ಚಡ್ಡಿಗಳು ಇನ್ನೇನ್ ಕೆಲಸ ಮಾಡುತ್ತವೆ, ಚಡ್ಡಿ ಕೆಲಸ ಮಾಡುತ್ತವೆ ಎಂದು ಮಾಜಿ ಮುಖ್ಯಮಂತ್ರಿ RSS ವಿರುದ್ಧವಾಗಿ ವ್ಯಂಗ್ಯವಾಡಿದ್ದಾರೆ

ಚಡ್ಡಿಗಳು ಮಾಡೋದು ಚಡ್ಡಿ ಕೆಲಸಾನೆ ಚಡ್ಡಿಗಳು ಇನ್ನೇನ್ ಕೆಲಸ ಮಾಡುತ್ತವೆ: ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us on

ಹುಬ್ಬಳ್ಳಿ: RSS ಕಾರ್ಯಕರ್ತರಿಂದ ಸಿದ್ದರಾಮಯ್ಯನವರಿಗೆ (Siddramaiah) ಚಡ್ಡಿ ಪಾರ್ಸೆಲ್ ವಿಚಾರವಾಗಿ ಹುಬ್ಬಳ್ಳಿಯಲ್ಲಿ (Hubli) ಪ್ರತಿಕ್ರಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಡ್ಡಿಗಳು ಮಾಡೋದು ಚಡ್ಡಿ ಕೆಲಸಾನೆ. ಚಡ್ಡಿಗಳು ಇನ್ನೇನ್ ಕೆಲಸ ಮಾಡುತ್ತವೆ, ಚಡ್ಡಿ ಕೆಲಸ ಮಾಡುತ್ತವೆ. ಅವರಂತು ಜನೋಪಯೋಗಿ ಕೆಲಸವನ್ನಂತೂ ಮಾಡಲ್ಲ. ಚಡ್ಡಿಗಳು ಚಡ್ಡಿ ಕೆಲಸವನ್ನು ಮಾಡಬೇಕಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಚಡ್ಡಿ ಬಗ್ಗೆ ನಾನು ಬಹಳ ವರ್ಷಗಳಿಂದ ಹೇಳುತ್ತಲೇ ಇದ್ದೇನೆ. ಅವರು ಬಡವರ ಪರ ಕೆಲಸ ಮಾಡಲ್ಲ, ಚಡ್ಡಿ ಕೆಲಸ ಮಾಡುತ್ತವೆ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್ ಸಂಘಟನೆ ಬಗ್ಗೆ ಕಾಂಗ್ರೆಸ್‌ಗೆ ಮಾತನಾಡುವ ಯೋಗ್ಯತೆ ಇಲ್ಲ

ಬೆಳಗಾವಿ: ನಂದು ಚಡ್ಡಿ ಕೊಡುತ್ತೇನೆ ಸುಡೋಕೆ ಹೇಳ್ರಿ ಎನೂ ಮಾಡೋದಿದೆ. ಅವರಿಗೆ ಸುಡೋದೆ ಅಭ್ಯಾಸ ಇದ್ರೇ ನಾವೇನೂ ಮಾಡೋಕೆ ಆಗಲ್ಲಾ‌. ಅವರಿಗೆ ನನ್ನ ಪೋನ್ ನಂಬರ್ ಕೊಡಿ ಯಾವಾಗ ಬೇಕು ಅವಾಗ ಕಳಿಸುವ ವ್ಯವಸ್ಥೆ ಮಾಡ್ತೇನಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಇದನ್ನು ಓದಿ: ವಾಯುವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆ: ನಾಳೆ ಬಾಗಲಕೋಟೆಯಲ್ಲಿ ಇಬ್ಬರು ಮಾಜಿ ಸಿಎಂಗಳ ಮತ ಬೇಟೆ

ಪರ್ಸನಲ್ ಆಗಿ ಕೊಟ್ಟು ಕಳಸ್ತೇನಿ ಕೊರಿಯರ್ ಯಾಕೆ ಮಾಡೋದು. ನಮ್ಮವರಿದ್ದಾರೆ ಪಾಪಾ ಅವರು, ಪಾಕಿಸ್ತಾನದವರಾ ನಮ್ಮ ದೇಶದವರಿದ್ದಾರೆ. ಅವರಿಗೆ ಅವಶ್ಯಕತೆ ಬಿದ್ರೇ ನನಗೆ ಪೋನ್ ಮಾಡಲಿ ಕಳುಹಿಸಿಕೊಡ್ತೇನಿ.ಆರ್‌ಎಸ್‌ಎಸ್ ಸಂಘಟನೆ ಬಗ್ಗೆ ಕಾಂಗ್ರೆಸ್‌ಗೆ ಮಾತನಾಡುವ ಯೋಗ್ಯತೆ ಇಲ್ಲ. ಆರ್‌ಎಸ್‌ಎಸ್ ದೇಶಭಕ್ತರದ್ದು ಸಮಾಜ ಸೇವೆ ಸಂಘಟನೆ. ಆರ್‌ಎಸ್‌ಎಸ್ ಮಾರ್ಗದರ್ಶನ ಮಾಡುತ್ತೆ ಅಂತಾ ನಮಗೆ ಬಹಳ ಹೆಮ್ಮೆ ಇದೆ. ಆರ್‌ಎಸ್‌ಎಸ್ ಬಗ್ಗೆ ಎನಾದ್ರೂ ಕಾಂಗ್ರೆಸ್ ನವರು ಮಾಡ್ತಿದ್ರೇ. ಸೂರ್ಯ ಮೇಲೆ ಉಗುಳಲು ಪ್ರಯತ್ನ ಮಾಡಿದ್ರೇ ಅವರ ಮಾರಿ ಮೇಲೆ ಬರುವುದದು ಎಂದು ಕಿಡಿಕಾರಿದ್ದಾರೆ.

ಆರ್‌ಎಸ್‌ಎಸ್ ನೇತೃತ್ವದಲ್ಲಿ ದೇಶದಲ್ಲಿ ಬಿಜೆಪಿಯನ್ನ ಪ್ರತಿಯೊಂದು ದೇಶದಲ್ಲಿ ಗೆಲ್ಲಿಸಿದ್ದೇವೆ. ಕಾಂಗ್ರೆಸ್ ನವರಿಗೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಸ್ಥಾನಮಾನ ಸಿಗ್ತಿಲ್ಲ. ಇದರಿಂದ ಕಾಂಗ್ರೆಸ್ ನವರು ಹತಾಶೆಯಿಂದ ಈ ರೀತಿ ಮಾತಾಡ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರಲು ಆರ್‌ಎಸ್‌ಎಸ್ ದೊಡ್ಡ ಪಾತ್ರ ಇದೆ. ಅವರ ಆಶೀರ್ವಾದ ಮಾರ್ಗದರ್ಶನದಿಂದ ನಮ್ಮ ಬಿಜೆಪಿ ಅಧಿಕಾರದಲ್ಲಿದೆ ಎಂದು ಹೇಳಿದರು.

ನಾನು ಪ್ರಜ್ಞಾವಂತ & ಕಾಸ್ಮೋಪಾಲಿಟನ್ ದಲಿತ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಸಚಿವ ಸುನಿಲ್ ಕುಮಾರ್ ನನ್ನ ಬಗ್ಗೆ ವೈಯಕ್ತಿಕ ಮಾತಾಡಿದ್ದಾರೆ.  ಕಾನ್ವೆಂಟ್ ದಲಿತ ಅಂತಾ ನನ್ನ ಬಗ್ಗೆ ಸಚಿವರು ಹೇಳಿದ್ದಾರೆ. ಇಂಥ ಹೇಳಿಕೆಗಳನ್ನ ಅವರಿಗೆ ಬಿಜೆಪಿ ಐಟಿ ಸೆಲ್ ಹೇಳಿಕೊಡುತ್ತಾ?ದಲಿತರು ಬೆಂಗಳೂರಿನಲ್ಲಿ ಹುಟ್ಟಬಾರದಾ ಎಂದು  ಪ್ರಿಯಾಂಕ್ ಖರ್ಗೆ ಸಚಿವ ಸುನಿಲ್ ಕುಮಾರ್ ಅವರಿಗೆ ಪ್ರಶ್ನಿಸಿದ್ದಾರೆ.

ಮೈಸೂರು ದಲಿತರು ಬೇರೆ ಬೆಂಗಳೂರು ದಲಿತರು ಬೇರೆಯಾ? ಬೆಂಗಳೂರಿನ ಅದಮಾರು ಮಠದ ಶಾಲೆಯಲ್ಲಿ ನಾನು ಓದಿದ್ದೇನೆ.  ಬಿಜೆಪಿಯವರಿಗೆ ಕಾನ್ವೆಂಟ್​ನಲ್ಲಿ ಓದುವ ದಲಿತರು ಇಷ್ಟ ಇಲ್ವಾ? ಬಿಜೆಪಿ ನಾಯಕರಿಗೆ ಚರಂಡಿ ಎತ್ತುವ ದಲಿತರು ಇಷ್ಟಾನಾ? ನಾನು ಪ್ರಜ್ಞಾವಂತ & ಕಾಸ್ಮೋಪಾಲಿಟನ್ ದಲಿತ. ಚಿಕ್ಯಾಗೋದಿಂದ ಹಿಡಿದು ಚಿತ್ತಾಪುರದವರೆಗೆ ಚರ್ಚೆಗೆ ನಾನು ಸಿದ್ಧನಿದ್ದೆನೆ. ಯಾವುದೇ ವಿಷಯ ನಿರ್ಧಾರ ಮಾಡಿ ನಾನು ಚರ್ಚೆಗೆ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಮಕ್ಕಳು ಓದುವ ಶಾಲೆಗೆ ಮೇಲ್ಛಾವಣಿಯಾಗಿ ಹೊದಿಸಿದ್ದ ಶೀಟುಗಳು ಬಿರುಗಾಳಿ ಮತ್ತು ಮಳೆಗೆ ಹಾರಿಹೋಗಿವೆ

ನಿಮ್ಮ ಎರಡು ರೂ. ಟ್ರೋಲರ್​ಗಳು ನೆಹರೂ ಬಗ್ಗೆ ಮಾತಾಡ್ತಾರೆ. ಅವರಿಗಿರೋ ಯೋಗ್ಯತೆ ನಮಗಿಲ್ವಾ, 2 ಬಾರಿ ಮಂತ್ರಿ ಆಗಿದ್ದೇನೆ. ವೈಯಕ್ತಿಕವಾಗಿ ಟೀಕೆ ಮಾಡುವುದು ಬಿಜೆಪಿಯವರ ಸ್ಟ್ರಾಟಜಿಯಾಗಿದೆ. ಎಷ್ಟೇ ವೈಯಕ್ತಿಕ ಟೀಕೆ ಮಾಡಿದ್ರೂ ಪ್ರಶ್ನಿಸುವುದನ್ನು ನಿಲ್ಲಿಸಲ್ಲ. ಕಾನ್ವೆಂಟ್ ದಲಿತನೋ ಅಮೆರಿಕ ದಲಿತನೋ ಏನಾದ್ರೂ ಹೇಳಿ ಐ ಡೋಂಟ್ ಕೇರ್, ನಾನೊಬ್ಬ ಪ್ರಜ್ಞಾವಂತ ದಲಿತ ಎಂದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:33 pm, Mon, 6 June 22