ಹುಬ್ಬಳ್ಳಿಯ ಇಎಸ್ಐ ಆಸ್ಪತ್ರೆ ಸುತ್ತ ಸುಳಿದಾಡುತ್ತಿವೆ ಸರ್ಪಗಳು! ಕಾರ್ಮಿಕ ಸಚಿವ ಸಂತೋಷ ಲಾಡ್ ಮುತುವರ್ಜಿ‌ ವಹಿಸಬೇಕಿದೆ

| Updated By: ಸಾಧು ಶ್ರೀನಾಥ್​

Updated on: Jul 03, 2023 | 1:06 PM

Hubballi ESI hospital: ಮಳೆಗಾಲ ಬಂತೆಂದರೆ ಆಸ್ಪತ್ರೆ ಸುತ್ತಲಿನ ಪ್ರದೇಶಗಳಲ್ಲಿ ಕುರುಚಲು ಸಸ್ಯಗಳು ಬೆಳೆದು ಹಾವುಗಳು ಎತ್ತಿಂದ ಬರುತ್ತಿವೆ ಅನ್ನೋದೆ ಗೊತ್ತಾಗಲ್ಲಾ. ಮಹಿಳೆಯರು ಮಕ್ಕಳು ಜೀವ ಕೈಲಿ ಹಿಡಿದು ಓಡಾಡಬೇಕು. ಆಸ್ಪತ್ರೆ ಸಿಬ್ಬಂದಿಗೆ ಕೊಟ್ಟಿರುವ ಕ್ವಾರ್ಟರ್ಸ್‌‌ನಲ್ಲಿ 32 ಕುಟುಂಬಗಳು ವಾಸಿಸುತ್ತಿವೆ.

ಹುಬ್ಬಳ್ಳಿಯ ಇಎಸ್ಐ ಆಸ್ಪತ್ರೆ ಸುತ್ತ ಸುಳಿದಾಡುತ್ತಿವೆ ಸರ್ಪಗಳು! ಕಾರ್ಮಿಕ ಸಚಿವ ಸಂತೋಷ ಲಾಡ್ ಮುತುವರ್ಜಿ‌ ವಹಿಸಬೇಕಿದೆ
ಹುಬ್ಬಳ್ಳಿಯ ಇಎಸ್ಐ ಆಸ್ಪತ್ರೆ ಸುತ್ತ ಸುಳಿದಾಡುತ್ತಿವೆ ಸರ್ಪಗಳು!
Follow us on

ಹುಬ್ಬಳ್ಳಿಯ ಇಎಸ್ಐ ಆಸ್ಪತ್ರೆಯಲ್ಲಿ ಹಾವುಗಳ ಹಾವಳಿ ಜೋರಾಗಿದೆ. ನೊಂದು ಬರುವ ರೋಗಿಗಳನ್ನು ಹಾವುಗಳೇ ಸ್ವಾಗತಿಸುತ್ತಿವೆ. ಜನರು ಆತಂಕದಲ್ಲಿಯೇ ಆಸ್ಪತ್ರೆಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆ ಸುತ್ತ ಸುಳಿದಾಡುವ ಸರ್ಪಗಳು ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಸ್ಥಳೀಯರ ನಿದ್ದೆಗೆಡಿಸಿವೆ (Snake fear )… ವಾಣಿಜ್ಯ ನಗರ ಹುಬ್ಬಳ್ಳಿಯ ( Hubballi) ಇಎಸ್ಐ ಆಸ್ಪತ್ರೆಗೆ (ESI Hospital) ಪ್ರತಿನಿತ್ಯ ನೂರಾರು ರೋಗಿಗಳು ಭೇಟಿ ನೀಡುತ್ತಾರೆ. ಕಾರ್ಮಿಕ ಕುಟುಂಬಗಳು ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದರೆ ಹಾವುಗಳೇ ಅವರನ್ನು ಸ್ವಾಗತಿಸುತ್ತವೆ. ಏಕೆಂದರೆ ಆಸ್ಪತ್ರೆಯ ಸುತ್ತ ಹಾವುಗಳ ಸುಳಿದಾಟ ಪ್ರತಿನಿತ್ಯವೂ ಸಹಜ ಅನ್ನುವಂತಾಗಿದೆ. ಹುಬ್ಬಳ್ಳಿ- ಕಲಘಟಗಿ ರಸ್ತೆಯಲ್ಲಿರುವ ಇಎಸ್‌ಐ ಆಸ್ಪತ್ರೆಯ ಆವರಣವೇ ಹಾವುಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ.

ಕಾರ್ಮಿಕ ಇಲಾಖೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಹುಬ್ಬಳ್ಳಿಯ ಇಎಸ್ಐ ಆಸ್ಪತ್ರೆ ಕಟ್ಟಿಸಿದೆ. ಆದರೆ ಶುಚಿತ್ವ, ಕಸಕಡ್ಡಿಗಳ ತೆರವು ಕಾರ್ಯ ಮಾಡದೆ ಹಾಗೇ ಬಿಡಲಾಗಿದೆ. ಇದರಿಂದ ಆಸ್ಪತ್ರೆ ಸಿಬ್ಬಂದಿ ಮತ್ತು ಸಾರ್ವಜನಿಕರು ಭಯದಲ್ಲಿಯೇ ಓಡಾಡುವಂತಾಗಿದೆ. ಕೆರೆ ಹಾವುಗಳು, ನಾಗರ ಹಾವುಗಳು ಆಸ್ಪತ್ರೆಯ ಸುತ್ತಲು ಓಡಾಡುತ್ತಾ ಜನರನ್ನು ಭಯಭೀತಿ ಗೊಳಿಸುತ್ತಿವೆ. ಹಾವು ಕಂಡ ತಕ್ಷಣವೇ ಆಸ್ಪತ್ರೆ ಸಿಬ್ಬಂದಿ ಉರಗ ರಕ್ಷಕರಿಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಉರಗ ತಜ್ಞರು ಹಾವು ಹಿಡಿದು ಸುರಕ್ಷಿತವಾಗಿ ದೂರದ ಕಾಡುಗಳಿಗೆ ಬಿಟ್ಟು ಬರುತ್ತಾರೆ. ಆದರೆ ಪದೇಪದೇ ಹಾವುಗಳು ಬರುವುದು ಸ್ಥಳೀಯರನ್ನು ಚಿಂತೆಗೀಡುಮಾಡಿದೆ..

ಇಎಸ್‌ಐ ಆಸ್ಪತ್ರೆ ಸುತ್ತಮುತ್ತ ಹಾವುಗಳು ಓಡಾಡಲು ಹಲವು ಕಾರಣಗಳಿವೆ. ಆಸ್ಪತ್ರೆ ನಿರ್ಮಾಣದ ವೇಳೆ ಹಳೆಯ ಕಟ್ಟಡದ ಅವಶೇಷಗಳನ್ನು ತೆರವು ಮಾಡಿಲ್ಲ. ಅಲ್ಲಲ್ಲಿ ಅವಶೇಷಗಳನ್ನು ಗುಡ್ಡೆ ಹಾಕಲಾಗಿದ್ದು ಹಾವುಗಳ ವಾಸಕ್ಕೆ ಪ್ರಶಸ್ತ ಜಾಗಗಳಾಗಿ ಬದಲಾಗಿವೆ. ಸುತ್ತಲಿನ ಕಾಂಪೌಂಡ್ ಬಳಿ ಮನೆಯ ತ್ಯಾಜ್ಯ ಎಸೆಯಲಾಗುತ್ತಿದೆ. ಅದನ್ನು ತಿನ್ನಲು ಇಲಿಗಳು ಜಮಾವಣೆ ಆಗುತ್ತಿವೆ.

ಮಳೆಗಾಲ ಬಂತೆಂದರೆ ಆಸ್ಪತ್ರೆ ಸುತ್ತಲಿನ ಪ್ರದೇಶಗಳಲ್ಲಿ ಕುರುಚಲು ಸಸ್ಯಗಳು ಬೆಳೆದು ಹಾವುಗಳು ಎತ್ತಿಂದ ಬರುತ್ತಿವೆ ಅನ್ನೋದೆ ಗೊತ್ತಾಗಲ್ಲಾ. ಮಹಿಳೆಯರು ಮಕ್ಕಳು ಜೀವ ಕೈಲಿ ಹಿಡಿದು ಓಡಾಡಬೇಕು. ಆಸ್ಪತ್ರೆ ಸಿಬ್ಬಂದಿಗೆ ಕೊಟ್ಟಿರುವ ಕ್ವಾರ್ಟರ್ಸ್‌‌ನಲ್ಲಿ 32 ಕುಟುಂಬಗಳು ವಾಸಿಸುತ್ತಿವೆ. ಸಿಬ್ಬಂದಿಗಳ ಕುಟುಂಬಸ್ಥರು ಸಂಜೆಯಾದರೆ ಮನೆಯಿಂದಾಚೆ ಬರಲು ಭಯಪಡುತ್ತಾರೆ. ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಅವರು ಮುತುವರ್ಜಿ‌ ವಹಿಸಿ ಸೂಕ್ತ ಕ್ರಮಗಳನ್ನು ಜರುಗಿಸಬೇಕು. ಇಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು ಅನ್ನೋದು ಸ್ಥಳೀಯರ ಆಗ್ರಹ..

ಹುಬ್ಬಳ್ಳಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:36 pm, Mon, 3 July 23