ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ನಡೆಯುತ್ತಿದೆ: ಮಾಜಿ ಸಿಎಂ ಸಿದ್ದರಾಮಯ್ಯ

| Updated By: preethi shettigar

Updated on: Mar 20, 2022 | 5:07 PM

ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ನಡೆಯುತ್ತಿದೆ. ಧರ್ಮ ಇರೋದು ಮನುಷ್ಯರಿಗೋಸ್ಕರ. ಮನುಷ್ಯರು ಧರ್ಮಕ್ಕೋಸ್ಕರ ಅಲ್ಲ. ದೇಶದ ಶೂದ್ರ ವರ್ಗವೇ ಸಂಪತ್ತನ್ನ ಉತ್ಪಾದನೆ ಮಾಡೋದು. ಅದನ್ನ ಅನುಭವಿಸೋದು ಮಾತ್ರ ಮೇಲ್ಜಾತಿಯವರು‌ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ನಡೆಯುತ್ತಿದೆ: ಮಾಜಿ ಸಿಎಂ ಸಿದ್ದರಾಮಯ್ಯ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
Follow us on

ಹುಬ್ಬಳ್ಳಿ:  ನಮ್ಮಲ್ಲಿ ಜಾತಿ ವ್ಯವಸ್ಥೆ ಇದೆ. ನಾವೆಲ್ಲಾ ಆರ್ಜಿ ಹಾಕಿಕೊಂಡು ಹುಟ್ಟಿಲ್ಲ. ಹಾಗೇನಾದ್ರು ಅವಕಾಶ ಇದ್ರೆ, ಮೊದಲನೇ ನಂಬರ್ ಜಾತಿ ಯಾವುದಿದೆ ಅಲ್ಲಿ ಹುಟ್ಟಿಸು ಅಂತಿದ್ದೆ. ಜಾತಿ(Caste) ವ್ಯವಸ್ಥೆಯನ್ನ ಪಟ್ಟಭದ್ರ ಹಿತಾಸಕ್ತಿಗಳು ಇನ್ನಷ್ಟು ಗಟ್ಟಿ ಮಾಡ್ತಿದ್ದಾರೆ. ಧರ್ಮದ(Religion) ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ನಡೆಯುತ್ತಿದೆ. ಧರ್ಮ ಇರೋದು ಮನುಷ್ಯರಿಗೋಸ್ಕರ. ಮನುಷ್ಯರು ಧರ್ಮಕ್ಕೋಸ್ಕರ ಅಲ್ಲ. ದೇಶದ ಶೂದ್ರ ವರ್ಗವೇ ಸಂಪತ್ತನ್ನ ಉತ್ಪಾದನೆ ಮಾಡೋದು. ಅದನ್ನ ಅನುಭವಿಸೋದು ಮಾತ್ರ ಮೇಲ್ಜಾತಿಯವರು‌ ಎಂದು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.

ಶಿವಳ್ಳಿ ಜನರಿಗೋಸ್ಕರ ಬದುಕಿದ್ದರು: ಸಿದ್ದರಾಮಯ್ಯ

ಬಳಿಕ ಮಾತನಾಡಿದ ಅವರು, ಸಿ.ಎಸ್ ಶಿವಳ್ಳಿಯವರ ಮೂರನೇ ಪುಣ್ಯಸ್ಮರಣೆ ಇದೆ. ಅವರಿಗೆ ಮತ್ತೊಮ್ಮೆ ನಮನ ಸಲ್ಲಿಸೋಕೆ ಬಂದಿದ್ದೇನೆ. ಶಿವಳ್ಳಿ ಜನರಿಗೋಸ್ಕರ ಬದುಕಿದ್ದರು. ಅವರನ್ನ ಜನರು ಹೃದಯದಲ್ಲಿಟ್ಟುಕೊಂಡಿದ್ದಾರೆ. ಶಿವಳ್ಳಿ ಒರ್ವ ಅಪರೂಪದ ರಾಜಕಾರಣಿಯಾಗಿದ್ದ. ಅವರು ಯಾವತ್ತು ನನ್ನನ್ನ ಮಂತ್ರಿ ಮಾಡಿ ಅಂತ ಕೇಳಲಿಲ್ಲ. ನಾನೇ 2018 ರಲ್ಲಿ ಅವರಿಗೆ ಮಂತ್ರಿ ಮಾಡ್ತಿನಿ ಅಂತ ಹೇಳಿದೆ. ಶಿವಳ್ಳಿಯವರು ಅಧಿಕಾರ ಇದ್ರು ಸಾಮಾನ್ಯರಂತೆ ಇರ್ತಿದ್ರು. ಇವಾಗ ಎಂಎಲ್​ಎ ಆದ್ರೆ ಸಾಕು ಅಹಂ ಬಂದುಬಿಡುತ್ತೆ. ಶಿವಳ್ಳಿ ಇರೋವರೆಗೂ ಕುಸಮಾವತಿ ಅಡುಗೆ ಮನೆ ಬಿಟ್ಟು ಹೊರಗಡೆ ಬಂದಿರಲಿಲ್ಲ. ಆದ್ರೆ ನಿವೆಲ್ಲಾ ಆಶೀರ್ವಾದ ಮಾಡಿ ಅವರನ್ನ ಶಾಸಕಿ ಮಾಡಿದ್ದೀರಿ ಎಂದು ಕುಂದಗೋಳ ತಾಲೂಕಿನ ಯರಗುಪ್ಪಿಯ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ನಮ್ಮ ನೀರಿಕ್ಷೆ ಮೀರಿ ಕುಸುಮಾವತಿ ಕೆಲಸ ಮಾಡ್ತಿದ್ದಾರೆ. ಶಿವಳ್ಳಿ ನಡೆದ ದಾರಿಯಲ್ಲೇ ಕುಸಮಾವತಿ ನಡೆಯುತ್ತಿದ್ದಾರೆ. ಅವರು ಹಾಗೇ ನಡೆಯಲಿ ಎಂದು ಆಶಿಸುತ್ತೇನೆ. ಕುಸಮಾವತಿ ಮೇಲೆ ನಿಮ್ಮ ಆಶಿರ್ವಾದ ಇರಲಿ. ಮುಂದಿನ ಬಾರಿಯೂ ಶಾಸಕಿ ಮಾಡ್ತಿರಾ ಅಲ್ವಾ ಎಂದು ಸಿದ್ದರಾಮಯ್ಯ ಈ ವೇಳೆ ಜನರಲ್ಲಿ ಕೇಳಿದ್ದಾರೆ.

ವೇದಿಕೆ ಮೇಲೆ ಶಿವಳ್ಳಿ ಪುತ್ರನಿಗೆ ಕಿವಿಮಾತು ಹೇಳಿದ ಸಿದ್ದರಾಮಯ್ಯ

ಮೊದಲು ಚೆನ್ನಾಗಿ ಓದು. ಓದು ಮುಗಿದ ಮೇಲೆ ರಾಜಕೀಯ ಎಲ್ಲಾ ಇದ್ದೆ ಇದೆ. ತಂದೆ ರಾಜಕೀಯದಲ್ಲಿದ್ರೆ ಇವಾಗ ಎಲ್ರೂ ಎಂಎಲ್​ಎ ಆಗ್ತಿನಿ ಅಂತಾರೆ. ಅದು ಆಗಬಾರದು. ಶಿಕ್ಷಣ ಪಡೆದುಕೊಳ್ಳಬೇಕು. ಶಿಕ್ಷಣವೇ ಶಕ್ತಿ. ನಾನು ಲಾಯರ್ ಆಗಿದ್ದಕ್ಕೆ ರಾಜಕೀಯ ಬರೋಕೆ ಸಾಧ್ಯವಾಯ್ತು ಎಂದು ಸಿ.ಎಸ್.ಶಿವಳ್ಳಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಶಿವಳ್ಳಿ ಪುತ್ರನಿಗೆ ಬುದ್ಧಿ ಮಾತು ಹೇಳಿದ್ದಾರೆ.

ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಯಾರೆಂದು ನನಗೆ ಗೊತ್ತಿಲ್ಲ: ಸಿದ್ದರಾಮಯ್ಯ

ಒಂದಲ್ಲ ಒಂದುದಿನ ಕೇಸರಿ ಧ್ವಜವೇ ರಾಷ್ಟ್ರಧ್ವಜ ಆಗಬಹುದು ಎಂದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಇಂದು ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದು, ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಯಾರೆಂದು ನನಗೆ ಗೊತ್ತಿಲ್ಲ ನಡೀರಿ ಎಂದು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:

ಕೋರ್ಟ್ ನೀಡುವ ಆದೇಶಗಳನ್ನು ಎಲ್ಲ ಧರ್ಮದವರು ಪಾಲಿಸಲೇಬೇಕು ಎಂದರು ಸಿದ್ದರಾಮಯ್ಯ

ಹಿಜಾಬ್ ವಿಷಯದಲ್ಲಿ ಸಿದ್ದರಾಮಯ್ಯ ಸಾರ್ವಜನಿಕ ಮತ್ತು ಶೈಕ್ಷಣಿಕ ವಾತಾವರಣನ್ನು ಹಾಳುಮಾಡುತ್ತಿದ್ದಾರೆ: ಸಿಟಿ ರವಿ

Published On - 4:48 pm, Sun, 20 March 22