AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನಾರ್ದನ ರೆಡ್ಡಿ ಬಿಜೆಪಿಯಲ್ಲಿಲ್ಲ, ಹೀಗಾಗಿ ಅಧಿಕಾರಕ್ಕೆ ಬರುವುದಿಲ್ಲ: ಎಸ್​.ಆರ್​.ಹಿರೇಮಠ್

ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಯಲ್ಲಿಲ್ಲ, ಹೀಗಾಗಿ ಅಧಿಕಾರಕ್ಕೆ ಬರುವುದಿಲ್ಲ. ಯಡಿಯೂರಪ್ಪ ಸಹ ಪ್ರಾಂತೀಯ ಪಕ್ಷ ಸ್ಥಾಪಿಸಿದ್ದರು. ಆ ಮಹಾ ಕಳ್ಳ ಶ್ರೀರಾಮುಲು ಸಹ ಬಿಎಸ್‌ಆರ್ ಪಕ್ಷ ಮಾಡಿದ್ದರು. ಸುಗಲಮ್ಮ ದೇವಸ್ಥಾನಕ್ಕೆ ಧಕ್ಕೆ ಮಾಡಿ ದುರಾಸೆ ಮಾಡಿದ್ದರು. ಅದಾದ ಬಳಿಕವೆ ರೆಡ್ಡಿ ಕಪಾಳಕ್ಕೆ ಹೊಡಿಸಿಕೊಂಡು ಅರೆಸ್ಟ್ ಆಗಿ‌ ಹೋದ ಎಂದು ಸಾಮಾಜಿಕ ಹೋರಾಟಗಾರ ಎಸ್​.ಆರ್​.ಹಿರೇಮಠ್ ಹೇಳಿದ್ದಾರೆ.

ಜನಾರ್ದನ ರೆಡ್ಡಿ ಬಿಜೆಪಿಯಲ್ಲಿಲ್ಲ, ಹೀಗಾಗಿ ಅಧಿಕಾರಕ್ಕೆ ಬರುವುದಿಲ್ಲ: ಎಸ್​.ಆರ್​.ಹಿರೇಮಠ್
ಸಾಮಾಜಿಕ ಹೋರಾಟಗಾರ ಎಸ್​.ಆರ್​.ಹಿರೇಮಠ್
TV9 Web
| Edited By: |

Updated on: Feb 05, 2023 | 3:25 PM

Share

ಧಾರವಾಡ: ಮಾಜಿ ಸಚಿವ ಜನಾರ್ದನ ರೆಡ್ಡಿ (Janardhan Reddy) ಬಿಜೆಪಿಯಲ್ಲಿಲ್ಲ, ಹೀಗಾಗಿ ಅಧಿಕಾರಕ್ಕೆ ಬರುವುದಿಲ್ಲ. ಬಿ ಎಸ್​ ಯಡಿಯೂರಪ್ಪ (BS Yadiyurappa) ಸಹ ಪ್ರಾಂತೀಯ ಪಕ್ಷ ಸ್ಥಾಪಿಸಿದ್ದರು. ಆ ಮಹಾ ಕಳ್ಳ ಶ್ರೀರಾಮುಲು (Sriramulu) ಸಹ ಬಿಎಸ್‌ಆರ್ ಪಕ್ಷ ಮಾಡಿದ್ದರು. ಸುಗಲಮ್ಮ ದೇವಸ್ಥಾನಕ್ಕೆ ಧಕ್ಕೆ ಮಾಡಿ ದುರಾಸೆ ಮಾಡಿದ್ದರು. ಅದಾದ ಬಳಿಕವೆ ರೆಡ್ಡಿ ಕಪಾಳಕ್ಕೆ ಹೊಡಿಸಿಕೊಂಡು ಅರೆಸ್ಟ್ ಆಗಿ‌ ಹೋದ. ಇವರು ಏನೇ ಪ್ರಯತ್ನ ಮಾಡಿದರೂ ಇಬ್ಬರೂ ಬೀಳುತ್ತಾರೆ. ಸಾಮ್ರಾಜ್ಯಗಳು, ಸರ್ವಾಧಿಕಾರಿಗಳು ಕೆಳಗೆ ಇಳಿದರೆ ಅದು ಅವರಲ್ಲಿನ ವೈಫಲ್ಯದಿಂದ ಎಂದು ಸಾಮಾಜಿಕ ಹೋರಾಟಗಾರ ಎಸ್​.ಆರ್​.ಹಿರೇಮಠ್ (SR Hiremath) ಹೇಳಿದ್ದಾರೆ.

ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿ ಎಷ್ಟು ಸ್ಥಾನ ಗೆಲ್ಲುತ್ತೆ ಅನ್ನೋದು ಗೊತ್ತಿಲ್ಲ. ನಾನು ಎನ್ನುವ ಅಹಂಕಾರ ನಡೆಯುವುದಿಲ್ಲ. ಬಿ.ಶ್ರೀರಾಮುಲು ಕೂಡ ಸ್ವಂತ ಪಕ್ಷ ಕಟ್ಟಿದ್ದರು. ಆಗ ನಾವು ಶಿವಮೊಗ್ಗದಿಂದ ಬಳ್ಳಾರಿವರೆಗೆ ಜನಜಾಗೃತಿ ಮಾಡಿದ್ದೆವು. ಆಗ ಪ್ರತಿ ತಿಂಗಳು ಯಡಿಯೂರಪ್ಪಗೆ ಕಾಣಿಕೆ ಹೋಗುತ್ತಿತ್ತು. ಇದನನ್ನೇನು ರಾಮುಲು ಬೆವರು ಸುರಿಸಿ ತಂದಿದ್ದಾ? ಈ ಗಣಿ ಕಳ್ಳ ಅಕ್ರಮ ಹಣವನ್ನು ಕೊಟ್ಟಿದ್ದ. ಇಂಥವನು ಉದ್ದಟತನದಿಂದ ಬಿಆರ್‌ಎಸ್ ಪಕ್ಷ ಮಾಡಿದ್ದ. ಅವತ್ತು ರಾಮುಲು ಜೊತೆಗೆ ಹೋಗಿದ್ದ ಸ್ವಾಮೀಜಿಗಳನ್ನೂ ನಾನು ಪ್ರಶ್ನಿಸಿದ್ದೆ. ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು ಎಂದರು.

ನಾವು ಪ್ರಶ್ನೆ ಮಾಡಬೇಕು, ರೆಡ್ಡಿಯನ್ನು ಮೂರು ಜಿಲ್ಲೆಗಳಿಂದ ಗಡಿಪಾರು ಮಾಡಿದೆ. ಸೋಮಶೇಖರ ರೆಡ್ಡಿ ವಿರುದ್ಧವಾಗಿಯೇ ಇವರು ನಿಲ್ಲುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಚುನಾವಣೆಗೆ ಸ್ಪರ್ಧಿಸುವ ಹಕ್ಕಿದೆ. ಆದರೆ ಆ ಹಕ್ಕಿಗೆ ಅವರ ಅರ್ಹತೆ, ಹಿನ್ನೆಲೆ ಗಮನಿಸಬೇಕು. ಅವರು ಇಡಿಗಂಟು ಕಳೆದುಕೊಂಡರೂ ಅಚ್ಚರಿ ಇಲ್ಲ ಎಂದು ಹೇಳಿದ್ದಾರೆ.

ಪ್ರಚಾರಕ್ಕೆ ರೆಡ್ಡಿ ಪತ್ನಿ, ಮಗಳು ಬರುತ್ತಿದ್ದಾರೆ. ರೆಡ್ಡಿಗೆ ಕೈದಿ ನಂಬರ್ ಹಾಕಿದ ಫೋಟೊ ಬಂದಿತ್ತು. ಆಗ 2-3 ವಾರ ಮಗಳು ಶಾಲೆಗೆ ಹೋಗಿರಲಿಲ್ಲ. ಅಷ್ಟು ಅಪಮಾನ, ಅವಮಾನ ಆಗಿತ್ತು. ಇವರು ಈಗ ಹೇಗೆ ಜನರ ಮಧ್ಯೆ ಹೋಗುತ್ತಿದ್ದಾರೆ? ಗೆದ್ದ ಮೇಲೆ ಸಂವಿಧಾನದ ಚೌಕಟ್ಟಿನಲ್ಲಿ ಜನಹಿತ ಮಾಡಬೇಕು ಎಂದು ಮಾತನಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೈಕ್​ ಸವಾರನ ರಕ್ಷಿಸಲು ಹೋಗಿ ಕಾರಿಗೆ ಲಾರಿ ಡಿಕ್ಕಿ, ಮೂವರು ಸಾವು
ಬೈಕ್​ ಸವಾರನ ರಕ್ಷಿಸಲು ಹೋಗಿ ಕಾರಿಗೆ ಲಾರಿ ಡಿಕ್ಕಿ, ಮೂವರು ಸಾವು
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?